ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಆದರೆ ಮತಾಂತರದ ನಂತರ ಜಾತಿಗನುಸಾರ ಮೀಸಲಾತಿ ನೀಡಲು ನ್ಯಾಯಾಲಯದಿಂದ ನಕಾರ

ಚೆನ್ನೈ (ತಮಿಳುನಾಡು) – ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ. ಆದರೆ ಅದೇ ಸಮಯದಲ್ಲಿ ಮೀಸಲಾತಿಯ ಲಾಭವನ್ನು ಪಡೆಯುವ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.

1. ಈ ಪ್ರಕರಣದಲ್ಲಿ ಓರ್ವ ದಲಿತ ವ್ಯಕ್ತಿಯು ಮತಾಂತರವಾಗಿ ಕ್ರೈಸ್ತ ಪಂಥವನ್ನು ಸ್ವೀಕರಿಸಿದ್ದನು. ಈ ವ್ಯಕ್ತಿಯ ವಿವಾಹವು ದಲಿತ ಸಮಾಜದಲ್ಲಿನ ಓರ್ವ ಯುವತಿಯೊಂದಿಗೆ ಆಗಿತ್ತು. ಆದರೆ ಈ ಯುವತಿಯು ಮತಾಂತರವಾಗಲಿಲ್ಲ. ಈ ಸಂದರ್ಭದಲ್ಲಿ ಆ ವ್ಯಕ್ತಿಯು `ನನ್ನದು ಅಂತರ್ಜಾತೀಯ ವಿವಾಹವಾಗಿದೆ. ನನಗೆ ಸರಕಾರಿ ನೌಕರಿಗಳಲ್ಲಿ ಜಾತಿ ಆಧಾರಿತ ಮೀಸಲಾತಿಯ ಲಾಭ ಸಿಗಬೇಕು’ ಎಂದು ಅರ್ಜಿಯ ಮೂಲಕ ನ್ಯಾಯಾಲಯದಲ್ಲಿ ಮನವಿ ಮಾಡಿದ್ದನು.

2. ಇದರ ಆಲಿಕೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು `ದಲಿತ ವ್ಯಕ್ತಿಯು ಮತಾಂತರವಾದರೆ ಕಾನೂನಿನಗನುಸಾರ ಮೀಸಲಾತಿಗಾಗಿ ಆತನನ್ನು ಹಿಂದುಳಿದವನು ಎಂದು ತಿಳಿಯಲಾಗುತ್ತದೆ. ಆದರೆ `ಪರಿಶಿಷ್ಟ ಜಾತಿ’ಯಲ್ಲಿ ಅವನ ಪರಿಗಣನೆಯಾಗುವುದಿಲ್ಲ’ ಎಂದು ಹೇಳಿದೆ.

3. ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ ವ್ಯಕ್ತಿಯು ಆದಿ-ದ್ರವಿಡ ಸಮಾಜದೊಂದಿಗೆ ಸಂಬಂಧಿಸಿದ್ದನು. ಈ ಸಮಾಜವು ‘ಪರಿಶಿಷ್ಟ ಜಾತಿ’ಯಲ್ಲಿ ಬರುತ್ತದೆ. ಆದರೆ ಈ ವ್ಯಕ್ತಿಯು ಮತಾಂತರವಾಗಿ ಕ್ರೈಸ್ತ ಪಂಥವನ್ನು ಸ್ವೀಕರಿಸಿದ್ದಾನೆ. ಆದುದರಿಂದ ಆತನಿಗೆ `ಹಿಂದುಳಿದವ’ ಎಂಬ ಸ್ಥಾನ ದೊರೆತಿದೆ.