ಶಬರಿಮಲಾ ದೇವಸ್ಥಾನದ ಪ್ರಸಾದದಲ್ಲಿ’ಹಲಾಲ್ ಬೆಲ್ಲ’ದ ಬಳಕೆಯನ್ನು ತಡೆಯಲು ನ್ಯಾಯಾಲಯದಲ್ಲಿ ಅರ್ಜಿ

ಇದರ ವರದಿಯನ್ನು ಸಾದರಪಡಿಸುವಂತೆ ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಗೆ  ಕೇರಳ ಉಚ್ಚ ನ್ಯಾಯಾಲಯದಿಂದ ಆದೇಶ

ಪ್ರಸಾದದಲ್ಲಿ ‘ಹಲಾಲ್ ಬೆಲ್ಲ’ದ ಬಳಕೆ

ಕೊಚ್ಚಿ (ಕೇರಳ) – ಕೇರಳದಲ್ಲಿನ ಶಬರಿಮಲಾ ದೇವಸ್ಥಾನದಿಂದ ‘ಅರಾವಣಾ’ ಮತ್ತು ‘ಉನ್ನಿಯಪ್ಪಂ’ ಎಂಬ ಪ್ರಸಾದದ ತಯಾರಿಯಲ್ಲಿ ‘ಹಲಾಲ್ ಬೆಲ್ಲ’ವನ್ನು ಬಳಸಲಾಗುತ್ತದೆ. ಈ ಪ್ರಸಾದದಲ್ಲಿ ಹಲಾಲ್ ಬೆಲ್ಲದ ಬಳಕೆಯನ್ನು ತಡೆಯಲು ಎಸ್.ಜೆ .ಆರ್ ಕುಮಾರರವರು ಕೇರಳದ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯವು ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಗೆ ಇದರ ವರದಿಯನ್ನು ಸಾದರಪಡಿಸುವ ಆದೇಶ ನೀಡಿದೆ.

1. ಅರ್ಜಿಯಲ್ಲಿ ಈ ಪ್ರಸಾದಗಳ ವಿತರಣೆಯನ್ನು ತಕ್ಷಣ ತಡೆಯಬೇಕು ಮತ್ತು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದವನ್ನು ತಯಾರಿಸಲು ಈ ಬೆಲ್ಲವನ್ನು ಬಳಸಬಾರದು ಎಂಬ ಆದೇಶವನ್ನು ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಮತ್ತು ಅನ್ನ ಸುರಕ್ಷಾ ಆಯುಕ್ತರಿಗೆ ನೀಡುವಂತೆ ಬೇಡಿಕೆಯನ್ನು ಸಲ್ಲಿಸಲಾಗಿದೆ.

2. ಅರ್ಜಿಯ ಆಲಿಕೆಯ ಸಮಯದಲ್ಲಿ ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಮತ್ತು ಅನ್ನ ಸುರಕ್ಷಾ ಆಯುಕ್ತರು ನ್ಯಾಯಾಲಯಕ್ಕೆ ‘ಅರಾವಣಾ’ ಮತ್ತು ‘ಉನ್ನಿಯಪ್ಪಂ’ ಪ್ರಸಾದವನ್ನು ತಯಾರಿಸಲು ಬಳಸಲಾಗುವ ಬೆಲ್ಲದ ಮತ್ತು ಈ ಎರಡು ಪ್ರಸಾದಗಳ ವಿತರಣೆಯ ಮೊದಲು ಅವುಗಳ ಗುಣಮಟ್ಟವನ್ನು ಪ್ರಯೋಗಶಾಲೆಯಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

3. ಶಬರಿಮಲಾ ದೇವಸ್ಥಾನದಲ್ಲಿ ಎರಡು ತಿಂಗಳುಗಳ ವರೆಗೆ ನಡೆಯುವ ವಾರ್ಷಿಕ ‘ಮಂಡಲಮ್- ಮಕರವಿಳಕ್ಕು ಯಾತ್ರೆ’ಯು ಆರಂಭವಾಗಿದೆ. ಈ ಯಾತ್ರೆಯಲ್ಲಿ ಸಾವಿರಾರು ನಾಗರಿಕರು ಸಹ ಭಾಗಿಗಳಾಗುತ್ತಾರೆ. ಈ ಸಮಯದಲ್ಲಿ ಮೇಲಿನ ಪ್ರಸಾದವನ್ನು ಹಂಚಲಾಗುತ್ತದೆ.