‘ಬಾರ್ ಕೌನ್ಸಿಲಿಂಗ್ ಆಫ್ ಇಂಡಿಯಾ’ದ ಕ್ರಮ
ಲಕ್ಷ್ಮಣಪುರಿ (ಉತ್ತರಪ್ರದೇಶ) – ನಕಲಿ ವಾಹನ ವಿಮೆ ದಾವೆಯನ್ನು ಸಲ್ಲಿಸಿದ ಪ್ರಕರಣದಲ್ಲಿ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಉತ್ತರಪ್ರದೇಶದ ೨೮ ನ್ಯಾಯವಾದಿಗಳನ್ನು ಅಮಾನತುಗೊಳಿಸಿದೆ. ಈ ಹಗರಣ ಬೆಳಕಿಗೆ ಬಂದ ನಂತರ ಅಲಾಹಾಬಾದ ಉಚ್ಚ ನ್ಯಾಯಾಲಯವು ವಿಶೇಷ ತನಿಖಾ ದಳಕ್ಕೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ಹಗರಣದಿಂದ ವಿಮಾ ಕಂಪನಿಗೆ ೩೦೦ ಕೋಟಿ ರೂಪಾಯಿ ವಂಚನೆಯಾಗಿದೆ. ೩ ತಿಂಗಳಲ್ಲಿ ಈ ನ್ಯಾಯವಾದಿಗಳ ವಿಚಾರಣೆ ನಡೆಸಿ ಅದರ ವರದಿಯನ್ನು ಪ್ರಸ್ತುತಪಡಿಸಲು ನ್ಯಾಯಾಲಯವು ಉತ್ತರಪ್ರದೇಶ ಬಾರ್ ಕನ್ಸಿಲಿಂಗ್.ಗೆ ಆದೇಶ ನೀಡಿದೆ. ಕಳೆದ ೬ ವರ್ಷಗಳಿಂದ ಈ ಹಗರಣದ ತನಿಖೆ ನಡೆಸುತ್ತಿದೆ. (ತನಿಖೆ ಆರು ವರ್ಷದಿಂದ ನಡೆಯುತ್ತಿದ್ದರೆ, ಆರೋಪಿಗಳಿಗೆ ಶಿಕ್ಷೆ ಎಷ್ಟು ವರ್ಷಗಳ ನಂತರ ಆಗಲಿದೆ ? ಹೀಗೆ ಆಮೆಗತಿಯಲ್ಲಿ ನಡೆಯುವ ತನಿಖೆಯಿಂದ ಏನು ಪ್ರಯೋಜನ ? – ಸಂಪಾದಕರು)
Bar Council of India suspends 28 advocates in UP for malpractices of filing fake claim-cases https://t.co/a67D0fDq9P
— The Times Of India (@timesofindia) November 22, 2021