ಯಾರ ವೃತ್ತಿಯಲ್ಲಿಯೇ ಈಶ್ವರೀಗುಣಗಳಿವೆಯೋ ಅವರಿಂದಲೇ ರಾಜ್ಯಾಡಳಿತವು ಆದರ್ಶಪ್ರಾಯವಾಗಿ ನಡೆಸಲು ಆಗಬಹುದು
ಕ್ರಿಮಿನಲ್ ಅಪರಾಧಗಳಲ್ಲಿ ನಿರಪರಾಧಿಯೆಂದು ಬಿಡುಗಡೆಯಾದರೂ ನ್ಯಾಯಾಲಯದ ನೋಂದಣಿಯಲ್ಲಿ ಮತ್ತು ‘ಗೂಗಲ್’ ನಂತಹ ‘ಎಲ್ಲ ಸರ್ಚ್ ಇಂಜಿನ್’ಗಳಲ್ಲಿ ಆ ವ್ಯಕ್ತಿಯ ವಿರುದ್ಧದ ಎಲ್ಲ ಅರೋಪಗಳ ಮಾಹಿತಿ ಕಾಣಿಸುತ್ತದೆ. ಅಲ್ಲಿ ಅವನ ಹೆಸರು ಒಬ್ಬ ಆರೋಪಿಯೆಂದು ನೋಂದಣಿಯಾಗಿರುತ್ತದೆ. ಆದ್ದರಿಂದ ಅವನು ನಿರಪರಾಧಿಯಾಗಿದ್ದರೂ ಅವನ ಮಾನಹಾನಿಯಾಗುತ್ತದೆ. ಆದ್ದರಿಂದ ಈ ನೋಂದಣಿಯನ್ನು ತೆಗೆದುಹಾಕಬೇಕೆಂದು ವಿನಂತಿಸುವ ಅರ್ಜಿಗಳು ನ್ಯಾಯಾಲಯಕ್ಕೆ ಬರುತ್ತಾ ಇರುತ್ತವೆ. ಈ ಕುರಿತಾದ ವಿಶ್ಲೇಷಣೆ ನೋಡೋಣ.
೧. ನ್ಯಾಯಾಲಯದಿಂದ ನಿರಪರಾಧಿಯೆಂದು ಬಿಡುಗಡೆ ಆದರೂ ನ್ಯಾಯಾಲಯದ ಜಾಲತಾಣದಲ್ಲಿ ಸಂಬಂಧಿತರ ಹೆಸರು ಆರೋಪಿಯೆಂದು ನೋಂದಣಿ ಇರುತ್ತದೆ !
‘ಇತ್ತೀಚೆಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಒಂದು ವಿಭಿನ್ನವಾದ ಖಟ್ಲೆಗೆ ನಿರ್ಣಯ ನೀಡಿತು. ಅರ್ಜಿದಾರನ ವಿರುದ್ಧ ಓರ್ವ ಮಹಿಳೆಯು ಬಲಾತ್ಕಾರ ಮತ್ತು ಮೋಸ ಮಾಡಿದ ಆರೋಪವನ್ನು ಮಾಡಿದ್ದಳು. ಕೆಳ ನ್ಯಾಯಾಲಯದಲ್ಲಿ ಈ ಬಗ್ಗೆ ಖಟ್ಲೆ ನಡೆಯಿತು ಹಾಗೂ ನ್ಯಾಯಾಲಯ ಅವನನ್ನು ಆರೋಪಿಯೆಂದು ಹೇಳಿ ಶಿಕ್ಷೆ ವಿಧಿಸಿತು. ಈ ನಿರ್ಣಯದ ವಿರುದ್ಧ ಅವನು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದನು. ಉಚ್ಚ ನ್ಯಾಯಾಲಯವು ಅವನನ್ನು ಬಲಾತ್ಕಾರ ಮತ್ತು ವಂಚನೆ ಆರೋಪದಿಂದ ನಿರಪರಾಧಿಯೆಂದು ಮುಕ್ತಗೊಳಿಸಿತು. ಅನಂತರವೂ ‘ಗೂಗಲ್’ನಲ್ಲಿ ಇಂದಿಗೂ ಅಪರಾಧ ನೋಂದಣಿಯು ಕಾಣಿಸುತ್ತಿದೆ. ಅದೇ ರೀತಿ ಅವನ ವಿರುದ್ಧದ ಗಂಭೀರವಾದ ಆರೋಪಗಳ ಉಲ್ಲೇಖವೂ ಕಂಡು ಬರುತ್ತದೆ. ಈ ನೋಂದಣಿಯನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಹೀಗೆ ನಿರಪರಾಧಿಯಾಗಿ ಬಿಡುಗಡೆಯಾಗಿದ್ದಕ್ಕೆ ಏನೂ ಅರ್ಥವಿರುವುದಿಲ್ಲ.
೨. ಮಡಗಾವ್ ಸ್ಫೋಟದಲ್ಲಿ ಸಿಲುಕಿದ ಹಿಂದುತ್ವನಿಷ್ಠರು ನಿರಪರಾಧಿಗಳೆಂದು ಮುಕ್ತರಾದರೂ ಅನೇಕ ಮಾಧ್ಯಮಗಳಲ್ಲಿ ಅವರು ಅಪರಾಧಿಗಳೆಂದು ನೋಂದಣಿ ಇರುವುದು
ಇವೆಲ್ಲ ಪ್ರಕರಣಗಳ ವಿಚಾರ ಮಾಡುವಾಗ ಒಂದು ವಿಷಯವು ಸ್ಪಷ್ಟವಾಗಿ ಅರಿವಾಗುತ್ತದೆ, ಅದೆಂದರೆ ಕಾಂಗ್ರೆಸ್ ಸರಕಾರವು ಮತಾಂಧರನ್ನು ಓಲೈಸಲು ‘ಹಿಂದೂ ಉಗ್ರವಾದ’ವನ್ನು ಸಿದ್ಧಪಡಿಸಲು ಪ್ರಯತ್ನಿಸಿತು. ಅದರಿಂದ ೧೯೯೩ ರಿಂದ ಇಂದಿನ ವರೆಗೆ ಅನೇಕ ನಿರಪರಾಧಿ ಹಿಂದೂಗಳ ಹೆಸರನ್ನು ಉಗ್ರವಾದಿ ಖಟ್ಲೆಗಳಲ್ಲಿ ಸೇರಿಸಿಕೊಳ್ಳಲಾಗಿದೆ. ‘ಹಿಂದೂಗಳೇ ಬಾಂಬ್‌ಸ್ಫೋಟ ಮಾಡುತ್ತಾರೆ’, ಎಂದು ತೋರಿಸಲಿಕ್ಕಾಗಿ ಕಾಂಗ್ರೆಸ್ ಮಾಲೇಗಾವ್ ಬಾಂಬ್ ಸ್ಫೋಟ ಖಟ್ಲೆಯಲ್ಲಿ ದೀಪಾವಳಿಯ ಸಮಯದಲ್ಲಿಯೇ ಸನಾತನದ ಅಮಾಯಕ ಸಾಧಕರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಿತ್ತು. ಅದರಲ್ಲಿ ಇಬ್ಬರು ಉಚ್ಚ ಶಿಕ್ಷಿತ ಅಭಿಯಂತರರು ಕೂಡ ಇದ್ದರು. ಇವರೆಲ್ಲರೂ ೪ ವರ್ಷ ಸೆರೆಮನೆಯಲ್ಲಿದ್ದರು. ಸನಾತನದ ಈ ಎಲ್ಲ ಸಾಧಕರನ್ನು ನಿರಪರಾಧಿಗಳೆಂದು ಮುಕ್ತಗೊಳಿಸಲಾಯಿತು, ಅಷ್ಟು ಮಾತ್ರವಲ್ಲ, ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ನ್ಯಾಯಾಲಯವು ತನ್ನ ತೀರ್ಪುಪತ್ರದಲ್ಲಿ ‘ಸನಾತನ ಸಂಸ್ಥೆ’ಯ ಹೆಸರನ್ನು ಉದ್ದೇಶಪೂರ್ವಕವಾಗಿ ಆರೋಪಪತ್ರದಲ್ಲಿ ಉಲ್ಲೇಖಿಸಲಾಯಿತು, ಎಂದು ಹೇಳಿದೆ. ಅನಂತರವೂ ‘ಎನ್.ಐ.ಎ.’ಯು ಮುಂಬಯಿ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯ ಪೀಠದಲ್ಲಿ ಅರ್ಜಿ ಸಲ್ಲಿಸಿ ೩ ವರ್ಷ ಈ ಖಟ್ಲೆಯನ್ನು ನಡೆಸಿತು. ಅವರ ನಿರ್ದೋಷತ್ವಕ್ಕೆ ಉಚ್ಚ ನ್ಯಾಯಾಲಯವೂ ಮನ್ನಣೆ ನೀಡಿತು.
ಹೀಗಿರುವಾಗ ಇಂದಿನವರೆಗೆ ಅವರ ಮೇಲಾದ ಅನ್ಯಾಯ, ಹಿಂಸೆಯ ವಿಷಯದಲ್ಲಿ ಯಾವುದೇ ದಿನಪತ್ರಿಕೆಗಳು ಅಥವಾ ಇಲೆಕ್ಟ್ರಾನಿಕ್ ಮಾಧ್ಯಮಗಳು ಕಣ್ಣೀರು ಹರಿಸಲಿಲ್ಲ. ಅಲ್ಲದೇ ಅವರನ್ನು ನಿರಪರಾಧಿಗಳೆಂದು ಮುಕ್ತಗೊಳಿಸಿದ ವಾರ್ತೆಯನ್ನೂ ಪ್ರಕಟಿಸಲಿಲ್ಲ. ಇಂದಿಗೂ ನ್ಯಾಯಾಲಯದ ನೋಂದಣಿ ಹಾಗೂ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಅವರೆಲ್ಲರೂ ಬಾಂಬ್‌ಸ್ಫೋಟದ ಅಪರಾಧಿಗಳೆಂಬ ಉಲ್ಲೇಖ ಕಂಡುಬರುತ್ತದೆ. ತನಿಖಾ ದಳಗಳು ಅನೇಕ ಬಾರಿ ನಿಜವಾದ ಅಪರಾಧಿಗಳನ್ನು ರಕ್ಷಿಸಲು ಅಮಾಯಕರನ್ನು ಅಪರಾಧಗಳಲ್ಲಿ ಸಿಲುಕಿಸುತ್ತವೆ. ಆದ್ದರಿಂದ ಅವರಿಗೆ ಸಮಾಜದಲ್ಲಿ ತೀವ್ರ ಮುಜುಗರವಾಗುತ್ತದೆ. ಕೆಲವು ವರ್ಷಗಳಲ್ಲಿ ಅವರು ನಿರಪರಾಧಿಗಳೆಂದು ಮುಕ್ತರಾಗುತ್ತಾರೆ; ಆದರೆ ಇಂತಹ ಆರೋಪಗಳ ಆಧಾರದಲ್ಲಿ ಚುನಾವಣೆಯ ಕಣಕ್ಕಿಳಿಯಲು ಅವರು ರಾಜಕಾರಣಿಗಳಲ್ಲ. ಆದ್ದರಿಂದ ಇಂತಹವರ ಜೀವನ ಧ್ವಂಸವಾಗುತ್ತಿದೆ.
೩. ಮದ್ರಾಸ್ ಉಚ್ಚ ನ್ಯಾಯಾಲಯವು ಈ ಖಟ್ಲೆಯ ವಿಷಯದಲ್ಲಿ ಎಲ್ಲ ಸರಕಾರಿ ಮತ್ತು ಉಚ್ಚ ನ್ಯಾಯಾಲಯದ ಅಧಿಕಾರಿಗಳಿಗೆ ಅಭಿಪ್ರಾಯ ಮಂಡಿಸಲು ಹೇಳುವುದು !
‘ಆರೋಪಿ ನಿರಪರಾಧಿಯೆಂದು ಬಿಡುಗಡೆಯಾದ ನಂತರ ಅವನಿಗೆ ಮುಜುಗರ ಉಂಟಾಗುವಂತಹ ಉಲ್ಲೇಖ ಎಲ್ಲಿಯೂ ಇರಬಾರದು’, ಎಂಬ ವಿಷಯವು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಒಪ್ಪಿಗೆಯಾಯಿತು. ಈ ವಿಷಯದಲ್ಲಿ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರಕಾರದ ವಕೀಲರು ಹಾಗೂ ಉಚ್ಚ ನ್ಯಾಯಾಲಯದ ಎಲ್ಲ ಬಾರ್ ಅಸೋಸಿಯೇಶನ್‌ನ ಸದಸ್ಯರಿಗೆ ತಮ್ಮ ತಮ್ಮ ವಿಚಾರ ಮತ್ತು ತರ್ಕವನ್ನು ಮಂಡಿಸಲು ವಿನಂತಿಸಿತು. ‘ಇದೊಂದು ಅಪರೂಪದ ಖಟ್ಲೆಯಾಗಿದೆ ಹಾಗೂ ಈ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಲಿಕ್ಕಿದೆ’, ಎಂದು ನ್ಯಾಯಾಲಯವು ಹೇಳಿತು.
ಇದಕ್ಕೆ ಸಂಬಂಧಿಸಿ ವಿವಿಧ ಹಳೆಯ ಖಟ್ಲೆಗಳ ಚರ್ಚೆಯಾಯಿತು ಹಾಗೂ ಅನೇಕ ನಿರ್ಣಯಗಳ ವಿಚಾರ ವಿನಿಮಯವಾಯಿತು. ಇಲ್ಲಿ ಅರ್ಜಿಯನ್ನು ದಾಖಲಿಸುವ ವ್ಯಕ್ತಿ ಈ ಅರ್ಜಿಯನ್ನು ದಾಖಲಿಸುವಾಗ ಯಾವ ನಿರ್ಣಯಗಳ ಆಧಾರವನ್ನು ತೆಗೆದುಕೊಂಡಿದ್ದನು ಮತ್ತು ಈ ಕೆಳಗಿನ ನಿರ್ಣಯಗಳ ವಿಷಯದಲ್ಲಿಯೂ ಚರ್ಚೆ ನಡೆಯಿತು. ಇದರಲ್ಲಿ ಪ್ರಾಮುಖ್ಯವಾಗಿ
೩ ಅ. ಸರ್ವೋಚ್ಚ ನ್ಯಾಯಾಲಯದ ‘ನರೇಶ ಶ್ರೀಧರ ಮಿರಜಕರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ೧೯೬೭’ ಖಟ್ಲೆ
೩ ಆ. ೧೯೯೪ ರಲ್ಲಿ ಸರ್ವೋಚ್ಚ ನ್ಯಾಯಾಲಯದ ‘ತಮಿಳ ವೀಕ್ಲಿ’ಯ ಸಂಪಾದಕ ರಾಜ ಗೋಪಾಲರ ವಿರುದ್ಧ ತಮಿಳುನಾಡು ರಾಜ್ಯ
೩ ಇ. ೨೦೧೮ ರಲ್ಲಿನ ಸರ್ವೋಚ್ಚ ನ್ಯಾಯಾಲಯದಲ್ಲಿ ತ್ರಿಪಾಠಿ ಇವರು ದಾಖಲಿಸಿದ ಖಟ್ಲೆ
ಈ ಮೂರೂ ಖಟ್ಲೆಗಳ ತೀರ್ಪುಪತ್ರದ ಬಗ್ಗೆ ಚರ್ಚಿಸಲಾಯಿತು. ಅವುಗಳ ವಿಷಯದಲ್ಲಿ ಸಂಕ್ಷಿಪ್ತದಲ್ಲಿ ತಿಳಿದುಕೊಳ್ಳೋಣ.
ಭಾರತದಲ್ಲಿ ಸದ್ಯ ಇರುವ ಕಾನೂನಿನಲ್ಲಿ ಆರೋಪಿ ನಿರಪರಾಧಿಯೆಂದು ಬಿಡುಗಡೆಯಾದಾಗ ಅವನ ಹೆಸರನ್ನು ಕಾರ್ಯಾಲಯದಿಂದ ತೆಗೆಯಬೇಕು ಅಥವಾ ಅವನನ್ನು ಆರೋಪಿಯೆಂದು ಉಲ್ಲೇಖಿಸಬಾರದು ಎಂಬ ವ್ಯವಸ್ಥೆ ಎಲ್ಲಿಯೂ ಇಲ್ಲ. ನ್ಯಾಯಾಲಯದ ಮುಂದೆ ಖಟ್ಲೆಯನ್ನು ದಾಖಲಿಸಲು ಆವಶ್ಯಕವಿರುವ ಆ ಕಾನೂನು ಅಥವಾ ಇತರ ಮಾರ್ಗದರ್ಶಕ ತತ್ತ್ವಗಳು ಸದ್ಯ ಲಭ್ಯವಿಲ್ಲ. ಇಂತಹ ಕೆಲವು ಖಟ್ಲೆಗಳಲ್ಲಿ ನಿರ್ಣಯ ನೀಡುವಾಗ ನ್ಯಾಯಾಲಯಕ್ಕೆ ಹಿಂದೆ ನೀಡಿರುವ ತೀರ್ಪುಪತ್ರವನ್ನು ಅವಲೋಕಿಸುವ ಅವಶ್ಯಕತೆಯಿದೆ. ಆದ್ದರಿಂದ ನ್ಯಾಯಾಲಯ ಈ ಖಟ್ಲೆಯ ನಿರ್ಣಯ ನೀಡುವಾಗ ಮುಂದಿನ ಖಟ್ಲೆಗಳ ಉದಾಹರಣೆಯನ್ನು ನೀಡಿದರೆ ಅದರಲ್ಲಿ ‘ಆರೋಪಿಯ ಹೆಸರನ್ನು ತೆಗೆಯಬೇಕು’, ಎನ್ನುವ ನಿರ್ಣಯವಿರಲಿಲ್ಲ.
೩ ಆ ೧. ‘ನರೇಶ ಶ್ರೀಧರ ಮಿರಜಕರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ೧೯೬೭’ ಖಟ್ಲೆ
ನರೇಶ ಮಿರಜಕರ್ ಇವರು ‘ಬ್ಲಿಟ್ಝ್’ ನಿಯತಕಾಲಿಕೆಯ ಮುಂಬಯಿಯ ಪತ್ರಕರ್ತರಾಗಿದ್ದರು. ನ್ಯಾಯಾಲಯದಲ್ಲಿ ‘ಠಾಕರ್ ಕೃಷ್ಣರಾಜ ವಿರುದ್ಧ ಆರ್.ಕೆ. ಕರಂಜಿಯಾ’ ಇವರಲ್ಲಿ ೩ ಲಕ್ಷಗಳ ಮಾನನಷ್ಟ ಮೊಕದ್ದಮೆ ನಡೆದಿತ್ತು. ಆ ಮೊಕದ್ದಮೆಯಲ್ಲಿ ಭಾಯಿಚಂದ ಗೌಡಾ ಇವರ ಸಾಕ್ಷಿಯನ್ನು ತೆಗೆದುಕೊಳ್ಳಲಾಗಿತ್ತು. ಆ ಖಟ್ಲೆಯ ಸಂಪೂರ್ಣ ವಾರ್ತೆಯು ‘ಬ್ಲಿಟ್ಝ್’ನಲ್ಲಿ ಬರುತ್ತಿತ್ತು. ನರೇಶ ಮಿರಜಕರ್ ಇವನು ೨೪.೯.೧೯೬೦ ರ ದೈನಿಕದಲ್ಲಿ ‘ಸ್ಕಾಂಡಲ್ ಬಿಗರ್ ದ್ಯಾನ್ ಮುಂಧ್ರಾ’ ಈ ಶೀರ್ಷಿಕೆಯಲ್ಲಿ ‘ಬಹುದೊಡ್ಡ ಪ್ರಮಾಣದಲ್ಲಿ ಹಗರಣವಾಗಿದೆ’, ಎಂಬ ಲೇಖನವನ್ನು ಪ್ರಕಟಿಸಿದ್ದನು. ಈ ಲೇಖನದಲ್ಲಿ ‘೩ ನಕಲಿ ಹ್ಯಾಂಡ್‌ಲೂಮ್ ಕಂಪನಿಗಳನ್ನು ತೋರಿಸಿ ಅವರಿಗೆ ಸಿಲ್ಕ್ ಆಮದು ಮಾಡಲಾಯಿತು ಹಾಗೂ ದೊಡ್ಡ ಪ್ರಮಾಣದಲ್ಲಿ ಸರಕಾರದ ತೆರಿಗೆಯನ್ನು ಮುಳುಗಿಸಲಾಯಿತು; ಆದ್ದರಿಂದ ಇದರಲ್ಲಿ ಬಹುದೊಡ್ಡ ಭ್ರಷ್ಟಾಚಾರವಾಯಿತು’, ಎಂದು ಹೇಳಲಾಯಿತು. ಟೈಮ್ಸ್ ಆಫ್ ಇಂಡಿಯಾ ಸಣ್ಣ ವಾರ್ತೆಯನ್ನು ನೀಡಿತ್ತು. ಭಾಯಿಚಂದ ಗೌಡಾ ಇವರನ್ನು ಕರಂಜಿಯಾ ಇವರ ವಿನಂತಿಯ ಮೇರೆಗೆ ಪಾಟಿಸವಾಲಿಗಾಗಿ ಕರೆಯಲಾಯಿತು. ಗೌಡಾ ಇವರು ನ್ಯಾಯಾಧೀಶ ತಾರಕುಂಡೆ ಇವರಿಗೆ ಮನವಿ ಮಾಡುತ್ತಾ, ‘ನಾನು ಸಾಕ್ಷಿ ನೀಡುತ್ತಿದ್ದೇನೆ, ಅದರ ಧ್ವನಿಚಿತ್ರೀಕರಣ ಯಾವುದೇ ಪತ್ರಿಕೆಯಲ್ಲಿ ಬರದಂತೆ ನೋಡಿಕೊಳ್ಳಿ. ನಾನು ಮೊದಲ ದಿನ ನೀಡಿರುವ ಸಾಕ್ಷಿಯ ವಾರ್ತೆಯಿಂದ ನನ್ನ ವ್ಯವಸಾಯದ ಮೇಲೆ ಪರಿಣಾಮವಾಗಿದ್ದು ನನಗೆ ದೊಡ್ಡ ಆರ್ಥಿಕ ಹಾನಿಯಾಗಿದೆ’ ಎಂದರು. ಅದರ ಕಾರಣ ಹೇಗಿತ್ತೆಂದರೆ, ಭಾಯಿಚಂದ ಗೌಡಾ ಇವರು ನ್ಯಾಯಾಲಯದಲ್ಲಿ ನೀಡಿದ ಸಾಕ್ಷಿ ಮತ್ತು ಆದಾಯ ತೆರಿಗೆಯ ವಿಭಾಗದಲ್ಲಿದ್ದ ಮಾಹಿತಿಯಲ್ಲಿ ವ್ಯತ್ಯಾಸವಿತ್ತು. ಈ ವ್ಯತ್ಯಾಸವನ್ನು ಅನುಸರಿಸಿಯೇ ಬ್ಲಿಟ್ಝ್ ದೈನಿಕದಲ್ಲಿ ವಾರ್ತೆ ಪ್ರಸಿದ್ಧವಾಗಿತ್ತು. ಗೌಡಾ ಇವರ ವಿನಂತಿ ಯನ್ನು ನ್ಯಾಯಾಲಯ ಸ್ವೀಕರಿಸಿತು. ಅನಂತರ ನ್ಯಾಯಾಲಯ ಎಲ್ಲ ದೈನಿಕಗಳಿಗೆ, ‘ಗೌಡಾ ಇವರ ಸಾಕ್ಷಿಯನ್ನು ಯಾವುದೇ ದೈನಿಕದಲ್ಲಿ ಪ್ರಕಟಿಸಬಾರದು’, ಎಂದು ಮೌಖಿಕ ಆದೇಶ ನೀಡಿತು. ನ್ಯಾಯಾಲಯದ ಈ ಆದೇಶದ ನಂತರ ಪತ್ರಕರ್ತ ನರೇಶ ಮಿರಜಕರ್ ಇವರು ನ್ಯಾಯಾಲಯಕ್ಕೆ ಈ ಆದೇಶವನ್ನು ಲಿಖಿತರೂಪದಲ್ಲಿ ನೀಡಬೇಕೆಂದು ವಿನಂತಿಸಿದರು. ಆಗ ನ್ಯಾಯಾಲಯವು, ‘ನಮ್ಮ ಆದೇಶವು ಮೌಖಿಕವಾಗಿರಲಿ ಅಥವಾ ಲಿಖಿತವಾಗಿರಲಿ ನಿಮಗೆ ಅದು ಕಡ್ಡಾಯವಾಗಿರುತ್ತದೆ’, ಎಂದಿತು. ಈ ರೀತಿಯಲ್ಲಿ ನ್ಯಾಯಾಲಯ ಕೇವಲ ಮೌಖಿಕ ಆದೇಶ ನೀಡಿತು.
ಇದೊಂದೇ ವಿಷಯದ ಆಧಾರದಲ್ಲಿ ನರೇಶ ಮಿರಜಕರ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದರು. ಇದರಲ್ಲಿ ಅವರು ‘ಪತ್ರಕರ್ತರ ಹಕ್ಕನ್ನು ಹತ್ತಿಕ್ಕಲಾಗುತ್ತದೆ’, ಎನ್ನುವ ತರ್ಕವನ್ನು ಮಂಡಿಸಿದರು. ಅವರು ಹೀಗೆ ಕೂಡ ಹೇಳಿದರು, “ನ್ಯಾಯಾಲಯದ ಎಲ್ಲ ಚಟುವಟಿಕೆಗಳನ್ನು ಎಲ್ಲರಿಗೂ ತೆರೆದಿಡಬೇಕು. ಈ ಚಟುವಟಿಕೆಗಳಲ್ಲಿ ಪಕ್ಷಕಾರರ ಸಹಿತ ಯಾವುದೇ ವ್ಯಕ್ತಿಗೆ ಬರಲು ಅವಕಾಶ ಇರುತ್ತದೆ ಹಾಗೂ ನಿರ್ಣಯವನ್ನು ಕೂಡ ಪಕ್ಷಕಾರನ ಮುಂದೆಯೇ ನೀಡಲಾಗುತ್ತದೆ. ಇವೆಲ್ಲ ಕಲಮ್‌ಗಳು ಭಾರತೀಯ ಸಂವಿಧಾನದಲ್ಲಿರುವಾಗ ನ್ಯಾಯಾಲಯ ಇಂತಹ ಬಂಧನವನ್ನು ಹೇರುವುದು ಅನಧಿಕೃತವಾಗಿದೆ”. ಇದರಲ್ಲಿ ಸವೋಚ್ಚ ನ್ಯಾಯಾಲಯ ಒಂದು ಬೇರೆಯೇ ಕಾರಣವನ್ನು ನೀಡುತ್ತಾ ನರೇಶ ಮಿರಜಕರ್ ಇವರ ಅರ್ಜಿಯನ್ನು ತಳ್ಳಿ ಹಾಕಿತು. “ಯಾವಾಗ ಯಾವುದೇ ಖಟ್ಲೆಯಲ್ಲಿ ನ್ಯಾಯಾಧೀಶರು ಆದೇಶ ನೀಡುವರೋ, ಆಗ ಪಕ್ಷಕಾರ ಅಥವಾ ತ್ರಯಸ್ಥರಿಗೆ ಅಪೀಲು ಮಾಡಲು ಅವಕಾಶವಿದೆ ಹಾಗೂ ನೀವು ಅಷ್ಟೇ ಆದೇಶದ ವಿರುದ್ಧ ಅಪೀಲು ಮಾಡಬೇಕು” ಎಂದು ನ್ಯಾಯಾಲಯ ಹೇಳಿತು. ‘ರಿಟ್ ಅರ್ಜಿಯನ್ನು ಆಲಿಸಲು ಸಾಧ್ಯವಿಲ್ಲ’, ಎಂದು ಹೇಳಿ ಅರ್ಜಿಗೆ ತೀರ್ಪು ನೀಡಿತು. ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ತೀರ್ಪು ನೀಡುವಾಗ ಈ ನಿರ್ಣಯದ ಆಧಾರದಲ್ಲಿ ಯುಕ್ತಿವಾದ ನಡೆಯಿತು.
೩ ಆ ೨. ಕೆ.ಆರ್. ರಾಜಗೋಪಾಲರ ವಿರುದ್ಧ ತಮಿಳುನಾಡು ರಾಜ್ಯ ಖಟ್ಲೆ
ಮದ್ರಾಸ್ ಉಚ್ಚನ್ಯಾಯಾಲಯದಲ್ಲಿ ಕೆ.ಆರ್. ರಾಜಗೋಪಾಲರ ಖಟ್ಲೆಯ ಆಧಾರವನ್ನು ತೆಗೆದುಕೊಳ್ಳಲಾಯಿತು. ಕೆ.ಆರ್.ರಾಜಗೋಪಾಲರು ‘ತಮಿಳ ವೀಕ್ಲಿಯ ಸಂಪಾದಕರಾಗಿದ್ದರು. ಈ ನಿಯತಕಾಲಿಕೆಯಲ್ಲಿ ಯಾವ ಆರೋಪಿಯ ಆತ್ಮಕಥೆ ಪ್ರಕಾಶನ ವಾಗುತ್ತಿತ್ತೋ, ಅವನ ವಿರುದ್ಧ ೬ ಜನರ ಕೊಲೆಯ ಆರೋಪವಿತ್ತು ಹಾಗೂ ಅವನು ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದನು. ಅವನ ಆತ್ಮಕಥೆಯಲ್ಲಿ ಅವನು ಸೆರೆಮನೆಯಲ್ಲಿರುವಾಗ, “ನಾನು ಮಾಡಿರುವ ಅಪರಾಧಕ್ಕೆ ಪೊಲೀಸ್ ಅಧೀಕ್ಷಕರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳಂತಹ ದೊಡ್ಡ ವ್ಯಕ್ತಿಗಳು ಹೊಣೆಯಾಗಿದ್ದಾರೆ ಅಥವಾ ಇದರಲ್ಲಿ ಭಾಗಿಗಳಾಗಿದ್ದಾರೆ, ಎಂದು ಹೇಳಿದ್ದನು. ಅನಂತರ ‘ಈ ಆರೋಪಿಯ ಆತ್ಮಚರಿತ್ರೆಯನ್ನು ಪ್ರಕಟಿಸಬಾರದು, ಎಂದು ತಮಿಳುನಾಡಿನ ಪೊಲೀಸ್ ಮಹಾಸಂಚಾಲಕರು ಆದೇಶಿಸಿದರು. ಆದರೆ ಅವರ ಆದೇಶ ವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಈ ಅರ್ಜಿಯ ಆಲಿಕೆಯನ್ನು ಮಾಡುವಾಗ ನ್ಯಾಯಾಲಯವು ಮತ್ತೊಮ್ಮೆ ಸಿ.ಪಿ.ಸಿ, ಸಿ.ಆರ್.ಪಿ.ಯ ಕೆಲವು ಕಲಮ್‌ಗಳನ್ನು ಎತ್ತಿ ಹಿಡಿದು, “ಅಫಿಶಿಯಲ್ ಸೀಕ್ರೇಟ್ಸ್ ಏಕ್ಟ್ ೧೯೨೩ ಕ್ಕನುಸಾರ ದಿನಪತ್ರಿಕೆಗಳಿಗೆ ಕೆಲವು ನಿರ್ಬಂಧಗಳಿರುತ್ತವೆ; ಆದರೆ ಇಂತಹ ನಿರ್ಬಂಧಗಳು ಪಬ್ಲಿಕ್ ರಿಕಾರ್ಡ್ ಅಥವಾ ನ್ಯಾಯಾಲಯದ ರೆಕಾರ್ಡ್ ಆಗಿರುತ್ತದೆ. ಆದ್ದರಿಂದ ವಾರ್ತೆ ಮಾಡುವಾಗ ಪತ್ರಕರ್ತರ ಮೇಲೆ ಇಂತಹ ನಿರ್ಬಂಧಗಳನ್ನು ಹೇರುವುದು ತಪ್ಪಾಗುತ್ತದೆ. ನಿಮಗೆ ಎಲ್ಲ ವಾರ್ತೆಗಳು ಅನಧಿಕೃತ ಅಥವಾ ತಪ್ಪಾಗಿದೆ ಎಂದು ಅನಿಸಿದರೆ ನೀವು ಪತ್ರಕರ್ತನ ಅಥವಾ ‘ತಮಿಳ ವೀಕ್ಲಿಯ ವಿರುದ್ಧ ದಾವೆ ಹೂಡಬಹುದು. ಅದರ ಬಗ್ಗೆ ನ್ಯಾಯಾಲಯ ಖಂಡಿತ ವಿಚಾರ ಮಾಡುವುದು; ಆದರೆ ಮಹಾಸಂಚಾಲಕರಿಗೆ ‘ಯಾವುದೇ ಮಾಹಿತಿ ಮುದ್ರಿಸಬೇಡಿ, ಎಂದು ಹೇಳುವ ಅಧಿಕಾರವಿಲ್ಲ, ಎನ್ನುವ ತರ್ಕವನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಮಾಡಲಾಯಿತು ಹಾಗೂ ಅದನ್ನು ಸ್ವೀಕರಿಸಲಾಯಿತು. ಆದ್ದರಿಂದ ದೈನಿಕದಲ್ಲಿ ಆ ವಾರ್ತೆ ಪ್ರಸಿದ್ಧವಾಗುವುದಕ್ಕೆ ಇದ್ದ ಅಡಚಣೆ ದೂರವಾಯಿತು.
೩ ಆ ೩. ನ್ಯಾಯಾಲಯದ ಕಲಾಪಗಳನ್ನು ನೇರ ಪ್ರಸಾರದ ವಿಷಯದಲ್ಲಿ ಸಚಿನ್ ತ್ರಿಪಾಠಿ ಇವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ
ನ್ಯಾಯಾಲಯದ ಕಲಾಪಗಳನ್ನು ನೇರ ಪ್ರಸಾರ ವಿಷಯದಲ್ಲಿ ಸಚಿನ್ ತ್ರಿಪಾಠಿ ಇವರು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದ್ದರು. ಅದರ ಬಗ್ಗೆಯೂ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ವಿಚಾರವಿನಿಮಯ ಮಾಡಲಾಯಿತು. ಇಂದು ತಂತ್ರಜ್ಞಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಗತಿಯಾಗುತ್ತಿದೆ. ‘ಹೇಗೆ ಜನರಿಗೆ ದೂರಚಿತ್ರವಾಹಿನಿಯ ಮೂಲಕ ಸಂಸತ್ತಿನ ಅಧಿವೇಶನವನ್ನು ನೋಡಲು ಸಾಧ್ಯವಾಗುತ್ತದೆಯೋ, ಅದೇ ರೀತಿ ಜನರಿಗೆ ನ್ಯಾಯಾಲಯದ ಕಲಾಪಗಳನ್ನು ಕೂಡ ನೇರ ಪ್ರಸಾರದಿಂದ ನೋಡಲು ಸಿಗಬೇಕು’, ಎಂದು ಸಚಿನ್ ತ್ರಿಪಾಠಿ ಇವರು ಅರ್ಜಿಯನ್ನು ದಾಖಲಿಸಿದ್ದರು. ಹೀಗಾದರೆ ‘ನ್ಯಾಯಾಲಯದ ಕಲಾಪಗಳು ಹೇಗೆ ನಡೆಯುತ್ತವೆ, ಎಂಬುದು ಜನರಿಗೆ ತಿಳಿಯುವುದು ಹಾಗೂ ಅವರ ಮನಸ್ಸಿನಲ್ಲಿ ನ್ಯಾಯಾಲಯದ ವಿಷಯದಲ್ಲಿ ವಿಶ್ವಾಸ ಮೂಡಬಹುದು, ಎಂಬುದು ತ್ರಿಪಾಠಿ ಇವರ ತರ್ಕವಾಗಿತ್ತು. ಈ ಖಟ್ಲೆಯ ನಿರ್ಣಯ ನೀಡುವಾಗ ಸರ್ವೋಚ್ಚ ನ್ಯಾಯಾಲಯದ ಮೂರು ಸದಸ್ಯರ ಪೀಠವು, “ಇಂದು ತಂತ್ರಜ್ಞಾನವು ಸಮೃದ್ಧವಾಗಿದೆ. ನಾವು ನ್ಯಾಯಾಲಯದ ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡುವ ಮೊದಲು ಅಧಿಕೃತ ಜಾಲತಾಣವನ್ನು ಆರಂಭಿಸೋಣ. ಅದರಲ್ಲಿ ನೀವು ಖಟ್ಲೆಯ ಹೆಸರು, ಕ್ರಮಾಂಕ, ಅದರಲ್ಲಿ ಭಾಗವಹಿಸಿದ ಪಕ್ಷಕಾರರು, ನಿರ್ಣಯಪತ್ರಗಳು ಮತ್ತು ಆ ಖಟ್ಲೆಯ ಸ್ಥಿತಿಯನ್ನು ನೋಡಬಹುದು. ಅದರ ಹೊರತು ನಾವು ‘ಲೈವ್ ಸ್ಟ್ರೀಮಿಂಗ್ ಆರಂಭಿಸುವ ವಿಚಾರವನ್ನು ಮಾಡುತ್ತಿದ್ದೇವೆ. ಅರ್ಜಿದಾರರು ಸೂಚಿಸಿದಂತೆ ನಮ್ಮ ಪ್ರಯತ್ನ ಮುಂದುವರಿದಿದೆ; ಆದರೆ ಅದರ ನಿರ್ದಿಷ್ಟ ಸಮಯಮಿತಿ ಹೇಳಲು ಸಾಧ್ಯವಿಲ್ಲ, ಎಂದು ಹೇಳಿತು.
ಇಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಎರಡು ವಿಷಯಗಳನ್ನು ನಮೂದಿಸಿದರು. ಭಾರತೀಯ ವಿವಾಹವಿಚ್ಛೇದನಾ ಕಾನೂನು, ಲೈಂಗಿಕ ಶೋಷಣೆ ಖಟ್ಲೆ, ಪತಿ-ಪತ್ನಿಯರ ವೈವಾಹಿಕ ಖಟ್ಲೆಗಳ ಸಮಯದಲ್ಲಿ ಕೊಡುವ ಸಾಕ್ಷಿ ಇತ್ಯಾದಿ ವಿಷಯಗಳನ್ನು ಪ್ರಸಿದ್ಧಪಡಿಸಲು ಸಾಧ್ಯವಿಲ್ಲ. ಇದರ ದಕ್ಷತೆಯನ್ನು ತೆಗೆದುಕೊಳ್ಳ ಬೇಕಾಗುವುದು, ಎಂದು ಆದೇಶ ನೀಡಿದರು.
೪. ಮದ್ರಾಸ್ ಉಚ್ಚ ನ್ಯಾಯಾಲಯವು ಜಾಲತಾಣದಲ್ಲಿನ ನಿರಪರಾಧಿ ಆರೋಪಿಗಳ ಹೆಸರನ್ನು ಕೈಬಿಡುವ ಅರ್ಜಿಯನ್ನು ತಳ್ಳಿ ಹಾಕಿತು !
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ದೊಡ್ಡ ಪ್ರಮಾಣದಲ್ಲಿ ಪಾರದರ್ಶಕತೆಯ ವಿಚಾರ ಮಾಡುತ್ತಿವೆ. ಆದ್ದರಿಂದ ಯಾವುದೇ ಆರೋಪಿ ನಿರಪರಾಧಿಯೆಂದು ಬಿಡುಗಡೆಯಾದರೆ ಅವನ ಹೆಸರನ್ನು ಆ ಖಟ್ಲೆಯಿಂದ ಅಥವಾ ನ್ಯಾಯಾಲಯದ ಅಧಿಕೃತ ಜಾಲತಾಣದಿಂದ ತೆಗೆಯುವುದಕ್ಕೆ ಮನ್ನಣೆ ಕೊಡಲು ಸಾಧ್ಯವಿಲ್ಲ. ಭಾರತ ಸರಕಾರ ಅಂತಹ ಯಾವುದೇ ಕಾನೂನು ಮಾಡಿಲ್ಲ ಹಾಗೂ ಸವೋಚ್ಚ ನ್ಯಾಯಾಲಯದ ಇಂತಹ ನಿರ್ಣಯಪತ್ರವೂ ಇಲ್ಲ. ಆದ್ದರಿಂದ ಮದ್ರಾಸ್ ಉಚ್ಚ ನ್ಯಾಯಾಲಯವು ೩ ಆಗಸ್ಟ್ ೨೦೨೧ ರಂದು ಈ ಅರ್ಜಿಯನ್ನು ತಳ್ಳಿ ಹಾಕಿತು.
೫. ನ್ಯಾಯಾಲಯದ ಜಾಲತಾಣದಲ್ಲಿ ನೋಂದಣಿಯನ್ನು ತೆಗೆಯುವ ವಿಷಯದಲ್ಲಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಕೆ
ಜಯದೀಪ ಮಿರಚಂದಾನಿ ಮತ್ತು ಇನ್ನೊಬ್ಬರು ಇತ್ತೀಚೆಗಷ್ಟೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅವರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಖಟ್ಲೆಯನ್ನು ನ್ಯಾಯಾಲಯವು ತಳ್ಳಿ ಹಾಕಿತ್ತು; ಆದರೆ ನ್ಯಾಯಾಲಯದ ಜಾಲತಾಣದಲ್ಲಿ ಅವರನ್ನು ಆರೋಪಿಗಳೆಂದು ಗುರುತಿಸಲಾಗುತ್ತಿತ್ತು. ಈ ಖಟ್ಲೆಯ ಆಧಾರದಲ್ಲಿ ಅವರನ್ನು ಅವಮಾನಿಸುವ ಅನೇಕ ಲೇಖನಗಳು ಜಾಲತಾಣದಲ್ಲಿ ಇನ್ನೂ ಇವೆ. ಈ ಪ್ರಕರಣದಲ್ಲಿ ನ್ಯಾಯಾಲಯ ಪ್ರತಿವಾದಿಗೆ ಕಾರಣಕೇಳಿ ನೋಟಿಸ್ ಜ್ಯಾರಿ ಮಾಡುವ ಆದೇಶ ನೀಡಿತು. ಆದ್ದರಿಂದ ಅವರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಅಪಾಯಕ್ಕೊಳಗಾಗಿದ್ದು ಅವರಿಗೆ ವ್ಯವಸಾಯ ಮಾಡುವಾಗ ಕೂಡ ಅಡಚಣೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ‘ನಿರಪರಾಧಿಯಾಗಿ ಬಿಡುಗಡೆಯಾಗಿರುವ ವ್ಯಕ್ತಿಯ ಮೇಲಿನ ಕ್ರಿಮಿನಲ್ ಅಪರಾಧಗಳ ನೋಂದಣಿ ಜಾಲತಾಣದಲ್ಲಿರುವುದು ಅಯೋಗ್ಯವಾಗಿದೆ. ಆದ್ದರಿಂದ ಇಂತಹ ನೋಂದಣಿಗಳನ್ನು ತೆಗೆಯಬೇಕು’, ಎಂದು ಅನಿಸುತ್ತದೆ.
೬. ಹೀಗೆ ಎಲ್ಲ ಖಟ್ಲೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದರೆ ವಿವಿಧ ಉಚ್ಚ ನ್ಯಾಯಾಲಯಗಳ ಸಮಯ ಉಳಿಯುವುದು !
ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯಪತ್ರ ಇಲ್ಲದಿರುವುದರಿಂದ ವಿವಿಧ ನ್ಯಾಯಾಲಯಗಳಲ್ಲಿ ಇಂತಹ ಖಟ್ಲೆಗಳು ದಾಖಲಾಗುತ್ತವೆ. ಆದ್ದರಿಂದ ಈ ವಿಷಯಗಳನ್ನು ನಿರ್ವಹಿಸಲು ನ್ಯಾಯಾಧೀಶರ ಸಮಯ ಹೋಗುತ್ತದೆ. ಇವೆಲ್ಲ ಖಟ್ಲೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಆದ್ದರಿಂದ ವಿವಿಧ ಉಚ್ಚ ನ್ಯಾಯಾಲಯಗಳ ಸಮಯ ಉಳಿಯುವುದು. ಈಗ ಒಂದೇ ತಿಂಗಳಲ್ಲಿ ಒಂದೇ ವಿಷಯದಲ್ಲಿ ಮದ್ರಾಸ್ ಮತ್ತು ದೆಹಲಿಯ ಉಚ್ಚ ನ್ಯಾಯಾಲಯಗಳಲ್ಲಿ ಆಲಿಕೆ ನಡೆಯಿತು. ದೆಹಲಿಯ ನಿರ್ಣಯ ಬೇರೆಯಾಗಿರಲು ಸಾಧ್ಯವಿಲ್ಲ; ಆದರೆ ಸಮಯ ವ್ಯರ್ಥವಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ಇವೆಲ್ಲ ವಿಷಯಗಳ ವಿಚಾರ ಮಾಡಲಾಗುವುದು.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷದ್ ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (೨೮.೦೮.೨೦೨೧)