ಸಲ್ಮಾನ ಖುರ್ಷಿದರವರ ಪುಸ್ತಕದ ಮೇಲೆ ನಿರ್ಬಂಧ ಹೇರಲು ದೆಹಲಿಯಲ್ಲಿನ ನ್ಯಾಯಾಲಯದ ನಿರಾಕರಣೆ

ಕೇಂದ್ರ ಸರಕಾರವು ಸ್ವತಃ ಈ ಹಿಂದೂದ್ವೇಷಿ ಪುಸ್ತಕದ ಮೇಲೆ ನಿರ್ಬಂಧ ಹೇರಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! ಕಾಂಗ್ರೆಸ್ಸಿನ ಅಧಿಕಾರ ಸಮಯದಲ್ಲಿ ಮುಸಲ್ಮಾನರು ಬೇಡಿಕೆಯನ್ನಿಟ್ಟ ನಂತರ ಸಲ್ಮಾನ ರಶ್ದಿಯವರ ‘ಸೆಟನಿಕ್ ವ್ಹರ್ಸಸ್’ ಎಂಬ ಪುಸ್ತಕದ ಮೇಲೆ ತಕ್ಷಣ ನಿರ್ಬಂಧ ಹೇರಲಾಗಿತ್ತು. ಕಾಂಗ್ರೆಸ್ ಹೀಗೆ ಮಾಡಬಹುದಾದರೆ ಈಗಿನ ಸರಕಾರವೂ ಮಾಡಬಹುದು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ನವದೆಹಲಿ – ದೆಹಲಿಯಲ್ಲಿನ ಪಟಿಯಾಲ ಹೌಸ್ ನ್ಯಾಯಾಲಯವು ಕಾಂಗ್ರೆಸ್ಸಿನ ಹಿರಿಯ ನೇತಾರ ಸಲ್ಮಾನ ಖುರ್ಷಿದರವರ ‘ಸನ್ರೈಸ್ ಒವ್ಹರ್ ಆಯೋಧ್ಯ’ ಎಂಬ ಹಿಂದೂದ್ವೇಷಿ ಪುಸ್ತಕದ ಪ್ರಕಾಶನ ಮತ್ತು ಅದರ ಮಾರಾಟದ ಮೇಲೆ ನಿರ್ಬಂಧ ಹೇರುವ ಬಗ್ಗೆ ಹಿಂದೂ ಸೇನೆಯ ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾಯಾಲಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರದಿಂದ ನಿರ್ಬಂಧವನ್ನು ಹೇರಲು ಸಾಧ್ಯವಿಲ್ಲ, ಅರ್ಜಿದಾರರು ಪುಸ್ತಕದ ವಿರುದ್ಧ ಪ್ರಚಾರ ಮಾಡಬಹುದು ಹಾಗೆಯೇ ಧಾರ್ಮಿಕ ಭಾವನೆಗಳಿಗೆ ನೋವಾಗಿದ್ದರಿಂದ ಪುಸ್ತಕದಲ್ಲಿನ ಅಂಶಗಳನ್ನು ಖಂಡಿಸಬಹುದು ಎಂದು ಹೇಳಿದೆ.