ಶಬರಿಮಲಾ ದೇವಸ್ಥಾನದ ನೈವೇದ್ಯಕ್ಕೆ ಬಳಸುವ ಬೆಲ್ಲದ ಪ್ಯಾಕೆಟ್ ಮೇಲೆ ‘ಹಲಾಲ್’ ಎಂದು ಬರೆದಿರುವ ಬಗ್ಗೆ ‘ತ್ರಾವಣಕೊರ್ ದೇವಸ್ವಂ ಬೋರ್ಡ್’ನಿಂದ ಸ್ವೀಕೃತಿ
ಪ್ರಸಿದ್ಧ ಹಿಂದೂ ದೇವಾಲಯದ ನೈವೇದ್ಯಗಳಿಗೆ ‘ಹಲಾಲ್’ ಬೆಲ್ಲದ ಉಪಯೋಗ ಏಕೆ ? ಇದು ಹಿಂದೂದ್ರೋಹವಾಗಿದ್ದು ಭಕ್ತರ ನಂಬಿಕೆದ್ರೋಹವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಅಪರಾಧ ದಾಖಲಿಸಿ ಅವರನ್ನು ಸೆರೆಮನೆಗೆ ಅಟ್ಟಬೇಕು ! ಇದಕ್ಕಾಗಿ ಹಿಂದೂಗಳು ಮತ್ತು ಅವರ ಸಂಘಟನೆಗಳೂ ಮುಂದಾಳತ್ವ ವಹಿಸಬೇಕು !
ತಿರುವನಂತಪುರಂ (ಕೇರಳ) – ಶಬರಿಮಲೈ ದೇವಸ್ಥಾನದ ‘ಅರಾವಣಾ’ ಮತ್ತು ‘ಅಪ್ಪಪಂ’ ನೈವೇದ್ಯಗಳನ್ನು ತಯಾರಿಸಲು ‘ಹಲಾಲ್’ ಬೆಲ್ಲವನ್ನು ಬಳಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಆದೇಶಿಸಿದೆ. ಅರ್ಜಿದಾರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಎಸ್.ಜೆ.ಆರ್. ಕುಮಾರ್ ಇವರು ಪ್ರಧಾನ ಅರ್ಚಕರ ಅಭಿಪ್ರಾಯ ತಿಳಿಸುವಂತೆ ಬೇಡಿಕೆ ಮಾಡಿದ್ದರು. ದೇವಸ್ಥಾನದ ವ್ಯವಸ್ಥಾಪನೆಯನ್ನು ನೋಡುವ ‘ತ್ರಾವಣಕೊರ್ ದೇವಸ್ವಂ ಬೋರ್ಡ್’ ಈ ಮೊದಲು ನ್ಯಾಯಾಲಯದಲ್ಲಿ, ಪ್ರಸಾದದಲ್ಲಿ ಬಳಸುವ ಬೆಲ್ಲದ ಪ್ಯಾಕೇಟ್ ಮೇಲೆ ‘ಹಲಾಲ್’ ಎಂದು ಬರೆದು ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಅಂತಹ ಬೆಲ್ಲವನ್ನು ಈ ವರ್ಷದಿಂದ ಬಳಸಲಾಗುತ್ತಿದೆ. ಈ ಬೆಲ್ಲವನ್ನು ಸೆಪ್ಟೆಂಬರ್ ೨೦೨೧ ರಲ್ಲಿ ಪರೀಕ್ಷಿಸಿದಾಗ, ಇದು ಮನುಷ್ಯನು ತಿನ್ನಲು ಯೋಗ್ಯವಾಗಿಲ್ಲ ಎಂದು ಕಂಡುಬಂದಿದೆ. ನಂತರ ಅದನ್ನು ಹರಾಜು ಹಾಕಲಾಯಿತು. ಈ ಬೆಲ್ಲವನ್ನು ಪಶು ಆಹಾರ ತಯಾರಿಸುವ ಸಂಸ್ಥೆಗೆ ನೀಡಲಾಗಿದೆ ಎಂದು ಹೇಳಿದರು.
೧. ಕುಮಾರ್ ಇವರು ನೀಡಿದ ಮಾಹಿತಿ ಸುಳ್ಳು ಮತ್ತು ಆಧಾರರಹಿತ ಎಂದು ‘ತ್ರಾವಣಕೊರ್ ದೇವಸ್ವಂ ಬೋರ್ಡ್’ ಆರೋಪಿಸಿದೆ. ಸದ್ಯ ‘ಅರಾವಣಾ’ ಮತ್ತು ‘ಅಪ್ಪಮ್’ ಇದರ ಮಾರಾಟಕ್ಕೆ ತಡೆ ನೀಡಿದ್ದರಿಂದ ‘ಬೋರ್ಡ್’ಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. (ಇದು ‘ತ್ರಾವಣಕೊರ್ ದೇವಸ್ವಂ ಬೋರ್ಡ್’ಗೆ ಒಂದು ರೀತಿಯಲ್ಲಿ ವಿಧಿಸಿರುವ ಶಿಕ್ಷೆಯೇ ಆಗಿದೆ ಎಂದು ಹೇಳಬಹುದು. ಇನ್ನು ಮುಂದೆ ‘ಬೋರ್ಡ್’ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಬಾರದು, ಇದರಿಂದ ಪಾಠ ಕಲಿಯಬೇಕು ! – ಸಂಪಾದಕರು)
೨. ಕೇರಳದ ಆಡಳಿತಾರೂಢ ಸಿಪಿಐ (ಎಂ)ನ ಹಿರಿಯ ಅಧಿಕಾರಿ ಮತ್ತು ‘ಬೋರ್ಡ್’ನ ಅಧ್ಯಕ್ಷ ಅನಂತಗೋಪಾಲ್ ಇವರು ಮಾತನಾಡುತ್ತಾ, ದೇವಸ್ಥಾನದ ತೇಜೋವಧೆಗಾಗಿ ಮತ್ತು ನೈವೇದ್ಯದ ಮಾರಾಟವನ್ನು ಕಡಿಮೆ ಮಾಡಲು ಇಂತಹ ವದಂತಿಗಳನ್ನು ಹರಡಲಾಗುತ್ತಿದೆ ನಾವು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸೈಬರ್ ಇಲಾಖೆಯ ಸಹಾಯವನ್ನೂ ಪಡೆಯುತ್ತಿದ್ದೇವೆ ಎಂದು ಹೇಳಿದರು. (ಇಲ್ಲಿ ‘ಬೋರ್ಡ್’ನಿಂದಲೇ ನ್ಯಾಯಾಲಯದಲ್ಲಿ ಒಪ್ಪಿಗೆ ನೀಡುತ್ತಿರುವಾಗ ಇಲ್ಲಿ ವದಂತಿ ಹಬ್ಬಿಸುವುದಕ್ಕೂ ಏನು ಸಂಬಂಧ ? ಈ ರೀತಿ ದಾರಿ ತಪ್ಪಿಸುವ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)