ಸಮಾನ ನಾಗರಿಕ ಕಾನೂನು ಅಗತ್ಯವಾಗಿದ್ದು ಸಂವಿಧಾನದ 44 ನೇ ವಿಧಿಯ ಅಡಿಯಲ್ಲಿ ಕ್ರಮ ಅಗತ್ಯವಿದೆ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಈ ಹಿಂದೆ, ಸರ್ವೋಚ್ಚ ನ್ಯಾಯಾಲಯವು ಹಲವಾರು ಬಾರಿ ಹಾಗೂ ವಿವಿಧ ಉಚ್ಚ ನ್ಯಾಯಾಲಯಗಳ ವಿವಿಧ ಅರ್ಜಿಗಳನ್ನು ಆಲಿಸುವಾಗ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಸಲಹೆ ನೀಡಿದೆ; ಆದರೆ ಇದುವರೆಗೆ ಯಾವುದೇ ಪಕ್ಷದ ಸರಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗಿನ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ !- ಸಂಪಾದಕರು 

ಪ್ರಯಾಗರಾಜ (ಉತ್ತರಪ್ರದೇಶ) – ದೇಶಕ್ಕೆ ಸಮಾನ ನಾಗರಿಕ ಕಾನೂನಿನ ಅಗತ್ಯವಿದೆ ಮತ್ತು ಸಂವಿಧಾನದ 44 ನೇ ಕಲಮ್ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅಂತರ್ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ 17 ಅರ್ಜಿಗಳ ಆಲಿಕೆಯ ಸಮಯದಲ್ಲಿ ಅಭಿಪ್ರಾಯಪಟ್ಟಿದೆ. ‘ಕೇಂದ್ರ ಸರ್ಕಾರವು ಕಲಮ್ 44 ರ ನಿಬಂಧನೆಗಳನ್ನು ಜಾರಿಗೆ ತರಲು ಒಂದು ಸಮಿತಿಯನ್ನು ಸ್ಥಾಪಿಸಲು ವಿಚಾರ ಮಾಡಬೇಕು. ನಾಗರಿಕರಿಗೆ ಒಂದೇ ರೀತಿಯ ಕಾನೂನನ್ನು ನಿರ್ಧರಿಸಲು ರಾಜ್ಯವು ಪ್ರಯತ್ನಿಸಲಿದೆ’, ಎಂದು ನ್ಯಾಯಾಲಯ ಹೇಳಿದೆ.

ಉಚ್ಚ ನ್ಯಾಯಾಲಯವು, ಅಂತಧರ್ಮೀಯ ವಿವಾಹವಾಗುವವರನ್ನು ಅಪರಾಧಿಗಳಂತೆ ವರ್ತಿಸಬಾರದು, ಅದಕ್ಕಾಗಿ ಮೊದಲು ಸಂಸತ್ತಿನಲ್ಲಿ ಒಂದು ಕೌಟುಂಬಿಕ ಕಾನೂನು ರೂಪಿಸುವುದು ಕಾಲಕ್ಕೆ ಅಗತ್ಯವಿದೆ ಸಂಸತ್ತು ಇದರಲ್ಲಿ ಮಧ್ಯಪ್ರವೇಶಿಸಬೇಕು. ದೇಶದಲ್ಲಿ ವಿವಿಧ ಮದುವೆ ಮತ್ತು ನೋಂದಣಿ ಕಾನೂನುಗಳ ಅಗತ್ಯವಿದೆಯೇ ? ಅಥವಾ ಒಂದು ಕೌಟುಂಬಿಕ ಕಾನೂನಿನ ವ್ಯಾಪ್ತಿಗೆ ಇವೆಲ್ಲವೂ ಬರಬೇಕು, ಈ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದೆ.