ಲೈಂಗಿಕ ಭಾವನೆಯಿಂದ ಎಲ್ಲಿ ಸ್ಪರ್ಶಿಸಿದರೂ, ಅದು ಲೈಂಗಿಕ ಕಿರುಕುಳವೇ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ವಿವಸ್ತ್ರಗೊಳಿಸದೆ ಸತತವಾಗಿ ಸ್ಪರ್ಶಿಸುವುದು, ಅಂದರೆ ಲೈಂಗಿಕ ಅತ್ಯಾಚಾರವಲ್ಲ’, ಎಂದು ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ ಉಚ್ಚನ್ಯಾಯಾಲಯದ ನಾಗಪೂರ ನ್ಯಾಯಪೀಠವು ಓರ್ವ ಬಾಲ ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಹಾಗೂ ಲೈಂಗಿಕ ಉದ್ದೇಶದಿಂದ ಮಾಡಿದ ಯಾವುದೇ ಸ್ಪರ್ಶ ಲೈಂಗಿಕ ಶೋಷಣೆಯೇ ಆಗಿದೆ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ಲೈಂಗಿಕ ಶೋಷಣೆಯ ಪ್ರಕರಣದ ಆರೋಪಿಗೆ ಮತ್ತೊಮ್ಮೆ ‘ಪಾಕ್ಸೋ’ ಕಾಯಿದೆಯ ಕಲಂನ ಅಂತರ್ಗತವಾಗಿ ಆರೋಪಿಯೆಂದು ನಿರ್ಧರಿಸಿತು. ಸರ್ವೋಚ್ಚ ನ್ಯಾಯಾಲಯವು ಸ್ಪರ್ಶವು ಬಟ್ಟೆಯ ಮೇಲಾಗಿರಲಿ ಅಥವಾ ‘ಸ್ಕಿನ ಟೂ ಸ್ಕಿನ’ (ಶರೀರಕ್ಕೆ ಶರೀರದ ನೇರ ಸ್ಪರ್ಶವಾಗುವುದು) ಇದರ ಮೇಲೆ ಚರ್ಚೆ ನಡೆಸುತ್ತಾ ಕುಳಿತರೆ, ಆಗ ಪಾಕ್ಸೋ ಕಾಯಿದೆಯ ಉದ್ದೇಶವೇ ಬದಿಗೆ ಸರಿದಂತಾಗುತ್ತದೆ ಎಂದು ಹೇಳಿದೆ.

ಮುಂಬೈ ಉಚ್ಚ ನ್ಯಾಯಾಲಯದ ನಾಗಪುರ ನ್ಯಾಯಪೀಠವು ನೀಡಿದ ತೀರ್ಪಿನಲ್ಲಿ’ ‘ಯಾರಾದರೂ ಸಣ್ಣ ಹುಡುಗಿಯ ಕೈ ಹಿಡಿದುಕೊಂಡು ಅಥವಾ ಪ್ಯಾಂಟಿನ ಚೇನ್ ಬಿಚ್ಚುವುದು, ಈ ವಿಷಯಗಳು ಲೈಂಗಿಕ ಶೋಷಣೆಯ ಅಂತರ್ಗತ ಬರುವುದಿಲ್ಲ. ‘ಪಾಕ್ಸೋ’ನ ಅಂತರ್ಗತ ಈ ವಿಷಯಗಳನ್ನು ಲೈಂಗಿಕ ಕಿರುಕುಳ ಎಂದು ಹೇಳಲು ಆಗುವುದಿಲ್ಲ. ಬಾಲ ಲೈಂಗಿಕ ಅತ್ಯಾಚಾರವನ್ನು ಸಾಬೀತು ಪಡಿಸಲು ಶರೀರಕ್ಕೆ ಶರೀರದ ನೇರ ಸ್ಪರ್ಶವಾಗುವುದು ಅಗತ್ಯವಾಗಿದೆ. ಕೇವಲ ಶರೀರವನ್ನು ದಬ್ಬುವುದು ಅಥವಾ ತಿಳಿಯದೇ ಶರೀರವನ್ನು ಸ್ಪರ್ಶಿಸುವುದಕ್ಕೆ, ಲೈಂಗಿಕ ಕಿರುಕುಳ ಎಂದು ಹೇಳಲು ಸಾಧ್ಯವಿಲ್ಲ.’ ಎಂದು ಹೇಳಿ ನ್ಯಾಯಾಲಯವು ಆರೋಪಿಗೆ ಶಿಕ್ಷೆಯನ್ನು ರದ್ದು ಪಡಿಸಿತ್ತು. ನಾಗಪುರ ನ್ಯಾಯಪೀಠದ ಈ ತೀರ್ಪಿಗೆ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮರುಸವಾಲು ನೀಡಿತ್ತು.