ಪಾಕ್ ಮತ್ತು ಮತಾಂತರ!

ಅಂದಿನ ಕಾಂಗ್ರೆಸ್ ಸರಕಾರಕ್ಕಿಂತ ಇಂದಿನ ಭಾಜಪ ಸರಕಾರವು ಪಾಕ್‌ನ ವಿರುದ್ಧ ಅಕ್ರಮಣಕಾರಿ ನಿಲುವನ್ನು ಅವಲಂಬಿಸುತ್ತಿದೆ, ಇದು ಒಳ್ಳೆಯ ವಿಷಯವಾಗಿದೆ; ಆದರೆ ಪಾಕ್‌ನಂತಹ ಶತ್ರುವಿಗಾಗಿ ಇಷ್ಟು ಸಾಕಾಗುವುದಿಲ್ಲ. ಅದಕ್ಕೆ ಶಬ್ದಗಳದ್ದಲ್ಲ, ಆದರೆ ಗುಂಡುಗಳ ಭಾಷೆಯೇ ಅರ್ಥವಾಗುತ್ತದೆ.

ಪ್ರಶಂಸನೀಯ ನಿರ್ಣಯ !

ಮುಖ್ಯಮಂತ್ರಿಗಳಾದ ನಂತರ ಯೋಗಿ ಆದಿತ್ಯನಾಥರ ಆಡಳಿತವು ಯಾವಾಗಲೂ ಕಠಿಣವಾದ ನಿರ್ಧಾರಗಳನ್ನು ಕೈಗೊಂಡಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಗಳಾಗುವ ಮೊದಲು ಅರಾಜಕತೆ ಪರಿಸ್ಥಿತಿ ಇತ್ತು. ಹತ್ಯೆ, ಅಪಹರಣ, ಲವ್ ಜಿಹಾದ್, ಹಿಂದೂ-ಮುಸಲ್ಮಾನರಲ್ಲಿ ಗಲಭೆಗಳು ಅಲ್ಲಿ ಯಾವಾಗಲೂ ಇದ್ದವು.

ಕುಲಗೆಟ್ಟ ಸಂಸ್ಕೃತಿ

ಮಕ್ಕಳನ್ನು ಬೆಳೆಸುವಾಗ ನಮ್ಮ ಕಲಿಸುವಿಕೆ ಜೀವನದ ಮೌಲ್ಯಗಳಿಗೆ ಅನುಸರಿಸಿ ಇವೆಯೇ ? ಎಂದು ಪ್ರತಿಯೊಬ್ಬ ತಾಯಿ-ತಂದೆಯರು ವಿಚಾರ ಮಾಡಬೇಕು. ಹೀಗಾದಾಗಲೇ ‘ನಿಜವಾದ ಅರ್ಥದಲ್ಲಿ ಸಂಸ್ಕೃತಿಯನ್ನು ಸ್ವೀಕರಿಸಿದರು’, ಎಂದು ಹೇಳಬಹುದು !

ಶಂಕರಾಚಾರ್ಯರು ನೀಡಿದ ಎಚ್ಚರಿಕೆ !

ಸದ್ಯ ಜಗತ್ತಿನಂತೆ ನಮ್ಮ ದೇಶವೂ ವಿಚಿತ್ರ ಸ್ಥಿತಿಯನ್ನು ಅನುಭವಿಸುತ್ತಿದೆ. ಒಂದು ಬದಿಗೆ ಎಲ್ಲ ಸಾಮರ್ಥ್ಯ ಇದ್ದರೂ ಇನ್ನೊಂದೆಡೆ ಎಲ್ಲೆಡೆ ಬಿರುಕು ಬಿಟ್ಟಿರುವಂತಹ ದೃಶ್ಯವಿದೆ. ನಾಗರಿಕರಲ್ಲಿನ ಶಕ್ತಿಯು ಸೋರಿ ಹೋಗಿ ಅವರು ಹತಾಶರಾಗಿದ್ದಾರೆ ಎಂಬಂತಿದೆ.

ಜಾನ್‌ರೋಜ್ ಇವರ ವಿವಾದಿತ ಹೇಳಿಕೆ !

ದೇಶ ಎಷ್ಟು ಕಠಿಣ ಪರಿಸ್ಥಿತಿಯಲ್ಲಿದೆ ಎನ್ನುವುದು ಗಮನಿಸಿ, ಎಲ್ಲ ವೈದ್ಯಕೀಯ ಶಾಖೆಗಳನ್ನು ಒಂದುಗೂಡಿಸಿ ಭಾರತೀಯರ ಆರೋಗ್ಯ ಚೆನ್ನಾಗಿರಲು ಒಂದು ಮಾರ್ಗವನ್ನು ಕಂಡು ಹಿಡಿಯಬೇಕಾಗಿರುವ ಸಮಯದಲ್ಲಿ ಈ ದ್ವೇಷದ ಭಾಷೆ ದೇಶವಿರೋಧಿಯಾಗಿದೆ. ಹಾಗಾಗಿ ಜಾನ್‌ರೋಜ್ ಇವರೇ ಮೊದಲು ದೇಶದ ಕ್ಷಮೆ ಕೋರಬೇಕಾಗಿದೆ.

ನಿಜವಾದ ‘ಜಾಗರಣೆ !

‘ದೇಶದಲ್ಲಿ ಕೊರೊನಾದ ೨ ನೇ ಅಲೆಯಿರುವಾಗ ಕುಂಭಮೇಳದ ಆಯೋಜನೆಯನ್ನು ಮಾಡಬೇಕಾಗಿತ್ತೇ ?, ‘ಅದನ್ನು ಸಾಂಕೇತಿಕವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲವೇ ?, ಎಂದು ಕೆಲವು ಪ್ರಗತಿಪರ ಹಿಂದೂಗಳು ಪ್ರಶ್ನಿಸಿದ್ದರು. ‘ಕುಂಭಮೇಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮನವಿ ಮಾಡಿದ್ದರು.