‘ತೆರೆಮರೆಯ ತಾಲಿಬಾನಿಗಳು !

ಸ್ವರಾ ಭಾಸ್ಕರ ಮತ್ತು ಉರ್ದುಕವಿ ಮುನವ್ವರ ರಾಣಾ

ಸದ್ಯ ಎಲ್ಲೆಡೆ ‘ತಾಲಿಬಾನ ಮತ್ತು ‘ಅಫ್ಘಾನಿಸ್ತಾನದ ಚರ್ಚೆ ನಡೆಯುತ್ತಿದೆ. ತಾಲಿಬಾನ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ನಡೆಯುತ್ತಿರುವ ಹಿಂಸಾಚಾರ, ಉಗ್ರವಾದ ಇದು ಖಂಡಿತವಾಗಿಯೂ ಸಮರ್ಥನೀಯವಲ್ಲ. ಬದಲಾಗಿ ಎಲ್ಲ ದೇಶಗಳು ತಾಲಿಬಾನವನ್ನು ವಿರೋಧಿಸಬೇಕು; ಆದರೆ ದುರದೃಷ್ಟವಶಾತದಿಂದ ಹಾಗೆ ಆಗುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ತಾಲಿಬಾನಿಗಳ ಬಂಡಾಯ ನಡೆದಿರುವಾಗಲೂ ಅದಕ್ಕೆ ವಿರೋಧ ವ್ಯಕ್ತವಾಗುತ್ತಿಲ್ಲ, ಇದರರ್ಥ ತಾಲಿಬಾನವನ್ನು ಬೆಂಬಲಿಸುವವರು, ಅದನ್ನು ಸಮರ್ಥಿಸುವಂತಹ ‘ತೆರೆಮರೆಯ ತಾಲಿಬಾನಿಗಳು ಎಲ್ಲೆಡೆ ಬೇರುಬಿಟ್ಟಿದ್ದಾರೆ. ಈ ‘ತೆರೆಮರೆಯ ತಾಲಿಬಾನಿಗಳೇ ಇನ್ನಷ್ಟು ಹೆಚ್ಚು ಅಪಾಯಕಾರಿ ಮತ್ತು ಘಾತಕರಾಗುತ್ತಿದ್ದಾರೆ; ಆದರೆ ಈ ‘ತೆರೆಮರೆಯ ತಾಲಿಬಾನಿಗಳು ವಾಸ್ತವದಲ್ಲಿ ಯಾರು ? ತಾಲಿಬಾನಿ ಭಯೋತ್ಪಾದಕರನ್ನು ‘ರಾಮಾಯಣವನ್ನು ಬರೆದ ವಾಲ್ಮೀಕಿಋಷಿಗಳೊಂದಿಗೆ ಹೋಲಿಸುವ ಉರ್ದುಕವಿ ಮುನವ್ವರ ರಾಣಾ, ಹಾಗೆಯೇ ‘ತಾಲಿಬಾನಿ ಭಯೋತ್ಪಾದಕರಂತೆ ಹಿಂದುತ್ವನಿಷ್ಠ ಭಯೋತ್ಪಾದನೆಯ ಮೇಲೆಯೂ ಆಕ್ಷೇಪವನ್ನು ದಾಖಲಿಸಬೇಕು, ಎಂದು ಟ್ವೀಟ್ ಮಾಡುವ ನಟಿ ಸ್ವರಾ ಭಾಸ್ಕರ ! ಇವರ ಈ ಹೇಳಿಕೆಯನ್ನು ನೋಡಿದರೆ ‘ಇವರೇ  ‘ತೆರೆಮರೆಯ ತಾಲಿಬಾನಿ ಏಕಿರಬಾರದು ? ಎನ್ನುವ ಪ್ರಶ್ನೆ ಮೂಡುತ್ತದೆ. ಒಬ್ಬ ದರೋಡೆಕೋರನು ತಿಳಿಯದೇ ಉಚ್ಚರಿಸಿದ ರಾಮನಾಮದಿಂದ ಅವನು ಮಹಾನ್ ಋಷಿಯಾಗುತ್ತಾನೆ. ಇದೇ ಹಿಂದೂ ಸಂಸ್ಕೃತಿಯ ಮಹಾನತೆಯಾಗಿದೆ. ಈ ಶ್ರೇಷ್ಠತೆ ಇಂತಹವರಿಗೆ ಹೇಗೆ ತಿಳಿಯುವುದು ? ‘ವಾಲ್ಮೀಕಿಋಷಿಗಳನ್ನು ತಾಲಿಬಾನಿಗಳೊಂದಿಗೆ ಹೋಲಿಸಿದರು, ಇದನ್ನು ಕೇಳಿಯೇ ಅನೇಕ ಹಿಂದೂಗಳಲ್ಲಿ ಆಕ್ರೋಶವು ನೆತ್ತಿಗೇರಿರಬಹುದು. ಇಂತಹ ಮುನವ್ವರ ರಾಣಾ ಇವರ ಶಾಯರಿಗಳಿಗೆ ಬೆಲೆ ಕೊಡದೇ ಹಿಂದೂಗಳು ಅವರನ್ನು ವಿರೋಧಿಸಲು ಸಂಘಟಿತರಾಗಬೇಕು ಮತ್ತು ಋಷಿಮುನಿಗಳ ಅಪಮಾನಕ್ಕೆ ನ್ಯಾಯೋಚಿತ ಮಾರ್ಗದಿಂದ ಪ್ರತ್ಯುತ್ತರವನ್ನು ಕೊಡಲೇಬೇಕು. ಎಲ್ಲಿ ‘ರಾಮಾಯಣದಂತಹ ಹಿಂದೂಗಳ ಧರ್ಮಗ್ರಂಥ ಬರೆಯುವ ವಾಲ್ಮೀಕಿ ಋಷಿಗಳು ಮತ್ತು ಎಲ್ಲಿ ರಾಣಾರ ಶಾಯರಿಗಳು ಪರಸ್ಪರ ಹೋಲಿಸಬಹುದೇ ? ‘ಸ್ವರಾ ಭಾಸ್ಕರ ಈ ಹೆಣ್ಣುಮಗಳು ಭಾರತದಲ್ಲಿ ಏಕೆ ವಾಸಿಸುತ್ತಾಳೆ ? ಎನ್ನುವ ಪ್ರಶ್ನೆ ಮೂಡುತ್ತದೆ. ಸ್ವರಾ ಭಾಸ್ಕರ ಇವರಿಗೆ ಪಾಕಿಸ್ತಾನ, ಚೀನಾ, ತಾಲಿಬಾನ, ಅಲ್ಲದೇ ಭಯೋತ್ಪಾದಕತೆ, ನಕ್ಸಲವಾದ, ಮತಾಂಧರು, ಪ್ರಗತಿ (ಅಧೋಗತಿ)ಪರರು, ಸರ್ವಧರ್ಮ ಸಮಭಾವ ಈ ವಿಷಯಗಳ ಬಗ್ಗೆ ಇಷ್ಟು ಆಸಕ್ತಿ ಇದ್ದರೆ, ಅವರು ನೇರವಾಗಿ ಭಾರತದೇಶವನ್ನು ಬಿಟ್ಟು ಹೋಗಬೇಕು, ಅಲ್ಲ ವಾಸ್ತವದಲ್ಲಿ ಇಂತಹ ಭಾರತದ್ವೇಷಿಗಳನ್ನು ಹೊರಗಟ್ಟಬೇಕು. ಭಾರತದಲ್ಲಿದ್ದು, ಇಲ್ಲಿಯ ಭೂಮಾತೆಯನ್ನು ಕೀಳಾಗಿ ಪರಿಗಣಿಸಿ ತಾಲಿಬಾನಿಗಳ ಗೌರವವನ್ನು ಎತ್ತರಿಸಲು ನೋಡುವ ಇವಳು ತಾಲಿಬಾನಿ ಕುಲದವಳೆಂದೇ ಹೇಳಬೇಕಾಗುವುದು. ಇಂತಹವರಿಂದ ಎಲ್ಲ ಭಾರತೀಯರು ಜಾಗ್ರತೆಯಿಂದಿರಬೇಕು.

ಈಗ ತಾಲಿಬಾನವು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದೆ, ನಾಳೆ ತಾಲಿಬಾನ ಭಾರತದ ಮೇಲೆ ಆಕ್ರಮಣವನ್ನು ಮಾಡಲೂ ಹಿಂದೆ-ಮುಂದೆ ನೋಡಲಾರದು. ಅಂತಹ ಸಮಯದಲ್ಲಿ ಆ ಕುಲದವರು ಅವರೊಂದಿಗೆ ಸೇರಬಹುದು ಮತ್ತು ಭಾರತಭೂಮಿಯನ್ನು ಉಡುಗೊರೆಯೆಂದು ಕೊಡಲು ಪ್ರಯತ್ನಿಸಬಹುದು. ನೈಜ ಭಾರತೀಯರೇ, ನಾವು ಎಂದಿಗೂ ಈ ರೀತಿ ಆಗಲು ಬಿಡಬಾರದು. ಈ ಪ್ರಮೇಯ ಬರಬಾರದೆಂದು ತಾಲಿಬಾನಪ್ರೇಮಿ ಕುಲದವರನ್ನು ಹುಡುಕಿ ತೆಗೆದು ಸಮಯವಿರುವಾಗಲೇ ಕಾರಾಗೃಹಕ್ಕೆ ಅಟ್ಟಬೇಕು. ತಾಲಿಬಾನ ಅಫ್ಘಾನಿಸ್ತಾನದಲ್ಲಿ ಹೇಗೆ ಅಧಿಕಾರವನ್ನು ಪಡೆದುಕೊಂಡಿತು ? ಈಗ ತಾಲಿಬಾನಿಗಳು ಏನು ಮಾಡುತ್ತಿದ್ದಾರೆ ? ಇಲ್ಲಿಯವರೆಗಿನ ಘಟನಾವಳಿಗಳನ್ನು ಭಾರತದಲ್ಲಿರುವ ಎಲ್ಲ ಭಾಷೆಗಳ ದೂರದರ್ಶನ ಸುದ್ದಿವಾಹಿನಿಗಳು ಆಗಾಗ ಬಿತ್ತರಿಸಿವೆ. ಈಗಲೂ ತೋರಿಸುತ್ತಿವೆ; ಆದರೆ ಅದನ್ನು ತೋರಿಸುವಾಗ ಸುದ್ದಿಯನ್ನು ನೀಡುವ ಕೆಲವು ಪ್ರಸಾರ ಮಾಧ್ಯಮಗಳ ಭಾಷೆ ಅತ್ಯಂತ ಮೆತ್ತಗೆ, ಸೌಮ್ಯ ಮತ್ತು ತಾಲಿಬಾನಿಗಳ ‘ಗೌರವಕ್ಕೆ ಧಕ್ಕೆ ಬರದ ಹಾಗೆ ಇರುತ್ತದೆ. ಅರ್ಥಾತ್ ತಾಲಿಬಾನಿಗಳೊಂದಿಗೆ ಯಾರು ಕೈಕೈ ಮಿಲಾಯಿಸುವರು ? ಹಿಂದೂ, ಹಿಂದುತ್ವ, ಹಿಂದೂ ಧರ್ಮ ಇವುಗಳನ್ನು ಹೇಗೆ ಬೇಕಾದರೂ, ಕಾಲಿನಡಿ ತುಳಿದರೂ ನಡೆಯುತ್ತದೆ, ಹಿಂದೂಗಳು ಶಾಂತವಾಗಿ (ಸಹಿಷ್ಣುತೆಯಿಂದ) ಎಲ್ಲವನ್ನು ಬಾಯಿ ಮುಚ್ಚಿಕೊಂಡು ಸಹಿಸುತ್ತಾರೆ. ಇದರಿಂದ ಹಿಂದೂ ಧರ್ಮದ ಸಂದರ್ಭದಲ್ಲಿ ಏನಾದರೂ ಘಟನೆಗಳು ಘಟಿಸಿದರೆ ಇದನ್ನು ಕೆಲವು ಸುದ್ದಿವಾಹಿನಿಗಳು ಅನ್ಯಾಯ, ಅತ್ಯಾಚಾರ ಆಗಿರುವಂತೆ ಸುಳ್ಳು ಸುದ್ದಿ ಹರಡುತ್ತಾ, ವಿನಾಕಾರಣ ಕೂಗುತ್ತಾ, ಆಕ್ರೋಶಗೊಂಡು ಆರೋಪ ಮಾಡುತ್ತಾರೆ. ಅವರ ಶಿರೋನಾಮೆಯೂ ಆಗ ದ್ವೇಷಪೂರ್ಣ ಮತ್ತು ಕಟು ಸ್ವರೂಪದ್ದಾಗಿರುತ್ತದೆ. ‘ಹಿಂದೂ ಧರ್ಮದ ಮೇಲೆ ವಿಷಕಾರಲು ಸ್ವತಃ ಅವರಿಗೆ ಅಧಿಕಾರವೇ ಇದೆ, ಎನ್ನುವ ಆವೇಶದಲ್ಲಿ ಈ ಸುದ್ದಿವಾಹಿನಿಗಳು ತಮ್ಮ ವಿಚಾರಗಳೇ ಯೋಗ್ಯವಾಗಿದೆಯೆನ್ನುತ್ತಾ ಹಿಂದೂಗಳನ್ನು ಗುರಿ ಮಾಡುತ್ತವೆ. ‘ಹಿಂದೂ ಧರ್ಮ ಹೇಗೆ ಅಪಾಯಕಾರಿಯಾಗಿದೆ ? ಅದರಿಂದ ಎಲ್ಲರೂ ಹೇಗೆ ದೂರವಾಗಬೇಕು ?, ಎಂದು ಜೋರಾಗಿ ಕೂಗಿ ಸಾರುತ್ತಾರೆ; ಆದರೆ ಇಂತಹ ಆಕ್ರೋಶವು ತಾಲಿಬಾನಿನ ಸಂದರ್ಭದಲ್ಲಿ ವ್ಯಕ್ತವಾಗುವುದಿಲ್ಲ. ಆಗ ಎಲ್ಲರೂ ಬಾಯಿಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುತ್ತಾರೆ, ಶಾಂತಿಯ ಪಾರಿವಾಳಗಳನ್ನು ಹಾರಿಬಿಡುತ್ತಾರೆ, ಇದರಿಂದಲೇ ಭಾರತದ್ವೇಷಿಗಳಿಗೆ ಲಾಭವಾಗುತ್ತದೆ. ತಾಲಿಬಾನಿಗಳ ಹಿಂಸಕ ಮನೋವೃತ್ತಿ ಮತ್ತು ವಿಧ್ವಂಸಕತೆ, ಇದರಿಂದ ವಿಶ್ವದ ಮೇಲಾಗುವ ವಿಪರೀತ ಪರಿಣಾಮ ಮತ್ತು ಯುದ್ಧದ ಕಿಡಿ ಭುಗಿಲೇರುವ ವಿಷಯದಲ್ಲಿ ದಿನಪತ್ರಿಕೆಗಳೊಂದಿಗೆ ಸುದ್ದಿವಾಹಿನಿಗಳೂ ಧ್ವನಿಯೆತ್ತುತ್ತವೆ. ಶತ್ರುವಿನಿಂದ ರಕ್ಷಿಸಿ ರಾಷ್ಟ್ರದ ಉತ್ಕರ್ಷವನ್ನು ಸಾಧಿಸಲು ತೆಗೆದುಕೊಳ್ಳಬೇಕಾದ ಯೋಗ್ಯ ಮಾರ್ಗದರ್ಶನ ಜನತೆಗೆ ಸಿಗಬೇಕು. ಈ ಜವಾಬ್ದಾರಿ ಎಷ್ಟು ಸರಕಾರದ್ದು ಇದೆಯೋ, ಅಷ್ಟೇ ವರ್ತಮಾನ ಪತ್ರಿಕೆಗಳ ಮತ್ತು ಸುದ್ದಿವಾಹಿನಿಗಳದ್ದೂ ಆಗಿದೆ, ಎನ್ನುವುದನ್ನು ಅವರು ಗಮನಿಸಬೇಕು.