ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders

ಪೊಲೀಸರಿಂದ ಆರೋಪಿಯ ಬಂಧನ!

​​ಗಾಝಿಯಾಬಾದ (ಉತ್ತರಪ್ರದೇಶ) – ಇಲ್ಲಿ ಒಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸುತ್ತಿದ್ದ ಶಹನವಾಜ (೩೦ ವರ್ಷ) ಎಂಬ ಹೆಸರಿನ ಮುಸಲ್ಮಾನನನ್ನು ಸಂತ್ರಸ್ತೆಯು ವಿರೋಧಿಸಿದ್ದಳು. ಇದರ ಸೇಡು ತೀರಿಸಿಕೊಳ್ಳಲು ಶಹನವಾಜನು ಆಕೆಯನ್ನು ಬಲವಂತವಾಗಿ ಕಟ್ಟಡದ ನಾಲ್ಕನೇ ಮಹಡಿಗೆ ಕರೆದೊಯ್ದು ಅಲ್ಲಿ ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಲು ಯತ್ನಿಸಿದ್ದಾನೆ. ಸಂತ್ರಸ್ತೆಯು ಇದನ್ನೂ ವಿರೋಧಿಸಿದ್ದರಿಂದ ಆತನು ಆಕೆಯನ್ನು ಕೆಳಗೆ ತಳ್ಳಿದ್ದಾನೆ. ಇದರಿಂದ ಆ ಹುಡುಗಿ ಮೃತಪಟ್ಟಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಶಹನವಾಜನನ್ನು ಬಂಧಿಸಿದ್ದಾರೆ.

​೧. ಮೃತ ಹಿಂದೂ ಹುಡುಗಿಯ ಹೆಸರು ಖುಷಿ ಮತ್ತು ಆಕೆಯ ವಯಸ್ಸು ಕೇವಲ ೧೫ ವರ್ಷವಾಗಿತ್ತು.

೨. ಖುಷಿಯ ತಾಯಿ ಮಂಜು ಅವರು ಮಾತನಾಡುತ್ತಾ , ಜುಲೈ ೧೫ ರ ರಾತ್ರಿ ಸುಮಾರು ೧೦ ಗಂಟೆಗೆ ತಮ್ಮ ಮಗಳು ಮನೆಯ ಎದುರಿನ ಅಂಗಡಿಗೆ ಹಾಲು ತರಲು ಹೋಗಿದ್ದಳು. ಈ ಸಮಯದಲ್ಲಿ ಪಕ್ಕದಲ್ಲಿಯೇ ವಾಸಿಸುವ ಶಹನವಾಜನು ಅಲ್ಲಿಗೆ ಬಂದಿದ್ದನು. ಆತ ಖುಷಿಯನ್ನು ಬಲವಂತವಾಗಿ ಹತ್ತಿರದಲ್ಲೇ ಇದ್ದ ಕಟ್ಟಡದ ನಾಲ್ಕನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತ ಖುಷಿಯೊಂದಿಗೆ ಅಶ್ಲೀಲವಾಗಿ ವರ್ತಿಸಲು ಯತ್ನಿಸಿದ್ದಾನೆ. ಹುಡುಗಿ ಇದನ್ನು ತೀವ್ರವಾಗಿ ವಿರೋಧಿಸಿದಾಗ, ಕೆರಳಿದ ಶಹನವಾಜ ಆಕೆಯನ್ನು ನಾಲ್ಕನೇ ಮಹಡಿಯಿಂದ ನೇರವಾಗಿ ಕೆಳಗೆ ತಳ್ಳಿದ್ದಾನೆ.

ಸಂತ್ರಸ್ತೆಯು ಸಾರ್ವಜನಿಕ ರಸ್ತೆಯಲ್ಲೇ ಆರೋಪಿಗೆ ಕಪಾಳಮೋಕ್ಷ ಮಾಡಿದ್ದಳು!

​ಮೃತ ಖುಷಿಯ ತಾಯಿ ನೀಡಿದ ಮಾಹಿತಿಯ ಪ್ರಕಾರ, ಶಹನವಾಜನು ಕಳೆದ ಕೆಲವು ವಾರಗಳಿಂದ ತಮ್ಮ ಮಗಳನ್ನು ಸತತವಾಗಿ ಹಿಂಬಾಲಿಸುತ್ತಿದ್ದನು. ಆತ ಹೋಗು-ಬರುವಾಗ ಖುಷಿಗೆ ಕಿರುಕುಳ ನೀಡುತ್ತಿದ್ದನು ಮತ್ತು ಆಕೆಯನ್ನು ಚುಡಾಯಿಸಲು ಯತ್ನಿಸುತ್ತಿದ್ದನು. ಕೆಲವು ದಿನಗಳ ಹಿಂದೆ ಇದೇ ಕಾರಣಕ್ಕಾಗಿ ರಸ್ತೆಯಲ್ಲೇ ಇಬ್ಬರ ನಡುವೆ ಜೋರಾದ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಖುಷಿ ಧೈರ್ಯ ತೋರಿಸಿ ಶಹನವಾಜಗೆ ಕಪಾಳಮೋಕ್ಷ ಮಾಡಿದ್ದಳು. ಶಹನವಾಜನು ಈ ಅಪಮಾನವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಖುಷಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದನು. ಕೊನೆಗೆ ಅವಕಾಶ ಸಿಕ್ಕ ತಕ್ಷಣ ಆತ ಈ ಭಯಂಕರ ಕೃತ್ಯವೆಸಗಿ ಖುಷಿಯ ಪ್ರಾಣ ತೆಗೆದಿದ್ದಾನೆ.

ಸಂಪಾದಕೀಯ ನಿಲುವು

ಕ್ರೂರ ಮತ್ತು ಕಾಮಾಂಧ ಮತಾಂಧ! ಹಿಂದೂ ಬಹುಸಂಖ್ಯಾತ ಉತ್ತರಪ್ರದೇಶದಲ್ಲಿ ಹಿಂದುತ್ವವಾದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರಕಾರವಿದ್ದರೂ ಸರಕಾರಕ್ಕೆ ಮುಸಲ್ಮಾನರ ಉದ್ಧಟತನವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಸರಕಾರಕ್ಕೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ! ಉತ್ತರಪ್ರದೇಶದಲ್ಲಿಯೇ ಹಿಂದೂಗಳ ಪರಿಸ್ಥಿತಿ ಹೀಗಿದ್ದರೆ, ಇನ್ನುಳಿದ ರಾಜ್ಯಗಳಲ್ಲಿ ಹೇಗಿರಬಹುದು?, ಎಂಬುದರ ವಿಚಾರ ಮಾಡದಿರುವುದೇ ಒಳಿತು!