ಶಂಕರಾಚಾರ್ಯರು ನೀಡಿದ ಎಚ್ಚರಿಕೆ !

ಓಡಿಶಾ ರಾಜ್ಯದ ಪುರಿಯ ಪೂರ್ವಾಮ್ನಾಯ ಶ್ರೀಗೋವರ್ಧನ ಮಠದ ಪೀಠಾಧೀಶ್ವರರಾದ ಶ್ರೀಮದ್‌ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜರು ಇತ್ತೀಚೆಗಷ್ಟೆ ‘ಹಿಂದೂ ರಾಷ್ಟ್ರ’ದ ಕುರಿತು ಮತ್ತೊಮ್ಮೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಅವರು, “ವಿಶ್ವ ಸಂಸ್ಥೆಯು ಭಾರತ, ನೇಪಾಳ ಮತ್ತು ಭೂತಾನ ಈ ದೇಶಗಳನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು”, ಎಂದು ಹೇಳಿದ್ದಾರೆ. ಈ ಕುರಿತಾದ ಸಂದರ್ಶನದಲ್ಲಿ ಅವರು, ಜಗತ್ತಿನಲ್ಲಿನ ೨೦೪ ದೇಶಗಳ ಪೈಕಿ ಬಹುಸಂಖ್ಯಾತ ಕ್ರೈಸ್ತರಿದ್ದಾರೆ ಮತ್ತು ೫೦ ಕ್ಕಿಂತ ಹೆಚ್ಚು ಮುಸಲ್ಮಾನರಿದ್ದಾರೆ, ಆದರೆ ಹಿಂದೂಗಳ ದೇಶವಿಲ್ಲ. ಆದುದರಿಂದ ಈ ದೇಶಗಳನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ವಿಶ್ವ ಸಂಸ್ಥೆಯ ಜವಾಬ್ದಾರಿಯಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಹಿಂದೂಗಳಿಗೆ ಚಿತ್ರಹಿಂಸೆಯಾಗುತ್ತಿದ್ದರೆ ಮತ್ತು ಅವರಿಗೆ ಅವರ ದೇಶವನ್ನು ಬಿಡಬೇಕಾಗಿ ಬಂದರೆ ಅವರನ್ನು ಆ ದೇಶಗಳಿಂದ ಕರೆತಂದು ವಸತಿ ಕಲ್ಪಿಸಬೇಕು ಮತ್ತು ಅವರಿಗೆ ಯೋಗ್ಯವಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು’, ಎಂದು ಹೇಳಿದ್ದಾರೆ.

ಮತಾಂತರ ಮತ್ತು ನುಸುಳುಕೋರ ರೋಹಿಂಗ್ಯಾರ ಭಯೋತ್ಪಾದನೆಯ ಸಮಸ್ಯೆ ಮತ್ತು ಅವುಗಳಿಗೆ ಸಂಬಂಧಿಸಿದ ಕಾಯದೆಗಳ ಕುರಿತು ಪರೋಕ್ಷ ಸಂಕೇತ ನೀಡಿದ್ದಾರೆ. ಶಂಕರಾಚಾರ್ಯರು ಮುಂದೆ ಮಾತನಾಡುತ್ತಾ, ಆದಿ ಶಂಕರಾಚಾರ್ಯರು ಮತ್ತು ಯಾದವ ರಾಜರು ಸೂರ್ಯೋಪಾಸಕರಾದ ಪಾರ್ಸಿಗಳಿಗೆ ‘ಅತಿಥಿ ದೇವೋ ಭವ’ ಎಂದು ಚರ್ಚೆ ಮಾಡಿ ಭಾರತದಲ್ಲಿ ಸ್ಥಾನ ನೀಡಿದರು ಮತ್ತು ಇಂದಿಗೂ ಅವರು ಸಹ ಹಿಂದೂಗಳ ಬಗ್ಗೆ ಕೃತಜ್ಞರಾಗಿರುವರು. ಅದೇ ಸ್ಥಾನವನ್ನು ಕ್ರೈಸ್ತರಿಗೆ ಕಾಲಿಕತನಲ್ಲಿ ನೀಡಲಾಯಿತು; ಆದರೆ ಅವರು ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಯೋಜನೆಯನ್ನು ರಚಿಸಿದರು ಮತ್ತು ಹಿಂದೂಗಳನ್ನು ಮತಾಂತರಿಸಿದರು. ಮುಸಲ್ಮಾನರು ಆಕ್ರಮಕರೆಂದು ಬಂದುದರಿಂದ ಹಿಂದೂ ರಾಜರು ಅವರೊಂದಿಗೆ ಹೋರಾಡಿದರು; ಆದರೆ ಯಾವಾಗ ಅವರು ಶರಣಾದರೋ ಆಗಲೂ ಅವರಿಗೆ ಸ್ಥಾನವನ್ನು ನೀಡಿದರು. ಆದರೂ ಅವರು ತಮ್ಮ ಆಕ್ರಮಕತೆಯನ್ನು ಬಿಡಲಿಲ್ಲ. ‘ನಮ್ಮ ದಯೆ ಈ ರೀತಿ ಘಾತಕವಾಗಬಾರದೆಂದು’, ನಮ್ಮ ಸಂಕೇತವಾಗಿದೆ. ಸರಕಾರವು ತಮ್ಮ ಸಹನಶಕ್ತಿಯನ್ನು ಸಂರಕ್ಷಿಸಿಡಲು ಎಲ್ಲರಿಗೂ ಅದರ ಕಲ್ಪನೆಯನ್ನು ನೀಡಬೇಕು’, (ಅಂದರೆ ಸಮಯ ಬಂದಾಗ, ಅಡಚಣೆ ಬರುವುದಿಲ್ಲ.) ಎಂದು ಹೇಳಿದರು. ಇಷ್ಟಕ್ಕೆ ನಿಲ್ಲದೇ ಅವರು ಮುಂದೆ ಮಾತನಾಡುತ್ತಾ, “ಸರಕಾರವು ಇದನ್ನು ಗಾಂಭೀರ್ಯವಾಗಿ ಪರಿಗಣಿಸಬೇಕು ಮತ್ತು ತೆಗೆದುಕೊಳ್ಳದಿದ್ದರೆ ನಮ್ಮ ನುಡಿಗಳು ಸತ್ಯವಾಗುತ್ತದೆ. ಭಾರತವು ಧಾರ್ಮಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯೆಂದು ಪ್ರಸಿದ್ಧವಾಗುವುದು, ಇದರಲ್ಲಿ ಯಾವುದೇ ಸಂದೇಹವಿಲ್ಲ”, ಎಂದು ಹೇಳಿದರು. ಮೇಲಿನ ವಿಷಯವನ್ನು ಮನವರಿಕೆ ಮಾಡಿಸಲು ಅವರು ನೀಡಿದ ಈ ಅತ್ಯಂತ ಸಮರ್ಪಕ ಉದಾಹರಣೆಯು, ಬಹಳಷ್ಟು ಸೂಚಿಸುತ್ತದೆ. ಅವರು ಹೇಳುತ್ತಾರೆ. ಚರಂಡಿಯಲ್ಲಿನ ಮೀನುಗಳು ಒಳ್ಳೆಯ ಸಾತ್ತ್ವಿಕ ನೀರಿನಲ್ಲಿ ಸಾಯುತ್ತವೆ, ಉಪ್ಪುನೀರಿನಲ್ಲಿನ ಮೀನುಗಳು ಸಿಹಿ ನೀರಿನಲ್ಲಿ ಸಾಯುತ್ತವೆ ಮತ್ತು ಸಿಹಿ ನೀರಿನಲ್ಲಿನ ಮೀನುಗಳೂ ಉಪ್ಪು ಅಥವಾ ಚರಂಡಿ ನೀರಿನಲ್ಲಿ ಸಾಯುತ್ತವೆ. ಇದರ ಅರ್ಥವೇನು ಎಂದು ತಿಳಿದುಕೊಳ್ಳಬೇಕು. ಹೀಗಾಗದಂತೆ ಸರಕಾರವು ಕಾಳಜಿ ವಹಿಸಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಯ ನಿಟ್ಟಿನಲ್ಲಿ ಜಗದ್ಗುರು ಶಂಕರಾಚಾರ್ಯರ ಮೇಲಿನ ಹೇಳಿಕೆಯು ಅತ್ಯಂತ ಸಮಯಸೂಚಕ, ಕಾಲವನ್ನು ಗುರುತಿಸುವ, ರಾಷ್ಟ್ರದ ಸ್ಥಿತಿಯ ಯೋಗ್ಯ ವಿಶ್ಲೇಷಣೆ ಮಾಡುವ ಮತ್ತು ಯೋಗ್ಯವಾದ ಎಚ್ಚರಿಕೆ ನೀಡುವ ಹೀಗೆ ಅನೇಕ ಅರ್ಥಗಳಿಂದ ಮಹತ್ವದ್ದಾಗಿದೆ.

ಶಂಕರಾಚಾರ್ಯ ಶ್ರೀ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ

ದೇಶ ಮತ್ತು ಭಾರತೀಯರ ಸದ್ಯದ ಸ್ಥಿತಿ

ಸದ್ಯ ಜಗತ್ತಿನಂತೆ ನಮ್ಮ ದೇಶವೂ ವಿಚಿತ್ರ ಸ್ಥಿತಿಯನ್ನು ಅನುಭವಿಸುತ್ತಿದೆ. ಒಂದು ಬದಿಗೆ ಎಲ್ಲ ಸಾಮರ್ಥ್ಯ ಇದ್ದರೂ ಇನ್ನೊಂದೆಡೆ ಎಲ್ಲೆಡೆ ಬಿರುಕು ಬಿಟ್ಟಿರುವಂತಹ ದೃಶ್ಯವಿದೆ. ನಾಗರಿಕರಲ್ಲಿನ ಶಕ್ತಿಯು ಸೋರಿ ಹೋಗಿ ಅವರು ಹತಾಶರಾಗಿದ್ದಾರೆ ಎಂಬಂತಿದೆ. ಕೊರೋನಾದ ಸಂಕಟದಿಂದ ಉದ್ಭವಿಸಿದ ಆರ್ಥಿಕ ಸಂಕಟ, ಬಡತನ, ಭ್ರಷ್ಟಾಚಾರದ ರಾಶಿ, ಮಿತಿಮೀರಿದ ಅಪರಾಧಗಳು; ಇನ್ನೊಂದೆಡೆ ಶತ್ರುಗಳ ಸೀಮೆಯ ಆಚೆಗೆ ನಡೆದಿರುವ ಆಕ್ರಮಣಗಳು; ಮತ್ತೊಂಡೆ ಶತ್ರುವಿಗೆ ದೊರಕಿದ ಹಿಂದೂವಿರೋಧಕರ ಆಂತರಿಕ ಗಲಭೆ ಮತ್ತು ಅದರಿಂದಾಗುವ ನಕ್ಸಲ್‌ವಾದಿ ಮತ್ತು ಸಾಮ್ಯವಾದಿಗಳ ಆಕ್ರಮಣಗಳು, ಬಂಗಾಲ ಸಹಿತ ಸಂಪೂರ್ಣ ದೇಶದಲ್ಲಿನ ಗಲಭೆ, ದೇಶದಾದ್ಯಂತ ಬಂದ ಮತಾಂತರದ ಪ್ರವಾಹ, ನುಸುಳುಕೋರರು ಉಂಟು ಮಾಡಿದ ಭಯೋತ್ಪಾದನೆ; ನಾಲ್ಕನೇಯ ಕಡೆಗೆ ನೈಸರ್ಗಿಕ ಆಪತ್ತುಗಳಿಂದ ಬರುತ್ತಿರುವ ಸಂಕಟಗಳು ಹೀಗೆ ನಾಲ್ಕೂ ದಿಕ್ಕುಗಳಿಂದ ಭಾರತವನ್ನು ಮತ್ತು ಭಾರತೀಯರನ್ನು ಸುತ್ತುವರೆದಿವೆ. ಸೊಳ್ಳೆಗಳಿಂದ ಹಿಡಿದು ತಗ್ಗುಗಳ ವರೆಗಿನ ಪ್ರತಿ ದಿನದ ಸಾವಿರಾರು ಸಮಸ್ಯೆಗಳಿಂದ ಸಾಮಾನ್ಯ ಮನುಷ್ಯನಿಗೆ ನಿರಾಶೆ ಮತ್ತು ಕಷ್ಟವಾಗುತ್ತದೆ. ಎಷ್ಟೇ ಸಾಮರ್ಥ್ಯಶಾಲಿ ವ್ಯವಸ್ಥಾಪನೆಯು ಬಂದರೂ ಈ ಎಲ್ಲ ಸ್ಥಿತಿಯನ್ನು ಕೂಡಲೇ ಬದಲಾವಣೆ ಮಾಡುವ ಹಾಗಿಲ್ಲ. ಯಾವುದೇ ಪಕ್ಷ ಮತ್ತು ಎಷ್ಟೇ ದೊಡ್ಡ ನಾಯಕನು ಬಂದರೂ ನಮ್ಮ ದುಃಖಕ್ಕೆ ಪರಿಹಾರವಿಲ್ಲವೆಂದು ಮತ್ತು ಅಡಚಣೆಗಳಿಗೆ ಅಂತ್ಯವಿಲ್ಲವೆಂದು ಸಾಮಾನ್ಯರಿಗೆ ಗೊತ್ತಾಗಿ ಬಿಟ್ಟಿದೆ. ಇವೆಲ್ಲವುಗಳಿಂದ ಎಲ್ಲಿಯಾದರೂ ಸಕಾರಾತ್ಮಕ ಆಶಾಕಿರಣವು ಕಾಣಿಸಬಹುದೇ ? ಹಾಗಾದರೆ ಎಲ್ಲರ ಮನಸ್ಸಿಗೆ ಪ್ರೋತ್ಸಾಹವನ್ನು ನೀಡುವ ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯವು ಎಲ್ಲ ಸಮಸ್ಯೆ ಗಳ ಪರಿಹಾರದ ಕಡೆಗೆ ಕರೆದೊಯ್ಯಲಿದೆ. ಇದರ ಕಾರಣವೆಂದರೆ, ಯಾವಾಗ ಪರಿಸ್ಥಿತಿಯು ಹೆಚ್ಚೆಚ್ಚು ಕೆಟ್ಟದ್ದಾಗುತ್ತದೋ, ಆಗ ಮುಂದೆ ಒಳ್ಳೆಯದರ ನಿರ್ಮಿತಿಯಾಗುತ್ತದೆ, ಎಂದು ಕಾಲದ ಶಾಸ್ತ್ರವಿದೆ.

ನಿರಾಶೆಯನ್ನು ಹೊಡೆದೋಡಿಸುವ ಆಶಾಕಿರಣ

ಕಳೆದ ಕೆಲವು ದಿನಗಳಲ್ಲಾದ ಪರಿವರ್ತನೆಯು ನಮ್ಮ ದೃಷ್ಟಿಯಿಂದ ತಪ್ಪಿ ಹೋಗಲು ಸಾಧ್ಯವಿಲ್ಲ. ಕೇಂದ್ರದ ಮಂತ್ರಿಗಳು ‘ಲವ್ ಜಿಹಾದ್’ ಇಲ್ಲ ಎನ್ನುತ್ತಿರುವಾಗ ೩ ರಾಜ್ಯಗಳಲ್ಲಿ ಅದಕ್ಕೆ ವಿರುದ್ಧವಾಗಿ ಕಾಯದೆಯು ಆಗುತ್ತಿದೆ. ಇಷ್ಟು ವರ್ಷ ಗೋಹತ್ಯೆ, ಲವ್ ಜಿಹಾದ್, ಮತಾಂತರ ಈ ಸಮಸ್ಯೆಯು ಇಲ್ಲವೇ ಇಲ್ಲ ಎಂಬಂತೆ ಢೋಂಗಿ ಆವಿರ್ಭಾವದಲ್ಲಿ ತಥಾಕಥಿತ ಜಾತ್ಯತೀತರು ತಿರುಗಾಡುತ್ತಿದ್ದರು ಮತ್ತು ಹಿಂದುತ್ವನಿಷ್ಠರನ್ನು ತುಚ್ಛವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಒಂದರ ನಂತರ ಒಂದು ಹಿಂದೂಗಳ ವಿರುದ್ಧದ ಅನ್ಯಾಯಗಳು ಹೊರಬರುತ್ತಿದೆ ಮತ್ತು ಮಾಧ್ಯಮಗಳ ಮೂಲಕ ಸತ್ಯ ಹೊರಬರುತ್ತಿದೆ. ೩೭೦ ನೇ ಕಲಮ್‌ಅನ್ನು ರದ್ದು ಪಡಿಸಲಾಗುವುದು ಎಂದು ಯಾರೂ ಕನಸಿನಲ್ಲಿಯೂ ಎಣಿಸಿರಲಿಲ್ಲ. ಪಾಕಿಸ್ತಾನದಲ್ಲಿ ದಬ್ಬಾಳಿಕೆಗೂ ಒಳಗಾದ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ಪಡೆಯುವುದು ತುಲನಾತ್ಮಕವಾಗಿ ಸುಲಭವಾಗುತ್ತಿದೆ. ನುಸುಳುಕೋರರ ಸಮಸ್ಯೆ ಬಗೆಹರಿಯುವ ಹಂತದತ್ತ ಸಾಗುತ್ತಿದೆ. ರಾಮ ಮಂದಿರದ ನಂತರ ಮಥುರಾ ದೇವಾಲಯವು ನ್ಯಾಯಕ್ಕಾಗಿ ಕಾಯುತ್ತಿದೆ. ಇವೆಲ್ಲವೂ ಹಿಂದೂಗಳು ಮತ್ತು ಭಾರತೀಯರ ಹತಾಶೆಯನ್ನು ಹೋಗಲಾಡಿಸುವ ಭರವಸೆಯ ಕಿರಣಗಳಾಗಿವೆ. ಸನಾತನ ಸಂಸ್ಥೆಯು ೨ ದಶಕಗಳ ಹಿಂದೆ ಈ ಉದ್ದೇಶಕ್ಕಾಗಿ ವಿವಿಧ ನಿಯತಕಾಲಿಕೆಗಳು ಮತ್ತು ಜಾಲತಾಣಗಳನ್ನು ಪ್ರಾರಂಭಿಸಿತು ಮತ್ತು ಹಿಂದೂ ರಾಷ್ಟ್ರ ರಚನೆಯ ಉದ್ದೇಶಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಒಂದು ದಶಕದ ಹಿಂದೆ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನವನ್ನು ನಡೆಸಲು ಪ್ರಾರಂಭಿಸಿತು. ಆ ಸಮಯದಲ್ಲಿ, ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಉಚ್ಚರಿಸುವುದನ್ನು ಸಹ ದೊಡ್ಡ ಅಪರಾಧವೆಂದು ಪರಿಗಣಿಸಲಾಗಿತ್ತು. ಮೂಲತಃ ‘ಹಿಂದೂ’ ಎಂಬ ಪದದ ಚೈತನ್ಯವು ದೇಶದ ಜನರಲ್ಲಿ ನಿಧಾನವಾಗಿ ಹರಡುತ್ತಿದೆ. ಹಿಂದೂಗಳ ಧರ್ಮಗುರುಗಳಾದ ಸಾಕ್ಷಾತ್ ಶಂಕರಾಚಾರ್ಯರು ಅದನ್ನು ಮತ್ತೊಮ್ಮೆ ಗೋಚರಿಸುವಂತೆ ಮಾಡಿದರು. ಅವರ ಸಂಕಲ್ಪದಿಂದ ಅವರ ಮಾತುಗಳು ನಿಜವಾಗುತ್ತವೆ. ಧರ್ಮದ ಸ್ಥಾಪನೆಯ ಈ ಕೆಲಸ ಸಾಕ್ಷಾತ್ ಭಗವಂತನ ಕಾರ್ಯವಾಗಿದ್ದರಿಂದ, ಭಗವಂತನು ಈ ಮಹತ್ತರವಾದ ಕಾರ್ಯವನ್ನು ಮಾಡುತ್ತಾನೆ.  ಪ್ರಜ್ಞಾವಂತ ಹಿಂದೂಗಳು ಇದಕ್ಕೆ ಕೊಡುಗೆ ನೀಡಬೇಕು.