ಕೆಲವು ಸಂಕಲ್ಪನೆಗಳು ಕಾಲದ ಪ್ರವಾಹದಲ್ಲಿ ಅಳಿದು ಹೋಗುತ್ತವೆ, ಕೆಲವು ಶತಕಾನುಶತಕಗಳ ಕಾಲ ಚರ್ಚೆಯಲ್ಲಿರುತ್ತವೆ, ಮತ್ತು ಕೆಲವು ಸಂಕಲ್ಪನೆಗಳಿಗೆ ಅನಂತ ಕಾಲದವರೆಗೆ ವಿರೋಧವೇ ಆಗುತ್ತಿರುತ್ತದೆ. ‘ಹಿಂದುತ್ವದ ಬಗ್ಗೆಯೂ ಹೀಗೆ ಆಗುತ್ತದೆ. ದುರದೃಷ್ಠವಶಾತ್ ‘ಹಿಂದುತ್ವ ಈ ಸಂಕಲ್ಪನೆಗೆ ಯಾವಾಗಲೂ ವಿರೋಧದ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಛತ್ತೀಸಗಡನಲ್ಲಿನ ಸರಕಾರಿ ಶಾಲೆಯಲ್ಲಿ ಓರ್ವ ಸಾಮ್ಯವಾದಿ ಶಿಕ್ಷಕರು ವಿದ್ಯಾರ್ಥಿಗಳಿಗೆ, “ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಿಮ್ಮ ಪೈಕಿ ಎಷ್ಟು ಜನರು ಉಪವಾಸ ಮಾಡುವಿರಿ ? ಎಂದು ಕೇಳಿದರು. ಇದಕ್ಕೆ ಕೆಲವು ಹಿಂದೂ ವಿದ್ಯಾರ್ಥಿಗಳು ಕೈ ಮೇಲೆತ್ತಿದರು. ಕೈಯನ್ನು ಮೇಲೆತ್ತಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಬಹಳ ಥಳಿಸಿದರು. ಹಾಗೆಯೇ ಎಲ್ಲ ವಿದ್ಯಾರ್ಥಿಗಳೆದುರು ಹಿಂದೂ ದೇವತೆಗಳ ಬಗ್ಗೆ ದ್ವೇಷಪೂರ್ವಕ ಹೇಳಿಕೆಯನ್ನೂ ನೀಡಿದರು. ಈ ಘಟನೆಯನ್ನು ಕೇಳಿದೊಡನೆ ಯಾವುದೇ ಹಿಂದೂವಿನ ಪಿತ್ತವು ನೆತ್ತಿಗೇರುತ್ತದೆ, ಈ ಘಟನೆಯು ಇಷ್ಟು ದುಃಖಕರವಾಗಿದೆ ! ಸ್ಥಳೀಯ ತಹಶೀಲ್ದಾರರು ಆ ಶಿಕ್ಷಕರನ್ನು ಅಮಾನತುಗೊಳಿಸಿದರು, ಇದು ಒಳ್ಳೆಯದಾಯಿತು.
ಇನ್ನೊಂದು ಘಟನೆಯಲ್ಲಿ ಬ್ರಿಸ್ಬೇನ್ (ಆಸ್ಟ್ರೇಲಿಯಾ)ನಲ್ಲಿ ೧೨ ವರ್ಷದ ಹಿಂದೂ ಭಾರತೀಯ ವಿದ್ಯಾರ್ಥಿಯು ಕೊರಳಲ್ಲಿ ತುಳಸಿಯ ಮಾಲೆಯನ್ನು ಧರಿಸಿದನೆಂದು ಅವನನ್ನು ಫೂಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸದಂತೆ ತಡೆಗಟ್ಟಲಾಯಿತು. ಈ ಎರಡೂ ಘಟನೆಗಳು ಅಂದರೆ ಹಿಂದೂ ಮತ್ತು ಹಿಂದುತ್ವವನ್ನು ಟೀಕಿಸುವ ಉದ್ದೇಶದಿಂದ ಅಥವಾ ಹಿಂದುತ್ವದ ಧ್ವನಿಯನ್ನು ದಮನಿಸಲಿಕ್ಕಾಗಿ ಮಾಡಿದ ಪ್ರಯತ್ನವೇ ಆಗಿದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಆದರೆ ಆಸ್ಟ್ರೇಲಿಯಾದಲ್ಲಿಯೂ ಹಿಂದೂಗಳಿಗೆ ಹಿಂದೂದ್ವೇಷವನ್ನು ಎದುರಿಸಬೇಕಾಗುತ್ತಿದೆ. ಈ ಸ್ಥಿತಿ ಎಂದರೆ ಹಿಂದುತ್ವದ ವಿರುದ್ಧ ರಚಿಸಲಾದ ಷಡ್ಯಂತ್ರವೇ ಆಗಿದೆ.
ಹಿಂದೂಗಳು, ವ್ರತ, ವೈಕಲ್ಯಗಳು, ಉಪವಾಸ, ಧಾರ್ಮಿಕ ವಿಧಿಗಳನ್ನು ಆಚರಿಸಬಾರದು. ಹಾಗೆ ಮಾಡಿದರೆ, ಅವರನ್ನು ವಿರೋಧ ಮತ್ತು ನಿಷೇಧಗಳ ಪಂಜರಗಳಲ್ಲಿರಿಸಲಾಗುತ್ತದೆ. ಇನ್ನೊಂದೆಡೆ ಮಾತ್ರ ಇತರ ಪಂಥದವರಿಗೆ ಅವರ ಧಾರ್ಮಿಕ ವಿಧಿಗಳನ್ನು ಪಾಲಿಸಲು ಸಾಧ್ಯವಾಗಬೇಕೆಂದು ಪೂರಕ ವಾತಾವರಣ ವನ್ನು ಲಭ್ಯ ಮಾಡಿಕೊಡಲಾಗುತ್ತದೆ. ಕೊರೊನಾದ ಸೋಂಕಿನಿಂದ ಎಲ್ಲೆಡೆ ನಿರ್ಬಂಧಾತ್ಮಕ ನಿಯಮಗಳು ಅನ್ವಯಿಸಿದುದರಿಂದ ಹಿಂದೂಗಳ ಹಬ್ಬ-ಉತ್ಸವಗಳ ಮೇಲೆ ಮಿತಿ ಬಂದಿತು; ಆದರೆ ಅದೇ ಸಮಯದಲ್ಲಿ ಇತರ ಪಂಥದವರ ಧಾರ್ಮಿಕ ಸ್ಥಳಗಳಲ್ಲಿ ಅವರ ಧಾರ್ಮಿಕ ವಿಧಿಗಳನ್ನು ನೆರವೇರಿಸಲು, ಪೊಲೀಸರ ಸೈನ್ಯವನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿರುವುದು ಕಂಡು ಬಂದಿತು. ಈ ದೃಶ್ಯವು ಅನೇಕ ದೊಡ್ಡ ನಗರಗಳಲ್ಲಿ ಕಂಡು ಬಂದಿತು. ಇದು ಅಪ್ರಾಮಾಣಿಕತೆಯ ಪರಮಾವಧಿಯೇ ಆಗಿದೆ. ‘ಹಿಂದೂ ಎಂದ ತಕ್ಷಣ ಅನೇಕರ ಹುಬ್ಬುಗಳು ಮೇಲೇರುತ್ತವೆ, ಹಣೆಯು ಗಂಟಿಕ್ಕುತ್ತದೆ. ಅದರಿಂದಲೇ ಮುಂದೆ ಹಿಂದೂ ಧರ್ಮದ ವಿರುದ್ಧ ಸರ್ವತೋಮುಖ ಸಂಘರ್ಷವು ಆರಂಭವಾಗುತ್ತದೆ. ಹಿಂದೂ ಧರ್ಮವನ್ನು ವಿಕೃತಗೊಳಿಸಿ ಸಮಾಜದಲ್ಲಿ ಆ ಬಗ್ಗೆ ನಕಾರಾತ್ಮಕತೆಯ ವಿಷದ ಬಳ್ಳಿಯನ್ನೇ ನೆಡಲಾಗುತ್ತದೆ ಮತ್ತು ಕಾಲಾಂತರದಲ್ಲಿ ಅದು ಬೆಳೆದು ಉದ್ರೇಕಕಾರಿ ಹಿಂದೂದ್ವೇಷವಾಗುತ್ತದೆ ಎಂದು ಸಾಬೀತಾಗತೊಡಗುತ್ತದೆ. ಇಷ್ಟು ವರ್ಷಗಳ ಕಾಲ ಮೊಗಲರು ಮತ್ತು ಬ್ರಿಟಿಷ ಅಧಿಕಾರರೂಢರು ರಾಜ್ಯವನ್ನು ನಡೆಸುವಾಗ ಹಿಂದೂವಿರೋಧಿ ನಿಲುವನ್ನು ತೆಗೆದುಕೊಳ್ಳುತ್ತಾ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು ಇದು ಸತ್ಯ; ಆದರೆ ಹಿಂದೂ ಧರ್ಮವು ನಾಶವಾಗಲಿಲ್ಲ. ಹಿಂದುತ್ವವು ಪ್ರತಿಬಾರಿ ವಿರೋಧದ ಸುಳಿಯಲ್ಲಿ ಸಿಲುಕಿ ಹೊರಳಾಡಿ ಮತ್ತೆ ಮೇಲೆ ಬಂದಿತು. ಆದುದರಿಂದ ಹಿಂದೂಗಳು ಕರ್ತವ್ಯಪಾಲನೆಯೆಂದು ಹಿಂದುತ್ವಕ್ಕೆ ನ್ಯಾಯ, ಮಾನ-ಸನ್ಮಾನ ದೊರಕಿಸಿಕೊಡಲು ಸಿದ್ಧರಾಗಬೇಕು. ನಿಜವಾಗಿಯೂ ಹಿಂದುತ್ವದ ಅಭಿಮಾನವನ್ನು ಕಾಪಾಡು ವುದು, ಕಾಲದ ಆವಶ್ಯಕತೆಯೇ ಆಗಿದೆ. ಹಿಂದುತ್ವವು ಮೇಲಿಂದ ಮೇಲೆ ಹಗೆತನದ ಕಣಿವೆಯಲ್ಲಿ ಎಸೆಯಲ್ಪಡಬಾರದು, ಎಂಬುದಕ್ಕಾಗಿ ಈಗ ಹಿಂದೂಗಳೇ ರಾಷ್ಟ್ರ ಮತ್ತು ಧರ್ಮದ ರಕ್ಷಕರಾಗಬೇಕು !