ಕೆಲವು ದಶಕಗಳ ಹಿಂದಿನ ಪೀಳಿಗೆ ಮತ್ತು ಸದ್ಯದ ಪೀಳಿಗೆಗಳ ವಿಚಾರಸರಣಿ, ದೃಷ್ಟಿಕೋನ ಹಾಗೆಯೇ ವರ್ತನೆ ಇವುಗಳಲ್ಲಿ ಅಪಾರ ವ್ಯತ್ಯಾಸವಿದೆಯೆಂದು ನಮಗೆಲ್ಲರಿಗೂ ತಿಳಿದಿದೆ. ಆದುದರಿಂದ ೨ ಪೀಳಿಗೆಗಳಲ್ಲಿನ ಅಭಿಪ್ರಾಯಭೇದ, ಅದಕ್ಕನುಸಾರ ನಡೆದಿರುವ ವಾದ-ಪ್ರತಿವಾದ, ಅರಿತುಕೊಳ್ಳುವ ಕ್ಷಮತೆ ಇವುಗಳಲ್ಲಿಯೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸವು ಉದ್ಭವವಾಗುತ್ತದೆ. ಕಾಲದ ಪ್ರವಾಹದಲ್ಲಿ ಹೀಗೆ ಘಟಿಸುವುದು ವಾಸ್ತವದಲ್ಲಿ ಸ್ವಾಭಾವಿಕವೇ ಆಗಿದೆ; ಆದರೆ ಇವೆಲ್ಲವುಗಳಲ್ಲಿ ಹಿಂದಿನ ಪೀಳಿಗೆಗಳು ಸಂರಕ್ಷಿಸಿದ ನೈತಿಕತೆ, ಸಂಸ್ಕಾರ, ಗೌರವ, ಸನ್ಮಾನ ಮತ್ತು ಜೀವನಮೌಲ್ಯಗಳ ಕೊಂಡಿಯು ನಮಗೆ ತಿಳಿಯದಂತೆಯೇ ಕಳಚಿ ಹೋಗುತ್ತಿದೆ, ಎಂಬುದು ಅಷ್ಟೇ ಸತ್ಯವಾಗಿದೆ. ಅನೇಕ ಉದಾಹರಣೆಗಳಿಂದ ಅದು ನಮ್ಮ ಗಮನಕ್ಕೂ ಬರುತ್ತದೆ. ಇತ್ತೀಚೆಗಷ್ಟೇ ಘಟಿಸಿದ ಘಟನೆಯೆಂದರೆ ಚಲನಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾದ ಅನುರಾಗ ಕಶ್ಯಪ್ ಇವರ ಮಗಳು ಆಲಿಯಾ ಕಶ್ಯಪ್ ಇವಳಿಗೆ ಸಂಬಂಧಿಸಿದ ಒಂದು ವಿಡಿಯೋ ! ಅವಳು ವಿಡಿಯೋದ ಮಾಧ್ಯಮದಿಂದ ತನ್ನ ತಾಯಿ-ತಂದೆಗೆ ಲೈಂಗಿಕ ಸಂಬಂಧ, ಕುಟುಂಬಸಂಬಂಧದ ಮತ್ತು ಗರ್ಭಧಾರಣೆ ಇವುಗಳ ಕುರಿತು ನಿಸ್ಸಂಕೋಚವಾಗಿ ತಂದೆ-ತಾಯಿ ಇಬ್ಬರಿಗೂ ಕೇಳಿದ್ದಳು. ವಿಶೇಷವೆಂದರೆ ಇವೆಲ್ಲ ಪ್ರಶ್ನೆಗಳಿಗೆ ಅವರಿಬ್ಬರೂ ತೀರಾ ನಿಶ್ಚಿಂತರಾಗಿ ಉತ್ತರವನ್ನು ನೀಡಿದರು. ‘ಡೆಟಿಂಗ್ ಮಾಡುವ (ಪ್ರಿಯಕರನೊಂದಿಗೆ ತಿರುಗಾಡುವ) ಯೋಗ್ಯ ವಯಸ್ಸು ಯಾವುದು ?’, ‘ಮೊದಲ ಲೈಂಗಿಕ ಸಂಬಂಧವನ್ನು ಯಾವಾಗ ಇಡಬೇಕು ?’, ‘ಒಂದು ವೇಳೆ ನಾನು ಗರ್ಭವತಿಯಾದರೆ ನಿಮ್ಮಿಬ್ಬರ (ತಾಯಿ-ತಂದೆಯರ) ಪ್ರತಿಕ್ರಿಯೆ ಏನಿರಬಹುದು ?’, ‘ನನ್ನ ಬಾಯ್ ಫ್ರೆಂಡ್ ನಿಮಗೆ ಇಷ್ಟವಾಗುವನೇ ?’, ಈ ಸ್ವರೂಪದಲ್ಲಿ ಆ ಪ್ರಶ್ನೆಗಳಿದ್ದವು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಂಡಿತು. ಮಗಳು ಇಂತಹ ಪ್ರಶ್ನೆಗಳನ್ನು ಕೇಳುವುದು ಮತ್ತು ತಾಯಿ-ತಂದೆಯರು ಸಹ ಅವುಗಳಿಗೆ ಬೆಂಬಲವಾಗಿ ಉತ್ತರಿಸುವುದು, ಈ ಬಗ್ಗೆ ಮೇಲ್ತರಗತಿಯ ಜನರಿಗೆ ಗರ್ವವೆನಿಸುತ್ತದೆ. ‘ನಾವು ಎಷ್ಟು ಮನಮುಕ್ತವಾಗಿ ನಮ್ಮ ಮಕ್ಕಳೊಂದಿಗೆ ಮಾತನಾಡುತ್ತೇವೆ’, ಎಂದೂ ಸಹ ಇದರಲ್ಲಿ ಹೇಳಲಾಗುತ್ತದೆ. ಮಕ್ಕಳು ಮತ್ತು ಪಾಲಕರ ನಡುವಿನ ಸಂಬಂಧದಲ್ಲಿ ಮನಮುಕ್ತತೆ ಖಂಡಿತ ಇರಬೇಕು, ಹಾಗೆಯೇ ಮಕ್ಕಳಿಗೆ ಲೈಂಗಿಕ ಸಂಬಂಧ ಅಥವಾ ಅದರ ಕುರಿತಾದ ಜ್ಞಾನ ನೀಡುವುದು ಸಹ ಅಷ್ಟೇ ಆವಶ್ಯಕವಾಗಿದೆ; ಆದರೆ ಆ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳಲು ಮತ್ತು ಪಡೆಯಲು ಎಲ್ಲಿಯಾದರೂ ಸಮತೋಲನ ಇರಬೇಕು. ಅದು ಈಗ ನಿಶ್ಚಿತವಾಗಿಯೂ ಕಾಣೆಯಾಗುತ್ತಿದೆ, ಎಂದು ಆಲಿಯಾಳ ಉದಾಹರಣೆಯಿಂದ ಕಂಡು ಬರುತ್ತದೆ. ಯಾವ ವಿಷಯವನ್ನು ತಾಯಿ-ತಂದೆಯರೊಂದಿಗೆ ಮಾತನಾಡುವುದಿರುವುದಿಲ್ಲವೋ, ಅದನ್ನು ಸಹ ಬಹಿರಂಗವಾಗಿ ವ್ಯಕ್ತ ಪಡಿಸುವುದು ಇದು ಒಂದು ರೀತಿಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೇ ಎನ್ನಬಹುದು. ಭೌತಿಕತೆ ಮತ್ತು ಭೋಗವಾದ ಇವುಗಳ ಮೂಲವು ಪಾಶ್ಚಾತ್ಯ ಸಂಸ್ಕೃತಿಯಲ್ಲಿಯೇ ಇದೆ. ಈ ಸಂಸ್ಕೃತಿಯ ಅನುಕರಣೆಯನ್ನು ಮಾಡಿದುದರಿಂದಲೇ ಇಂದಿನ ಯುವ ಪೀಳಿಗೆಯು ಅಡ್ಡದಾರಿಯನ್ನು ಹಿಡಿಯುತ್ತಿದೆ ಮತ್ತು ದಿಶಾಹೀನವಾಗುತ್ತಿದೆ. ವಂದನೀಯರಾಗಿರುವ ತಾಯಿ-ತಂದೆಯ ಎದುರು ಈ ರೀತಿ ಮಾತನಾಡುವುದು ಭಾರತೀಯ ಸಂಸ್ಕೃತಿಯ ತತ್ತ್ವಕ್ಕೆ ಸರಿಹೊಂದುವುದಿಲ್ಲ; ಸಂಸ್ಕೃತಿಯ ಗೌರವವನ್ನು ಬೀದಿಗೆಳೆಯಲಾಯಿತು. ಆದರೆ ಸಂಸ್ಕಾರಗಳು ಉಳಿದಿಲ್ಲ, ಇದುವೇ ಸತ್ಯ ! ತಾಯಿ-ತಂದೆಯ ರೊಂದಿಗೆ ಮೈತ್ರಿ ಸಂಬಂಧ ಖಂಡಿತವಾಗಿಯೂ ಇರಬೇಕು ; ಆದರೆ ಆ ಸಂಬಂಧಕ್ಕೆ ಒಂದು ಮಿತಿ ಇರಬೇಕು. ಸನ್ಮಾನ, ಗೌರವ ಇವುಗಳ ಜೋಡಣೆಯೂ ಇರಬೇಕು. ನಮ್ಮ ತಾಯಿ-ತಂದೆಯರೆಂದು ಏನೂ ಮಾತನಾಡಿದರೂ ನಡೆಯುತ್ತದೆ, ಎಂದಾಗಬಾರದು.
ಮರ್ಯಾದೆ ಮತ್ತು ಕರ್ತವ್ಯ !
ಇಂದಿನ ಮಕ್ಕಳು ಪೆಜ್ (ಪುಟ) ೩ (ಅಶ್ಲೀಲ) ಪಾರ್ಟಿಗಳು, ಫ್ಯಾಶನ್, ದುಬಾರಿ ಸಂಚಾರವಾಣಿ, ಲೈಂಗಿಕ ಸಂಬಂಧ, ಹಾಗೆಯೇ ಪಾರ್ನ್ ವಿಡಿಯೋ ಇವುಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಸೆಳೆಯಲ್ಪಡುತ್ತಿದ್ದಾರೆ. ಇವುಗಳಲ್ಲಿ ಸಿಲುಕಿದ ಮಕ್ಕಳೇ, ಪಾಲಕರೊಂದಿಗೆ ಯಾವ ವಿಷಯದಲ್ಲಿ ಮಾತುಕತೆ ನಡೆಸುವುದು ಅನವಶ್ಯಕವೋ ಆ ಕುರಿತು ಸ್ಪಷ್ಟವಾಗಿ ಚರ್ಚೆಯನ್ನು ಮಾಡುತ್ತಾರೆ. ಪಾಲಕರಿಗೆ ನಮ್ಮ ಮಕ್ಕಳು ‘ಫಾರವರ್ಡ್’ (ಮುಂದುವರಿದವರು) ಇದ್ದಾರೆ ಎಂದೆನಿಸುತ್ತದೆ. ಅನುರಾಗ ಕಶ್ಯಪ್ ಇವರು, “ಸದ್ಯದ ಮಕ್ಕಳು ಅಭಿವ್ಯಕ್ತಗೊಳಿಸುವಂತಹ ಮತ್ತು ನೇರ ನಡೆನುಡಿಯುವವರಾಗಿದ್ದಾರೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ನಮಗೆ ಎಂದಿಗೂ ಈ ರೀತಿ ಮಾತನಾಡುವ ಧೈರ್ಯವೇ ಇರಲಿಲ್ಲ. ಆದುದರಿಂದ ಪಾಲಕರು ತಮ್ಮ ಮಕ್ಕಳ ಮೇಲೆ ನಿರ್ಣಯ ಹೇರುವುದನ್ನು ನಿಲ್ಲಿಸಬೇಕು”, ಎಂದು ಹೇಳಿದರು. ಇನ್ನೊಬ್ಬರ ಮೇಲೆ ನಿರ್ಣಯ ಹೇರುವುದು ತಪ್ಪು; ಆದರೆ ‘ಮಕ್ಕಳು ಮತ್ತು ತಾಯಿ-ತಂದೆ ಈ ಸಂಬಂಧದಲ್ಲಿರುವ ಮರ್ಯಾದೆಗಳ ಉಲ್ಲಂಘನೆ ಯಾರಿಂದಲೂ ಆಗಗೊಡಬಾರದು’, ಎಂದು ಭಾರತೀಯ ಸಂಸ್ಕೃತಿಯು ಹೇಳುತ್ತದೆ; ಆದರೆ ಇಂದು ಸಂಸ್ಕೃತಿಯನ್ನು ಲೆಕ್ಕಿಸುವವರು ಯಾರು ? ವಾಸ್ತವದಲ್ಲಿ ನೋಡಿದರೆ ಇತರ ಸಂಸ್ಕೃತಿ ಮತ್ತು ಸಮಾಜ ವ್ಯವಸ್ಥೆಗಳ ತುಲನೆಯಲ್ಲಿ ಭಾರತಿಯ ಸಂಸ್ಕೃತಿಯೇ ಸಂಪೂರ್ಣ ವಿಶ್ವದಲ್ಲಿ ಸರ್ವಶ್ರೇಷ್ಠವಾಗಿದೆ. ಹೀಗಿರುವಾಗಲೂ ಅದನ್ನು ಧಿಕ್ಕರಿಸಿ ಪಾಶ್ಚಾತ್ಯ ಸಂಸ್ಕೃತಿಗಾಗಿ ರತ್ನಗಂಬಳಿಯನ್ನು ಹಾಸಿ ಅದನ್ನು ಸ್ವಾಗತಿಸುವುದು ದುರ್ದೈವವಾಗಿದೆ. ಇಂತಹ ಪರಿಸ್ಥಿತಿಯು ಇಂದು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಎಲ್ಲೆಡೆ ಇದೆ. ಕೆಲವು ತಿಂಗಳುಗಳ ಹಿಂದೆ ಹಿಂದಿ ಚಲನಚಿತ್ರದ ಓರ್ವ ಪ್ರಸಿದ್ಧ ಅವಿವಾಹಿತ ನಟಿಯು ಲೈಂಗಿಕ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದಳು. ಅನೇಕ ವರ್ತಮಾನ ಪತ್ರಿಕೆಗಳು ಈ ವಾರ್ತೆಯನ್ನೂ ಗಮನಸೆಳೆಯುವ ಶೀರ್ಷಿಕೆಗಳ ಅಂತರ್ಗತ ಪ್ರಕಟಗೊಳಿಸಿದ್ದರು. ಈ ರೀತಿಯ ಘಟನೆ, ವಾರ್ತೆಗಳು ಅಥವಾ ಆ ಕುರಿತಾದ ವಿಡಿಯೋಗಳಿಗೆ ಸಾಮಾಜಿಕ ಪ್ರಸಾರ ಮಾಧ್ಯಮಗಳೇ ದೊಡ್ಡ ಪ್ರಮಾಣದಲ್ಲಿ ವೇದಿಕೆಯನ್ನು ಲಭ್ಯ ಮಾಡಿಕೊಡುತ್ತವೆ. ಆದುದರಿಂದ ಯಾರೋ ತೆಗೆದುಕೊಂಡ ಒಂದು ಚಿಕ್ಕ ಸಂದರ್ಶನಕ್ಕೆ ಕೆಲವು ಕ್ಷಣಗಳಲ್ಲಿ ಪ್ರಸಿದ್ಧಿ ಸಿಗುತ್ತದೆ. ಅಂದರೆ ಯಾವುದನ್ನು ತೋರಿಸಲಾಗುತ್ತದೋ, ಅದಕ್ಕೆ ಇಷ್ಟು ಬೆಲೆ ಇದ್ದರೆ ಅದರಲ್ಲಿ ಅಯೋಗ್ಯವಾದುದು ಏನೂ ಇಲ್ಲ; ಆದರೆ ನೈತಿಕತೆಯ ಕಗ್ಗೋಲೆ ಮಾಡುವ ಅಥವಾ ಅತ್ಯಂತ ಹೀನ ದರ್ಜೆಯ ವಾರ್ತೆಗಳನ್ನು ಅಥವಾ ವಿಡಿಯೋಗಳನ್ನು ತೋರಿಸಿದರೆ ಭವಿಷ್ಯದಲ್ಲಿ ಅವುಗಳಿಂದ ಎಷ್ಟು ಕೆಟ್ಟ ಪರಿಣಾಮವಾಗಬಹುದು, ಎಂಬುದರ ವಿಚಾರವನ್ನು ಮಾಡದಿರುವುದೇ ಒಳ್ಳೆಯದು ! ಆಲಿಯಾಳು ಕೇವಲ ಸಂಭಾಷಣೆಯನ್ನಷ್ಟೇ ಮಾಡಿದಳು; ಆದರೆ ನಾಳೆ ಯಾರಾದರೂ ಅವಳನ್ನು ಅನುಸರಿದರೆ ಆ ಕುರಿತಾದ ಚರ್ಚೆಯನ್ನು ತಾಯಿ-ತಂದೆಯರೊಂದಿಗೆ ಮಾಡಿದರೆ, ಅದಕ್ಕೆ ಯಾರು ಜವಾಬ್ದಾರರು ? ‘ಒಂದು ವೇಳೆ ಇಂದಿನ ಪೀಳಿಗೆಯು ದೇಶದ ಭವಿಷ್ಯವಾಗಿದ್ದರೆ, ಅದು ಉಜ್ವಲವಾಗುವುದೇ ಅಥವಾ ವಿಫಲವಾಗುವುದೇ ?’, ಈ ಕುರಿತು ಪ್ರತಿಯೊಬ್ಬರೂ ವಿಚಾರ ಮಾಡಬೇಕು. ಪ್ರಸಾರ ಮಾಧ್ಯಮಗಳೂ ಏನು ತೋರಿಸಬೇಕು ಮತ್ತು ಏನನ್ನು ತೋರಿಸ ಬಾರದು, ಎಂಬ ಬಗ್ಗೆ ಮಿತಿಯನ್ನು ಪಾಲಿಸಬೇಕು. ಕೇವಲ ‘ಟಿಆರ್‌ಪಿ’ಗಾಗಿ ಯಾವುದೇ ದರ್ಜೆಯ ವಾರ್ತೆಯನ್ನು ಮುದ್ರಣಗೊಳಿಸುವುದು ಅಥವಾ ತೋರಿಸುವುದು ಇಂತಹ ಕೃತಿಗಳನ್ನು ಮಾಡುವುದನ್ನು ತಡೆಗಟ್ಟಬೇಕು. ಇದು ಅವರ ಸಮಾಜಕರ್ತವ್ಯವೇ ಆಗಿದೆ.
ಪಾಶ್ಚಾತ್ಯರ ಅಂಧಾನುಕರಣೆಗೆ ಪ್ರೋತ್ಸಾಹ ನೀಡಿದರೆ ಭಾರತೀಯರ ಅಭಿವೃದ್ಧಿಯಾಗದೇ ಉಜ್ವಲ ಸಂಸ್ಕೃತಿಯ ಅವಮಾನವೇ ಆಗುತ್ತಾ ಹೋಗುತ್ತದೆ. ಮಕ್ಕಳನ್ನು ಬೆಳೆಸುವಾಗ ನಮ್ಮ ಕಲಿಸುವಿಕೆ ಜೀವನದ ಮೌಲ್ಯಗಳಿಗೆ ಅನುಸರಿಸಿ ಇವೆಯೇ ? ಎಂದು ಪ್ರತಿಯೊಬ್ಬ ತಾಯಿ-ತಂದೆಯರು ವಿಚಾರ ಮಾಡಬೇಕು. ಹೀಗಾದಾಗಲೇ ‘ನಿಜವಾದ ಅರ್ಥದಲ್ಲಿ ಸಂಸ್ಕೃತಿಯನ್ನು ಸ್ವೀಕರಿಸಿದರು’, ಎಂದು ಹೇಳಬಹುದು !