ಚೀನಾ ಮತ್ತು ‘ಸಾಮ್ಯವಾದಿ !

ಚೀನಾದ ಸಾಮ್ಯವಾದಿ ಪಕ್ಷಕ್ಕೆ (‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’ಗೆ) ಸದ್ಯ ೧೦೦ ವರ್ಷಗಳು ಪೂರ್ಣಗೊಂಡವು. ಆ ನಿಮಿತ್ತ ಭಾರತದಲ್ಲಿನ ಚೀನಾದ ರಾಯಭಾರಿ ಕಚೇರಿಯು ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ‘ಆನ್‌ಲೈನ್’ ಕಾರ್ಯಕ್ರಮದಲ್ಲಿ ಭಾರತದ ಸಾಮ್ಯವಾದಿ ನಾಯಕರಾದ ಸೀತಾರಾಮ ಯೆಚ್ಯುರಿ, ಡಿ. ರಾಜಾ ಮತ್ತು ಇತರ ಹಾಗೆಯೇ ತಮಿಳುನಾಡಿನ ದ್ರಾವಿಡ ಮುನ್ನೆತ್ರ ಕಳಘಮ್ (ಡಿ.ಎಮ್.ಕೆ.) ಈ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಈ ನಾಯಕರು ಚೀನಾಗೆ ಶುಭಾಶಯಗಳನ್ನು ನೀಡಿದರು. ಚೀನಾ ಈ ಕುರಿತು ಅಧಿಕೃತ ವಾರ್ತೆಯನ್ನು ಪ್ರಕಟಿಸಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಗ್ಗೆ ನಾಯಕರನ್ನು ಕೇಳಿದಾಗ, ಅವರು ‘ನಾವು ಪಾಲ್ಗೊಂಡಿದ್ದೆವು’, ಎಂದು ನಾಚಿಕೆ ಇಲ್ಲದೇ ಉತ್ತರಿಸಿದರು ಮತ್ತು ನಂತರ ‘ನಮಗೆ ಯಾರೂ ದೇಶಭಕ್ತಿಯನ್ನು ಕಲಿಸಬೇಡಿ’, ಎಂದು ಸಹ ಹೇಳಿದರು.

ಭಾರತದ್ವೇಷ ಮತ್ತು ಚೀನಾದ ಮೇಲಿನ ನಿಷ್ಠೆ !

ಭಾರತದ ಸಾಮ್ಯವಾದಿ ಪಕ್ಷಗಳ ರಾಷ್ಟ್ರನಿಷ್ಠೆಯು ಸದಾ ವಿವಾದದ ವಿಷಯವಾಗಿ ಉಳಿದುಕೊಂಡಿದೆ. ಸಾಮ್ಯವಾದಿಗಳ ‘ಭಾರತದ ಬಗ್ಗೆ ನಿರ್ದಿಷ್ಟವಾಗಿ ಯಾವ ಒಳ್ಳೆಯ ದೃಷ್ಟಿಕೋನವಿದೆ ?’, ಇದೇ ಮೂಲದಲ್ಲಿ ಸರ್ವಸಾಮಾನ್ಯರಿಗೆ ತಿಳಿಯುವುದಿಲ್ಲ. ‘ಎಲ್ಲವೂ ಸಮಾನವಾಗಿ ಬೇಕು’, ಈ ತತ್ತ್ವಕ್ಕಾಗಿ ಎಲ್ಲ ವಿಷಯಗಳಲ್ಲಿ ಅಸಮಾನತೆಯನ್ನು ಅಂಗೀಕರಿಸುವ ಸಾಮ್ಯವಾದಿಗಳು ವೈಚಾರಿಕ ಗೊಂದಲದಲ್ಲಿ ಪೂರ್ತಿಯಾಗಿ ಸಿಲುಕಿಕೊಂಡಿದ್ದಾರೆ, ಎಂದು ಹೇಳಬಹುದು.

೧೯೬೨ ರ ಭಾರತ-ಚೀನಾ ಯುದ್ಧದಲ್ಲಿ ಭಾರತದ ಸಾಮ್ಯವಾದಿಗಳು ದೇಶವಿರೋಧಿ ನಿಲುವನ್ನು ತೆಗೆದುಕೊಂಡಿದ್ದರು. ಅಂದರೆ ಒಂದು ಕಡೆಗೆ ಭಾರತೀಯ ಸೈನ್ಯವು ಧೂರ್ತ ಚೀನಾದೊಂದಿಗೆ ಹೋರಾಡುತ್ತಿತ್ತು ಮತ್ತು ಇನ್ನೊಂದೆಡೆ ಭಾರತದ ಸಾಮ್ಯವಾದಿಗಳು ಚೀನಾಗೆ ಬೆಂಬಲ ನೀಡುವ ಹೇಳಿಕೆಯನ್ನು ನೀಡುತ್ತಿದ್ದರು. ಚೀನಾವು ಧೂರ್ತತನದಿಂದ ಭಾರತದ ಮೇಲೆ ಆಕ್ರಮಣ ಮಾಡಿದಾಗ ಇಲ್ಲಿನ ಸಾಮ್ಯವಾದಿಗಳು ‘ಭಾರತವೇ ಚೀನಾದ ಮೇಲೆ ಆಕ್ರಮಣ ಮಾಡಿತು’, ಎಂಬ ಚೀನಾದ ರಾಷ್ಟ್ರಪ್ರಮುಖರಿಗೆ ಶೋಭಿಸುವಂತಹ ಭಾಷೆಯನ್ನು ಮಾತನಾಡುತ್ತಿದ್ದರು. ಸಾಮ್ಯವಾದಿಗಳನ್ನು ಇಲ್ಲಿಯವರೆಗೆ ‘ಧೂರ್ತ ಮತ್ತು ಕ್ರೂರ ಸ್ವಭಾವದ, ಮಾನವೀಯತೆಯನ್ನು ಒಪ್ಪಿಕೊಳ್ಳದಿರುವ’, ಎಂದೇ ಗುರುತಿಸಲಾಗುತ್ತದೆ. ಇವೆಲ್ಲ ದುರ್ಗುಣಗಳು ಭಾರತದ ಸಾಮ್ಯವಾದಿಗಳಲ್ಲಿ ಬಹಳ ತುಂಬಿಕೊಂಡಿವೆ. ಕೇರಳದಲ್ಲಿ ಇದರ ಅನುಭವವು ಪ್ರತಿದಿನ ನಡೆಯುವ ಹಿಂದುತ್ವನಿಷ್ಠರ ಹತ್ಯೆಗಳಿಂದ ಬರುತ್ತದೆ. ಇದಕ್ಕೂ ಮೊದಲು ಅದು ಬಂಗಾಲದಲ್ಲಿ ಬರುತ್ತಿತ್ತು ! ‘ಓಣಮ್’ ಈ ಕೇರಳದ ಹಬ್ಬದ ಸಮಯದಲ್ಲಿ ಸರಕಾರವು ಜನರಿಗೆ ‘ಜನಸಂದಣಿಯನ್ನುಂಟು ಮಾಡಿ ಕೊರೋನಾವನ್ನು ಹೆಚ್ಚಿಸಬೇಡಿ’, ಎಂದು ಹೇಳಿತು ಮತ್ತು ಜನರಿಗೆ ಅಂದರೆ ಹಿಂದೂಗಳನ್ನು ಒಟ್ಟಾಗಿ ಸೇರಲು ಅಡ್ಡಿ ಮಾಡಿತು ಮತ್ತು ಬಕ್ರೀದ್‌ನಲ್ಲಿ ಮಾತ್ರ ಮತಾಂಧರಿಗೆ ಅನುಮತಿ ಮತ್ತು ರಿಯಾಯಿತಿ ನೀಡಿತು. ಇದರಿಂದ ಒಂದೇ ದಿನದಲ್ಲಿ ೨೦ ಸಾವಿರಗಳಿಗಿಂತ ಹೆಚ್ಚು ಜನರು ಕೊರೋನಾ ಸೋಂಕಿನಿಂದ ಪೀಡಿತರಾದರು. ಹಿಂದೂಗಳನ್ನು ಮುಗಿಸಲೆಂದು ಇರುವ ಸಾಮ್ಯವಾದಿಗಳ ಧೂರ್ತನೀತಿ ! ಅಯ್ಯಪ್ಪ ದೇವಸ್ಥಾನದ ಮಾರ್ಗದಲ್ಲಿ ಕೊರೊನಾ ಪರೀಕ್ಷೆಯನ್ನು ಮಾಡಲು ಭಕ್ತರಿಂದ ೨ ಸಾವಿರ ರೂ. ಗಳ ವರೆಗೆ ಹಣವನ್ನು ವಸೂಲಿ ಮಾಡಲಾಗುತ್ತದೆ ಮತ್ತು ಇನ್ನೊಂದೆಡೆ ಮೌಲವಿಗಳ ವೇತನ ಮಾತ್ರ ಸರಕಾರಿ ಖಜಾನೆಯಿಂದ ! ಅಯ್ಯಪ್ಪ ಮತ್ತು ಇತರ ದೇವಸ್ಥಾನಗಳಿಗೆ ಹೋಗಲು ಯಾವುದೇ ಸರಕಾರಿ ರಿಯಾಯಿತಿ ಇಲ್ಲ, ಹಜ್ ಯಾತ್ರೆಗೆ ಮಾತ್ರ ಜನರ ಹಣದಿಂದ ಬಿಡಲಾಗುತ್ತದೆ. ‘ಲವ್ ಜಿಹಾದ್’ ಮಾಧ್ಯಮದಿಂದ ಅಲ್ಲಿನ ಮತಾಂಧರು ನೂರಾರು ಹಿಂದೂ ಹುಡುಗಿಯರನ್ನು ಮತಾಂತರ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಘಟಿಸಿದರೂ ‘ಲವ್ ಜಿಹಾದ್ ಅಸ್ತಿತ್ವದಲ್ಲಿಯೇ ಇಲ್ಲ’, ಎಂದು ಸುಳ್ಳು ಹೇಳಿ ದುರ್ಲಕ್ಷ ಮಾಡಲಾಗುತ್ತದೆ. ಕೊನೆಗೆ ಸಾಮ್ಯವಾದಿ ಪಕ್ಷದ ಕಾರ್ಯಕರ್ತರ ಮಗಳನ್ನೇ ಮತಾಂಧರು ಓಡಿಸಿಕೊಂಡು ಹೋದಾಗ ಮತ್ತು ಕೆಲವು ಕ್ರೈಸ್ತ ಹುಡುಗಿಯರ ಮತಾಂತರವಾದ ನಂತರ ಮಾತ್ರ ಈ ಕುರಿತು ‘ಎಚ್ಚರಗೊಂಡ ಬಗ್ಗೆ’ ಸರಕಾರವು ನಾಟಕವಾಡಿತು. ಹೀಗಿದ್ದಾರೆ ಸಾಮ್ಯವಾದಿಗಳು.

ಅನೈಸರ್ಗಿಕ ಸಾಮ್ಯವಾದಿಗಳು !

ಭಾರತದ ಸಂಸ್ಕೃತಿ, ಸಭ್ಯತೆ, ಪರಂಪರೆ ಇವುಗಳೊಂದಿಗೆ ಸಾಮ್ಯವಾದಿಗಳ ಸಂಬಂಧವು ಎಂದಿಗೂ ಜೋಡಿಸಲ್ಪಟ್ಟಿಲ್ಲ; ಏಕೆಂದರೆ ಅವರ ಎಲ್ಲ ಅಂದರೆ ತೀರಾ ಸಾಮ್ಯವಾದದ ತತ್ತ್ವಜ್ಞಾನವೇ ಅನೈಸರ್ಗಿಕವಾಗಿದೆ. ಇಂತಹ ಅನೈಸರ್ಗಿಕ ತತ್ತ್ವಜ್ಞಾನ, ನಿಯಮಗಳು ಭಾರತದಂತಹ ದೇವಭೂಮಿಯಲ್ಲಿ, ಋಷಿಭೂಮಿಯಲ್ಲಿ ಎಂದಿಗೂ ಬೇರೂರಲು ಸಾಧ್ಯವೇ ಇಲ್ಲ. ಆದುದರಿಂದ ಸಾಮ್ಯವಾದಿಗಳಿಗೆ ನಿಧಾನವಾಗಿ ಹೆಜ್ಜೆಯನ್ನು ಹಿಂದಿಡಬೇಕಾಗುತ್ತಿದೆ. ಬಂಗಾಲದಲ್ಲಿ ಅನೇಕ ದಶಮಾನಗಳಿಂದಿರುವ ಅವರ ಕೋಟೆ ಕೊಚ್ಚಿ ಹೋಗಿದ್ದರೆ, ಭಾರತದ ಅನೇಕ ರಾಜ್ಯಗಳಲ್ಲಿ ಸಾಮ್ಯವಾದಿ ವಿಚಾರಸರಣಿಯನ್ನು ಕೊಂಡಾಡುವ  ಪಕ್ಷಗಳಿಗೆ ಚುನಾವಣೆಯಲ್ಲಿ ಖಾತೆಯನ್ನು ತೆರೆಯಲು ಆಗಲಿಲ್ಲ. ಕೇರಳದಲ್ಲಿ ಕೇವಲ ಮತಾಂಧರ ಓಲೈಕೆಯಿಂದ ಅವರ ಅಸ್ತಿತ್ವವು ಉಳಿದುಕೊಂಡಿತು. ಅಂದರೆ ಇಲ್ಲಿ ಸಮಾನತೆಯ ತತ್ತ್ವವನ್ನು ಕಟ್ಟಿಟ್ಟು, ಬೇರೊಂದು ಶಬ್ದಗಳಲ್ಲಿ ತಮ್ಮ ತತ್ತ್ವಜ್ಞಾನದ ಹತ್ಯೆಯನ್ನು ಮಾಡಿಯೇ ಸಾಮ್ಯವಾದಿಗಳಿಗೆ ಅಧಿಕಾರವನ್ನು ಉಳಿಸಿಡಲು ಸಾಧ್ಯವಾಗುತ್ತಿದೆ. ಇಲ್ಲವಾದರೆ ಅವರ ಬಲವೆಲ್ಲಿದೆ ? ಚೀನಾ ಗಲ್ವಾನ ಕಣಿವೆಯಲ್ಲಿ ಮತ್ತು ಭಾರತದೊಂದಿಗಿರುವ ಗಡಿಭಾಗದಲ್ಲಿ ಸತತವಾಗಿ ಆಕ್ರಮಣ ಮಾಡುತ್ತಿದೆ. ಚೀನಾ ಕೊರೋನಾದ ‘ಜನಕ’ ಆಗಿದೆ’, ಎಂದು ಜಗತ್ತು ಸಾರಿ ಸಾರಿ ಹೇಳುತ್ತಿದೆ. ಅದು ಅನೇಕ ದೇಶಗಳನ್ನು ವಲಸೆ ಹೋಗಲು ಹಚ್ಚಿದೆ. ಅನೇಕರ ಸಂಸಾರವನ್ನು ಹಾಳು ಮಾಡಿದೆ. ಚೀನಾದಲ್ಲಿ ಆ ತುಲನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ವುಹಾನ ಮತ್ತು ಶಾಂಘಾಯನಲ್ಲಿ ಕೆಲವು ಸಾವಿರ ವ್ಯಕ್ತಿಗಳ ಪ್ರಾಣ ಹೋಯಿತು, ಅನಂತರ ಮುಂದೆ ಯಾವುದೇ ಮಾಹಿತಿ ಹೊರಗೆ ಬರಲಿಲ್ಲ. ಜಾಗತಿಕ ಆರೋಗ್ಯ ಪರಿಷತ್ತು ಕೊರೋನಾದ ಉಗಮಸ್ಥಾನವನ್ನು ಕಂಡು ಹಿಡಿಯಲು ಚೀನಾಗೆ ಹೋಗಿ ಕೈ ಅಲ್ಲಾಡಿಸುತ್ತಾ ಹಿಂದೆ ಬಂದಿತು. ಆದುದರಿಂದ ಚೀನಾಗೆ ‘ನಾವು ಏನನ್ನೂ ಮಾಡಬಹುದು’, ಎಂದು ಬಹುಶಃ ಅನಿಸಿರಬಹುದು. ಪರಿಣಾಮಸ್ವರೂಪ ತಾಲಿಬಾನಗೆ ಈ ಅತ್ಯಂತ ಕ್ರೂರ ಮತ್ತು ಘಾತಕ ಭಯೋತ್ಪಾದಕ ಸಂಘಟನೆಯೊಂದಿಗೆ ಸ್ನೇಹ ಬೆಳೆಸುವಾಗ ಚೀನಾ ಕಾಣಿಸುತ್ತದೆ. ತಾಲಿಬಾನದ ಪ್ರಮುಖರು ಚೀನಾಗೆ ಹೋಗಿ ಚೀನಾದ ಮಂತ್ರಿಗಳನ್ನು ಭೇಟಿ ಮಾಡಿದರು. ಅವರ ಒಟ್ಟಾಗಿ ಸೇರಿದ ಎದುರುಬದುರು ಇರುವ ಛಾಯಾಚಿತ್ರವು ಹೇಗೆ ಪ್ರಕಟವಾಗುತ್ತದೆ ಮತ್ತು ‘ಚೀನಾದ ನಾಗರಿಕರಿಗೆ ಏನೂ ಮಾಡುವುದಿಲ್ಲ’, ಎಂಬ ಹೇಳಿಕೆಯನ್ನು ತಾಲಿಬಾನ ಹೇಗೆ ಕೊಡುತ್ತದೆ. ಇದೆಲ್ಲವೂ ವಿಚಿತ್ರವಾಗಿದೆ !

ಈಗ ನಿಸರ್ಗವೇ ಚೀನಾಗೆ ಅದು ಜೋಪಾಸನೆ ಮಾಡುತ್ತಿರುವ ಅಸಮಾತೆಯ ಬಗ್ಗೆ ಶಿಕ್ಷೆಯನ್ನು ನೀಡಲು ನಿರ್ಧರಿಸಿರುವುದು ಕಾಣಿಸುತ್ತದೆ. ಚೀನಾದಲ್ಲಿ ನಡೆದ ಅತಿವೃಷ್ಟಿಯಿಂದ ಅನೇಕ ಸ್ಥಳಗಳಲ್ಲಿ ನೆರೆ ಬಂದಿದ್ದು ಜನವಸತಿಗಳಲ್ಲಿ ನೀರು ನುಗ್ಗಿ ಬಹಳ ಹಾನಿಯಾಗಿದೆ. ಲಕ್ಷಗಟ್ಟಲೆ ಜನರನ್ನು ಸ್ಥಳಾಂತರಿಸಲಾಗಿದೆ. ಚೀನಾದ ಅನೇಕ ಅಣೆಕಟ್ಟುಗಳು ತುಂಬಿ ಹರಿಯತೊಡಗಿದುದರಿಂದ ಹಾಹಾಕಾರವೆದ್ದಿದೆ. ಕೃತಕ ಚಂದ್ರ ಮತ್ತು ಸೂರ್ಯರನ್ನು ಸೃಷ್ಟಿಸುವ ಚೀನಾ ಈಗ ಈ ನೆರೆಯ ನೀರನ್ನು ನುಂಗಿ ಹಾಕುವ ಚಮತ್ಕಾರವನ್ನು ಮಾಡಬಹುದೇ ? ಈಗ ನೆರೆಯೇ ಚೀನಾವನ್ನು ಯಾವ ಸ್ಥಿತಿಗೆ ಕರೆದುಕೊಂಡು ಹೋಗಬೇಕು ಎಂದು ನಿಶ್ಚಯಿಸುವುದು, ಅಂತಹ ಪರಿಸ್ಥಿತಿ ಇದೆ; ಆದರೆ ಇದನ್ನು ಚೀನಾ ಸ್ವೀಕರಿಸಬಹುದೇ ? ಈ ವಿಷಯವು ಭಾರತದಲ್ಲಿನ ಸಾಮ್ಯವಾದಿ ಅಂದರೆ ಚೀನಾಪ್ರೇಮಿಗಳಿಗಾಗಿ ಸತ್ಯದರ್ಶನವಾಗಿದೆ. ಸಾಮ್ಯವಾದಿಗಳು ತಾವೇ ಸುಧಾರಿಸುವುದು ಸಾಧ್ಯವಿಲ್ಲ. ಆದುದರಿಂದ ಭಾರತ ಸರಕಾರವು ಈ ಭಾರತವಿರೋಧಿಗಳ ಮೇಲೆ ಕಠೋರ ಕ್ರಮವನ್ನು ಕೈಗೊಂಡು ರಾಷ್ಟ್ರವಿರೋಧಿಗಳಿಗೆ ಭಾರತದಲ್ಲಿ ಕೇವಲ ಸೆರೆಮನೆಯೇ ನಿಜವಾದ ಸ್ಥಾನವಾಗಿದೆ, ಎಂದು ಕೃತಿಯಿಂದ ತೋರಿಸಿಕೊಡಬೇಕು ಮತ್ತು ಭಾರತೀಯರ ಗೌರವವನ್ನು ಬೆಳೆಸಬೇಕು, ಎಂಬುದೇ ಅಪೇಕ್ಷೆ !