ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಸರಕಾರವು ಜನಸಂಖ್ಯಾ ನಿಯಂತ್ರಣ ಕಾಯದೆಯ ಮಸೂದೆಯನ್ನು ತಯಾರಿಸಿದೆ ಮತ್ತು ಆ ಕುರಿತು ಜನತೆಯ ಅಭಿಪ್ರಾಯವನ್ನು ಕೇಳಿದೆ. ಈ ಕಾಯದೆಗನುಸಾರ ೧ ಮಗು ಇರುವವರಿಗೆ ವಿಶೇಷ ಸೌಲಭ್ಯ ದೊರಕುವುದು ಮತ್ತು ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಯೋಜನೆಗಳ ಲಾಭವನ್ನು ಪಡೆಯಲು ಆಗುವುದಿಲ್ಲ, ಚುನಾವಣೆಯನ್ನು ಸ್ಪರ್ಧಿಸಲು ಆಗುವುದಿಲ್ಲ ಮತ್ತು ಪದೋನ್ನತಿ (ಪ್ರೋಮೋಷನ್) ಸಿಗುವುದಿಲ್ಲ. ೨ ಮಕ್ಕಳ ನಂತರ ಕುಟುಂಬ ನಿಯೋಜನೆಯನ್ನು ಮಾಡಿಸಿಕೊಳ್ಳುವವರಿಗೆ ಮನೆ ಖರೀದಿಗಾಗಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು. ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅತ್ಯಂತ ದಿಟ್ಟತನದ ನಿರ್ಣಯವೆನ್ನಬಹುದು. ದೇಶದ ಜನಸಂಖ್ಯೆಯು ೧೨೫ ಕೋಟಿಗಳ ಸಂಖ್ಯೆಯನ್ನು ದಾಟಿದೆ. ಕೆಲವು ವರ್ಷಗಳ ನಂತರ ಜನಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕುವ ಸ್ಥಿತಿ ಇದೆ. ಹೀಗಿರುವಾಗ ಜನಸಂಖ್ಯೆಯನ್ನು ನಿಯಂತ್ರಿಸಲು ಉಪಾಯ ಯೋಜನೆಯನ್ನು ಮಾಡುವುದು ಆವಶ್ಯಕವಾಗಿದೆ. ದೇಶದಲ್ಲಿ ವಿವಿಧ ಘಟಕಗಳಿಂದ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಉಪಾಯಯೋಜನೆಯನ್ನು ಮಾಡುವ ಬೇಡಿಕೆಯನ್ನು ಆಗಾಗ ಮಾಡಲಾಗುತ್ತದೆ; ಆದರೆ ಅದರತ್ತ ಅಷ್ಟು ಗಾಂಭೀರ್ಯದಿಂದ ಗಮನ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕೈಗೊಂಡ ನಿರ್ಣಯವು ಪ್ರಶಂಸನೀಯವೆಂದು ಹೇಳಬಹುದು ! ಅವರು ಮಂಡಿಸಿದ ಈ ಕಾಯದೆಯಿಂದ ಅವರಿಗೆ ತೀವ್ರ ವಿರೋಧವಾಗುವುದು ನಿಶ್ಚಿತವಿದೆ; ಆದರೆ ಅವರಿಗೆ ಆ ಕುರಿತು ಯಾವುದೇ ಚಿಂತೆ ಇಲ್ಲ. ಇಂತಹ ಮಸೂದೆಯನ್ನು ತಯಾರಿಸಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಬಲಿಷ್ಠವಾದ ಉಪಾಯಯೋಜನೆಯನ್ನು ಮಾಡಿದವರಲ್ಲಿ ಉತ್ತರಪ್ರದೇಶವು ದೇಶದ ಮೊದಲ ರಾಜ್ಯವಾಗಿದೆ.
ಪ್ರಖರ ನೇತೃತ್ವ !
ಮುಖ್ಯಮಂತ್ರಿಗಳಾದ ನಂತರ ಯೋಗಿ ಆದಿತ್ಯನಾಥರ ಆಡಳಿತವು ಯಾವಾಗಲೂ ಕಠಿಣವಾದ ನಿರ್ಧಾರಗಳನ್ನು ಕೈಗೊಂಡಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಗಳಾಗುವ ಮೊದಲು ಅರಾಜಕತೆ ಪರಿಸ್ಥಿತಿ ಇತ್ತು. ಹತ್ಯೆ, ಅಪಹರಣ, ಲವ್ ಜಿಹಾದ್, ಹಿಂದೂ-ಮುಸಲ್ಮಾನರಲ್ಲಿ ಗಲಭೆಗಳು ಅಲ್ಲಿ ಯಾವಾಗಲೂ ಇದ್ದವು. ಸ್ಥಳೀಯ ಗೂಂಡಾಗಳ ದೌರ್ಜನ್ಯವು ಹೆಚ್ಚಾಗಿತ್ತು. ಅಂತಹ ಸಮಯದಲ್ಲಿ ಇಂತಹ ಬೃಹತ್ ರಾಜ್ಯವನ್ನು ಸಂಭಾಳಿಸುವುದು, ಇದು ಸತ್ವಪರೀಕ್ಷೆಯೇ ಆಗಿತ್ತು. ಯೋಗಿಯವರು ಮೊದಲು ಸ್ಥಳೀಯರಿಗೆ ತಲೆನೋವಾಗಿರುವ ಗುಂಡಾಗಳ ಭಯೋತ್ಪಾದನೆಯನ್ನು ನಿಲ್ಲಿಸಲು ಆರಂಭಿಸಿದರು. ಅದಕ್ಕೂ ಮೊದಲು ಪೊಲೀಸ್ ದಳದಲ್ಲಿನ ೧೦೦ ಕ್ಕಿಂತಲೂ ಹೆಚ್ಚು ನಿಷ್ಕ್ರಿಯ ಪೊಲೀಸರನ್ನು ಮನೆಗೆ ಕಳಿಸಿದರು. ಪೊಲೀಸ್ ದಳದಲ್ಲಿನ ಸುಧಾರಣೆಯ ನಂತರ ಗೂಂಡಾಗಳ ಭಯೋತ್ಪಾದನೆಯನ್ನು ಹತ್ತಿಕ್ಕಲು ಹೊಸ ಪೊಲೀಸರಿಗೆ ನೇರವಾಗಿ ಗುಂಡಿಕ್ಕಲು ಆದೇಶಿಸಿದರು. ಇದರಿಂದ ಪೊಲೀಸರ ಮನೋಬಲವು ಹೆಚ್ಚಾಗಿ ಅವರು ಅನೇಕ ಗೂಂಡಾಗಳನ್ನು ಚಕಮಕಿಯಲ್ಲಿ ಕೊಂದು ಹಾಕಿದರು. ಈ ಸಮಯದಲ್ಲಿ ಎಂದಿನಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಪುಕ್ಕಟೆ ಸಲಹೆಗಳನ್ನು ನೀಡಿದರು, ಹಾಗೆಯೇ ಗೂಂಡಾಗಳನ್ನು ಕೊಲ್ಲಬಾರದೆಂಬ ಸೂಚನೆಯನ್ನು ನೀಡಿ ಕಾರ್ಯಾಚರಣೆಯಲ್ಲಿ ಅಡಚಣೆಗಳನ್ನು ತರಲು ಪ್ರಯತ್ನಿಸಿದರು; ಆದರೆ ಯೋಗಿಯವರು ಯಾವುದಕ್ಕೂ ಜಗ್ಗದೇ ಕಾರ್ಯಾಚರಣೆಯನ್ನು ಮುಂದುವರಿಸಿದರು. ‘ಗುಂಡಾಗಳನ್ನು ಕೊಲ್ಲುವುದು ಬೇಡ, ಹಾಗಾದರೆ ಅವರನ್ನು ಪೂಜಿಸಬೇಕೇ ?’ ಎಂದು ಅವರು ಮಾನವ ಹಕ್ಕು ಆಯೋಗಕ್ಕೆ ಪ್ರತಿ ಪ್ರಶ್ನೆ ಕೇಳಿದರು. ‘ಲವ್ ಜಿಹಾದ್’ ಮೂಲಕ ಮತಾಂತರ ಮಾಡಿ ಹಿಂದೂ ಹೆಣ್ಣುಮಕ್ಕಳ ಜೀವನವನ್ನು ನಾಶ ಮಾಡಲಾಗುತ್ತದೆ. ಹೆಚ್ಚಾಗಿ ಇಂತಹ ಪ್ರಕರಣಗಳು ಘಟಿಸುತ್ತವೆ, ಎಂದು ತಿಳಿದಾಗ ಯೋಗಿಯವರು ಲವ್ ಜಿಹಾದ್‌ಅನ್ನು ಪ್ರತಿ ಬಂಧಿಸುವ ಮತಾಂತರ ನಿಷೇಧ ಕಾನೂನು ಜಾರಿಗೆ ತಂದರು. ಈ ಕಾಯದೆಗೂ ಸಾಕಷ್ಟು ವಿರೋಧವಾಯಿತು; ಆದರೆ ಯೋಗಿ ಯವರು ಅದನ್ನು ಮಾಡಿ ತೋರಿಸಿದರು.
ಗಲಭೆಕೋರರಿಗೆ ಮತ್ತು ಅಪರಾಧಿಗಳಿಗೆ ಕಡಿವಾಣ !
ಹಾಗೆ ನೋಡಿದರೆ ಗಲಭೆಗಳಿಗಾಗಿ ಉತ್ತರಪ್ರದೇಶವು ಕುಪ್ರಸಿದ್ಧವಾಗಿತ್ತು. ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಈ ಕಾಯದೆಗಳನ್ನು ಜಾರಿಗೆ ತರುವ ನಿರ್ಣಯವನ್ನು ತೆಗೆದುಕೊಂಡ ನಂತರ ಉತ್ತರ ಪ್ರದೇಶದಲ್ಲಿ ಲಖನೌ, ಕಾನಪೂರ ಮಹಾನಗರಗಳಲ್ಲಿ ಗಲಭೆಗಳು ಭುಗಿಲೆದ್ದವು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲಾಯಿತು. ಆಗ ಯೋಗಿಯವರು ‘ಗಲಭೆಕೋರರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಿದ್ದೇವೆ; ಜೊತೆಗೆ ಅವರ ಸಂಪತ್ತನ್ನೂ ಜಪ್ತಿ ಮಾಡಲಾಗುವುದು’, ಎಂಬ ಎಚ್ಚರಿಕೆಯನ್ನು ನೀಡಿದರು ಮತ್ತು ಪೊಲೀಸರಿಗೆ ಗಲಭೆಯನ್ನು ಬೇಗನೆ ನಿಯಂತ್ರಿಸಲು ಆದೇಶವನ್ನು ನೀಡಿದರು. ‘ಈ ಕಾಯದೆಯು ಸ್ಪಷ್ಟವಾಗಿದೆ, ಈ ಮೂಲಕ ಯಾವುದೇ ಸ್ಥಳೀಯ ಮುಸಲ್ಮಾನರನ್ನು ಹೊರಗೆ ಹಾಕಲಾಗುವುದಿಲ್ಲ; ಆದರೆ ಯಾರಿಗೆ ಕಾಯದೆಯನ್ನು ಅರಿತುಕೊಳ್ಳದೇ ಗೊಂದಲವನ್ನು ಸೃಷ್ಟಿಸುವುದಿದೆ, ಅವರಿಗೆ ಕಾಯದೆಯನ್ನು ಯಾವ ರೀತಿ ತಿಳಿಸಿಕೊಡಬೇಕು ? ಎಂದು ನಮಗೆ ಚೆನ್ನಾಗಿ ತಿಳಿದಿದೆ’, ಎಂದು ಸಹ ಎಚ್ಚರಿಸಿದರು.
ರಾಜ್ಯದಲ್ಲಿ ನಡೆಸಿದ ಗಲಭೆ ಮತ್ತು ಹತ್ಯೆಗಳಂತಹ ಅಪರಾಧಗಳಲ್ಲಿನ ಅಪರಾಧಿಗಳ ಛಾಯಾಚಿತ್ರಗಳನ್ನು ಅವರು ಉತ್ತರಪ್ರದೇಶದಲ್ಲಿನ ವೃತ್ತಗಳಲ್ಲಿ ಅಂಟಿಸಿದರು. ಅವರ ಮೇಲೆ ಕಠಿಣ ಕಲಮ್ ಗಳನ್ನು ದಾಖಲಿಸಿದರು. ಉಚ್ಚ ನ್ಯಾಯಾಲಯದಲ್ಲಿ ಯೋಗಿಯವರ ಈ ಕೃತಿಗಳ ವಿರುದ್ಧ ತೀರ್ಪು ಬಂದಾಗ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರು; ಆದರೆ ತಮ್ಮ ನಿರ್ಣಯದ ಬಗ್ಗೆ ಬದ್ಧರಾಗಿದ್ದರು. ಯೋಗಿಯವರು ಈಗ ಸಿದ್ಧ ಮಾಡಿದ ಕಾಯದೆಗಳ ಮಸೂದೆಯು ಕೆಲವು ಪ್ರಮಾಣದಲ್ಲಿ ಸಮಾನ ನಾಗರಿಕ ಕಾಯಿದೆಗೆ ಸ್ವಲ್ಪ ನಿಕಟವಿದೆ. ಇದರಿಂದ ಅನೇಕ ಪತ್ನಿಯರನ್ನು ಮಾಡಿಕೊಳ್ಳುವುದು ಮತ್ತು ಅನೇಕ ಮಕ್ಕಳಿಗೆ ಜನ್ಮ ನೀಡುವುದು, ಇಂತಹ ಪ್ರವೃತ್ತಿಗಳಿಗೆ ಖಂಡಿತವಾಗಿಯೂ ಕಡಿವಾಣ ಬೀಳಲಿದೆ.
ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥರು ಒಂದು ಮಠದ ಮಠಾಧೀಶರೂ ಆಗಿದ್ದಾರೆ. ಅವರು ಜನತೆಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಹಿಂದೆ ಏರ್ಪಡಿಸುತ್ತಿದ್ದ ಜನತಾ ದರಬಾರಿನಲ್ಲಿ ಹಿಂದೂಗಳಿಗಿಂತ ಮುಸಲ್ಮಾನ ಧರ್ಮದ ಸ್ತ್ರೀಯರೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಯೋಗಿಗಳು ಅವರ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತಿದ್ದರು. ಇದು ಅವರು ಯೋಗಿಯವರ ಮೇಲೆ ತೋರಿಸಿದ ವಿಶ್ವಾಸವೇ ಆಗಿದೆ. ಕೇವಲ ಸರ್ವಧರ್ಮ ಸಮಭಾವದ ಪೊಳ್ಳು ಹರಟೆಯನ್ನು ಹೊಡೆದು ಕೇವಲ ಮುಸಲ್ಮಾನರನ್ನು ಹೆಚ್ಚು ಓಲೈಸುವವರ ತುಲನೆಯಲ್ಲಿ ಹಿಂದುತ್ವವನ್ನು ಪೋಷಿ ಸುತ್ತಾ ಸಹಾಯ ಮಾಡುವ ಯೋಗಿಯವರು ಎಲ್ಲರಿಗೂ ಹೆಚ್ಚು ಆತ್ಮೀಯರೆಂದು ಅನಿಸುತ್ತದೆ, ಇದರಲ್ಲಿ ಸಂದೇಹವೇ ಇಲ್ಲ.
‘ನಾನು ಕಟ್ಟಾವಾದಿ ಹಿಂದೂ ಆಗಿರುವುದರಿಂದ ನಮಾಜ್‌ಗೆ ಉಪಸ್ಥಿತವಿರುವುದಿಲ್ಲ’, ಎಂದು ಕೇವಲ ಯೋಗಿಯವರೆ ಹೇಳಬಹುದು. ಹಿಂದೂ ದೇವತೆ ಮತ್ತು ಧರ್ಮ ಇವುಗಳನ್ನು ಅವಮಾನಿಸುವ ಲೇಖನವನ್ನು ಟ್ವಿಟರ್‌ನಲ್ಲಿ ಹಾಕಿದ ಬಗ್ಗೆ ಟ್ವಿಟರ್ ವಿರುದ್ಧ ಮೊದಲ ಅಪರಾಧವು ಉತ್ತರಪ್ರದೇಶದಲ್ಲಿಯೇ ದಾಖಲಾಯಿತು. ಆಗ ಕೇಂದ್ರೀಯ ಸ್ತರದಲ್ಲಿ ಕೇವಲ ಟ್ವಿಟರ್ ಮೇಲೆ ಕಾರ್ಯಾಚರಣೆಯನ್ನು ಮಾಡಲು ಎಚ್ಚರಿಕೆಯನ್ನು ನೀಡಲಾಗುತ್ತಿತ್ತು. ‘ಅಪರಾಧಿಯು ಎಷ್ಟೇ ಬಲಿಷ್ಠನಾಗಿರಲಿ, ಹಿಂದೂ ಧರ್ಮ, ರಾಷ್ಟ್ರ, ಜನತೆ ಇವುಗಳ ಹಿತದ ನಿರ್ಣಯವನ್ನು ನೀಡುವಾಗ ಯಾವುದೇ ಉಪೇಕ್ಷೆಯನ್ನು ಸಹಿಸಲಾಗುವುದಿಲ್ಲ’, ಎಂಬ ಕಠೋರ ಸಂದೇಶವನ್ನು ಟ್ವಿಟರ್ ಮೂಲಕದ ಕಾರ್ಯಾಚರಣೆಯಲ್ಲಿ ಯೋಗಿಯವರು ನೀಡಿದರು. ಯೋಗಿಯವರ ಈ ಸಾಮರ್ಥ್ಯವು ಅನುಕರಣೀಯ ಮತ್ತು ಆದರ್ಶವಾಗಿದೆ. ಆದರ್ಶ ಆಡಳಿತಗಾರರ ಅಳತೆಗೋಲನ್ನು ಯೋಗಿಯವರು ತಮ್ಮ ಕೃತಿಗಳಿಂದ ಮಾಡಿ ತೋರಿಸುತ್ತಿದ್ದಾರೆ. ಯೋಗಿಯವರಿಂದ ಪ್ರೇರಣೆಯನ್ನು ಪಡೆದು ದೇಶದ ಸ್ತರದಲ್ಲಿ ಸಮಾನನಾಗರಿಕ ಕಾಯದೆಯಾಗಬೇಕು ಮತ್ತು ಅದರ ಕಾರ್ಯಾಚರಣೆಯೂ ಕೂಡಲೇ ಆಗಬೇಕೆಂಬ ಅಪೇಕ್ಷೆ ಇದೆ.