ಕೊಲೆಗಡುಕ ಕಾಂಗ್ರೆಸ್ಸಿಗೆ ಶಿಕ್ಷೆಯಾಗಬೇಕು !

‘ಟೈಮ್ಸ್ ನೌ’ನಲ್ಲಿ ಮಾತನಾಡುತ್ತಿರುವ ವಿಕ್ರಮ್ ಸಂಪತ್

ದೇಶದಲ್ಲಿ ಮತ್ತು ವಿದೇಶಗಳಲ್ಲಿ ಅನೇಕ ಸ್ಥಳಗಳಲ್ಲಿ ನೆರೆಹಾವಳಿಯ ಸ್ಥಿತಿಯಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಪಕ್ಕದ ಗೋವಾ ರಾಜ್ಯಗಳಲ್ಲಿಯೂ ಅನೇಕ ಸ್ಥಳಗಳಲ್ಲಿ ನೆರೆಹಾವಳಿಯ ಪರಿಸ್ಥಿತಿ ಉದ್ಭವಿಸಿದ್ದರಿಂದ, ಅನೇಕ ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಇದು ಬಹಳ ದೊಡ್ಡ ಸಂಕಟವಾಗಿದೆ. ಈ ವಿಷಯದಲ್ಲಿ ದೇಶಾದ್ಯಂತ ಚರ್ಚೆಗಳು ನಡೆದಿವೆ. ಅದೇ ಸಮಯದಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯ ಬಳಿಕ ಮಹಾರಾಷ್ಟ್ರದಲ್ಲಿ ನಡೆದ ಬ್ರಾಹ್ಮಣರ ಹತ್ಯೆಯ ಬಗ್ಗೆಯೂ ಚರ್ಚೆಯಾಗುವುದು ಆವಶ್ಯಕವಾಗಿದೆ !  ಹೆಸರಾಂತ ಲೇಖಕರು ಮತ್ತು ಇತಿಹಾಸಕಾರರಾದ ವಿಕ್ರಮ ಸಂಪತರವರು ಪ್ರಸಿದ್ಧ ಆಂಗ್ಲ ಸುದ್ದಿವಾಹಿನಿ ‘ಟೈಮ್ಸ ನೌನಲ್ಲಿ ಪತ್ರಕರ್ತ ನಾವಿಕಾ ಕುಮಾರ ಇವರೊಂದಿಗೆ ಮಾಡಿದ ಚರ್ಚೆಯ ಸಮಯದಲ್ಲಿ ಸ್ವಾತಂತ್ರ್ಯವೀರ ಸಾವರಕರ ಇವರ ಕುರಿತು, ಹಾಗೆಯೇ ಮಹಾತ್ಮಾ ಗಾಂಧಿಯವರ ಹತ್ಯೆಯ ಬಳಿಕ ಮಹಾರಾಷ್ಟ್ರದಲ್ಲಿ ನಡೆದ ಬ್ರಾಹ್ಮಣವಿರೋಧಿ ಗಲಭೆಗಳ ಕುರಿತು ಮಾಹಿತಿಯನ್ನು ನೀಡಿದರು. ಈ ಅಂಶಗಳು ಸದ್ಯದ ಪೀಳಿಗೆಗೆ ಅಥವಾ ಹಿಂದಿನ ೧-೨ ಪೀಳಿಗೆಗಳಿಗೂ ಸರಿಯಾಗಿ ಗೊತ್ತಿಲ್ಲ; ಏಕೆಂದರೆ ಆ ಸಮಯದಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನವರು ಈ ವಿಷಯವನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿ ಹಾಕಿದರು; ಏಕೆಂದರೆ ಈ ಗಲಭೆಗಳನ್ನು ಕಾಂಗ್ರೆಸ್‌ನವರು ಮತ್ತು ಬ್ರಾಹ್ಮಣವಿರೋಧಿ ಸಂಘಟನೆಗಳು ನಡೆಸಿದ್ದವು. ಈ ಗಲಭೆಗಳಲ್ಲಿ ೨ ರಿಂದ ೫ ಸಾವಿರ ಬ್ರಾಹ್ಮಣರ ಹತ್ಯೆಯನ್ನು ಮಾಡಲಾಯಿತು ಮತ್ತು ೨೦ ಸಾವಿರ ಅಂಗಡಿ-ಮನೆಗಳನ್ನು ಸುಟ್ಟು ಹಾಕಲಾಯಿತು ಎಂದು ವಿಕ್ರಮ ಸಂಪತರವರು ಈ ಸಮಯದಲ್ಲಿ ಆರೋಪಿಸಿದರು. ‘ಮೃತರ ಸಂಖ್ಯೆ ೮ ಸಾವಿರವೂ ಇರಬಹುದು, ಎಂದೂ ಅವರು ಹೇಳಿದರು. ‘ಪ್ರಗತಿಪರರು ಎಂದು ಹೇಳಿಸಿಕೊಳ್ಳುವವರ, ಈ ಅಂಶಗಳುಈಗ ಬೆಳಕಿಗೆ ಬಂದಿವೆ. ಆದುದರಿಂದ ಇದರ ಮೇಲೆ ಚರ್ಚೆಗಳಾಗುವುದು ಆವಶ್ಯಕವಾಗಿದೆ. ಮಹಾರಾಷ್ಟ್ರದ ಇತಿಹಾಸಕ್ಕೆ ಕಾಂಗ್ರೆಸ್‌ನವರು ಮತ್ತು ಬ್ರಾಹ್ಮಣ ವಿರೋಧಿ ಸಂಘಟನೆಗಳು ಎಷ್ಟು ದೊಡ್ಡ ಕಳಂಕವನ್ನು ಹಚ್ಚಿವೆ ಎನ್ನುವುದು ಜಗತ್ತಿಗೆ ತಿಳಿಯಬೇಕು.

ಇದು ಹಿಂದಿನದನ್ನು ಮತ್ತೆ ಕೆದಕುವ ಪ್ರಯತ್ನವಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಸ್ಥಿತಿ ನಿರ್ಮಾಣವಾಗಬಹುದು, ಇಂತಹ ಹೇಳಿಕೆಗಳು ವ್ಯಕ್ತವಾಗ ಬಹುದು; ಆದರೆ ಅದು ಶುದ್ಧ ಕಪಟತನವೇ ಆಗಿರುವುದು. ಯಾವಾಗ ಈ ಗಲಭೆಗಳು ನಡೆದವೋ, ಆ ಸಮಯದಲ್ಲಿ ಈ ‘ಅಶಾಂತತೆಯನ್ನು ಯಾರು ಸೃಷ್ಟಿಸಿದರು ?, ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾರು ಹದಗೆಡಿಸಿದರು ?, ಇದರ ಚರ್ಚೆಯಂತೂ ಆಗಲೇ ಬೇಕು. ಇದಕ್ಕೆ ಕಾರಣರಾಗಿರುವವರ ಹೆಸರು, ಅವರ ಸಂಘಟನೆಗಳೂ ಜಗತ್ತಿನ ಎದುರಿಗೆ ಬರಬೇಕು. ೫ ಸಾವಿರ ಜನರ ಹತ್ಯೆಯನ್ನು ಮಾಡುವುದು, ೨೦ ಸಾವಿರ ಮನೆ, ಅಂಗಡಿಗಳನ್ನು ಸುಡುವುದು ಸಣ್ಣ ಘಟನೆಯೇನಲ್ಲ. ಸದ್ಯದ ನೆರೆಹಾವಳಿಯ ಹಾನಿಯನ್ನು ನೋಡಿದರೆ ಈ ಹಾನಿಯು ಅದಕ್ಕಿಂತ ದೊಡ್ಡದಾಗಿದೆ, ಇದನ್ನು ಗಮನದಲ್ಲಿಡಬೇಕು. ಕಾಂಗ್ರೆಸ್ಸಿನವರ ಮೇಲೆ ವರ್ಷ ೧೯೮೪ ರಲ್ಲಿ ದೆಹಲಿಯಲ್ಲಿ ಮೂರೂವರೆ ಸಾವಿರ ಸಿಕ್ಖ್‌ರ ಹತ್ಯೆಯನ್ನು ಮಾಡಿರುವ ಆರೋಪವಿದೆ. ‘ಕಾಂಗ್ರೆಸ್‌ನವರು ಮಾಡಿರುವ ಬ್ರಾಹ್ಮಣರ ಹತ್ಯಾಕಾಂಡದ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆದು ಕೇಂದ್ರದಲ್ಲಿನ ಭಾಜಪ ಸರಕಾರವು ಇದರ ವಿಚಾರಣೆಯನ್ನು ಮಾಡಿ ಸಂಪೂರ್ಣ ಘಟನಾವಳಿಗಳನ್ನು ಜಗತ್ತಿನ ಎದುರಿಗೆ ಮಂಡಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ. ಗಾಂಧಿಯವರ ಹತ್ಯೆಯನ್ನು ಚಿತ್ಪಾವನ ಬ್ರಾಹ್ಮಣರಾಗಿದ್ದ ಪಂಡಿತ ನಥುರಾಮ ಗೋಡ್ಸೆಯವರು ಮಾಡಿದ್ದರಿಂದ ಮತ್ತು ಅವರು ಮಹಾರಾಷ್ಟ್ರದವರಾಗಿದ್ದರಿಂದ ಮಹಾರಾಷ್ಟ್ರದಲ್ಲಿನ ಬ್ರಾಹ್ಮಣರನ್ನು ಗುರಿ ಮಾಡಲಾಗಿತ್ತು. ಇಂದಿರಾ ಗಾಂಧಿಯವರ ಹತ್ಯೆಯನ್ನು ಸಿಕ್ಖ್‌ನು ಮಾಡಿದ್ದರಿಂದ ಸಿಕ್ಖ್‌ರನ್ನು ಗುರಿ ಮಾಡಲಾಗಿತ್ತು. ಜಾತ್ಯತೀತ ಭಾರತದಲ್ಲಿ ಮತ್ತು ಪ್ರಜಾಪ್ರಭುತ್ವವಿರುವ ದೇಶದಲ್ಲಿ ಇಂತಹ ಘಟನೆಗಳು ನಡೆದವು. ಇವು ದೇಶಕ್ಕೆ ತಗುಲಿದ ದೊಡ್ಡ ಕಳಂಕವಾಗಿದೆ.

ಪ್ರಗತಿ (ಅಧೋಗತಿ)ಪರರು ಏಕೆ ಸುಮ್ಮನಿದ್ದಾರೆ ?

ಈ ಗಲಭೆಯಲ್ಲಿ ಸ್ವಾತಂತ್ರ್ಯವೀರ ಸಾವರಕರರ ಸಹೋದರ ನಾರಾಯಣ ಸಾವರಕರ ಇವರ ಹತ್ಯೆಯನ್ನೂ ಮಾಡಲಾಯಿತು. ಒಟ್ಟಾರೆ ಈ ಗಲಭೆಯಲ್ಲಿ ಇಷ್ಟು ಹತ್ಯೆಗಳು ಮತ್ತು ಅಂಗಡಿ-ಮನೆಗಳನ್ನು ಸುಟ್ಟರೂ, ಯಾರ ಮೇಲೆಯೂ ದೂರು ದಾಖಲಿಸಲಿಲ್ಲ ಅಥವಾ ಯಾರನ್ನೂ ಬಂಧಿಸಲಿಲ್ಲ. ಇದರಿಂದ ಇದು ಎಷ್ಟು ದೊಡ್ಡ ಷಡ್ಯಂತ್ರವಾಗಿತ್ತು ಎನ್ನುವುದು ತಿಳಿಯುತ್ತದೆ. ಇದು ಹಿಟ್ಲರ, ಸ್ಟ್ಯಾಲಿನ್, ಮುಸೋಲಿನಿ ಇವರಷ್ಟೇ ಅಲ್ಲ, ಚೀನಾದ ಮಾವೋನನ್ನೂ ನಾಚಿಸುವಂತಹ ಹೀನ ಕೃತ್ಯವಾಗಿದೆ, ಇವು ಸರ್ವಾಧಿಕಾರಿಗಳು ಮಾಡಿದ ಹತ್ಯಾಕಾಂಡಗಳಾಗಿವೆ ಮತ್ತು ಅವು ಜಗತ್ತಿಗೆ ಗೊತ್ತಿವೆ. ಆದರೆ ಮಹಾರಾಷ್ಟ್ರದಲ್ಲಿನ ಬ್ರಾಹ್ಮಣರ ಹತ್ಯೆಯ ಪ್ರಕರಣಗಳನ್ನು ಮುಚ್ಚಿ ಹಾಕಲಾಯಿತು. ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ೨-೩ ಪ್ರಗತಿಪರರ ಹತ್ಯೆಗಳಿಂದ ನಿರಪರಾಧಿ ಸನಾತನದ ಮೇಲೆ ಮುಗಿಬೀಳುವ, ಅದರ ಮೇಲೆ ನಿರ್ಬಂಧವನ್ನು ಹೇರುವ ಬೇಡಿಕೆಯನ್ನು ಮಾಡುವವರು, ಈ ೫ ಸಾವಿರ ಹತ್ಯೆಗಳ ವಿಷಯದಲ್ಲಿ, ನಾರಾಯಣ ಸಾವರಕರರ ಹತ್ಯೆಯ ವಿಷಯದಲ್ಲಿ ಯಾವತ್ತೂ ಏನನ್ನೂ ಏಕೆ ಮಾತನಾಡ ಲಿಲ್ಲ, ಇಂತಹ ಪ್ರಶ್ನೆಗಳು ಮೂಡುತ್ತವೆ. ಈಗಲೂ ಅವರು ಈ ವಿಷಯದಲ್ಲಿ ಮಾತನಾಡುವುದಿಲ್ಲವೇ ? ಮಹಾರಾಷ್ಟ್ರದಲ್ಲಿ ಬ್ರಾಹ್ಮಣದ್ವೇಷಿ ಜನರು ಮತ್ತು ಸಂಘಟನೆಗಳು ಬಹಳಷ್ಟಿವೆ. ಅವರಿಗೆ ಕಾಂಗ್ರೆಸ್ಸಿನ ಕಾರ್ಯಕಾಲದಲ್ಲಿ ಸರಕಾರದಿಂದ ಗೌರವಾದರಗಳೂ ದೊರೆಯುತ್ತಿದ್ದವು. ಇವರು ಮಹಾರಾಷ್ಟ್ರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಬ್ರಾಹ್ಮಣದ್ವೇಷಿ ವೈಚಾರಿಕ ಪ್ರದೂಷಣೆಯನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ಯಾರಾದರು ಪ್ರಶ್ನಿಸಲು ಪ್ರಯತ್ನಿಸಿದರೆ, ಅವರನ್ನು ‘ಸನಾತನಿ ಎಂದು ಹೀಯಾಳಿಸಲಾಗುತ್ತದೆ.

ವರ್ತಮಾನ ಪತ್ರಿಕೆಗಳು ನೇತೃತ್ವವನ್ನು ವಹಿಸಬೇಕು !

ಆಗಿನ ಕಾಂಗ್ರೆಸ್ ಸರಕಾರದ ಒತ್ತಡದಿಂದ ಆಗಿನ ಕೆಲವೇ ದಿನಪತ್ರಿಕೆಗಳು ಈ ಗಲಭೆಯ ಸುದ್ದಿಯನ್ನು ಪ್ರಕಟಿಸಿದ್ದವು; ಆದರೆ ವಿದೇಶಿ ಮಾಧ್ಯಮಗಳು ಈ ವಿಷಯದಲ್ಲಿ ಸವಿಸ್ತಾರ ಲೇಖನವನ್ನು ಪ್ರಕಟಿಸಿದ್ದವು. ಅವುಗಳು, ‘ಗಾಂಧಿಯವರ ಅನುಯಾಯಿಗಳು ಮತ್ತು ಬ್ರಾಹ್ಮಣದ್ವೇಷಿ ಸಂಘಟನೆಗಳು ಈ ಗಲಭೆಗಳನ್ನು ನಡೆಸಿದ್ದರು ಎಂದು ಸ್ಪಷ್ಟವಾಗಿ ಹೇಳಿದ್ದವು. ಇದಕ್ಕೆ ಮಹಾರಾಷ್ಟ್ರದಲ್ಲಿನ ಪ್ರಗತಿ(ಅಧೋಗತಿ)ಪರರು ಈಗ ಏನಾದರೂ ಮಾತನಾಡುವರೇ ? ಇಂದಿನ ಮಾಧ್ಯಮಗಳು ಈ ವಿಷಯದ ಬಗ್ಗೆ ಬರೆಯುವುದು ಆವಶ್ಯಕವಾಗಿದೆ. ಯಾವ ರೀತಿ ‘ಟೈಮ್ಸ್ ನೌ ಈ ಪ್ರಸಿದ್ಧ ಆಂಗ್ಲ ಸುದ್ದಿವಾಹಿನಿಯು ಈ ವಿಷಯದ ಕುರಿತು ಚರ್ಚೆಯನ್ನು ನಡೆಸಿ,  ಜಗತ್ತಿನ ಎದುರಿಗೆ ಈ ಇತಿಹಾಸವನ್ನು ತರುವ ಹೆಮ್ಮೆ ಪಡುವಂತಹ ಪ್ರಯತ್ನವನ್ನು ಮಾಡಿದೆ, ಹಾಗೆಯೇ ಇದನ್ನು ಮುಂದಿನ ಹಂತಕ್ಕೆ ಒಯ್ಯುವ ಪ್ರಯತ್ನವನ್ನು ದೇಶದಲ್ಲಿನ ಮತ್ತು ವಿಶೇಷವಾಗಿ ಮಹಾರಾಷ್ಟ್ರದ ಪ್ರಗತಿಪರ ಪತ್ರಿಕೆಗಳು, ನಿರ್ಭೀತ ವಾರ್ತೆಯನ್ನು ಪ್ರಕಟಿಸಿ ಮಹಾರಾಷ್ಟ್ರಕ್ಕೆ ಕಪ್ಪು ಚುಕ್ಕೆಯನ್ನು ತಂದವರನ್ನು ಬಹಿರಂಗಗೊಳಿಸಬೇಕು. ಒಂದು ವೇಳೆ ‘ಪಂಡಿತ ನಥುರಾಮ ಗೋಡ್ಸೆಯವರು ಗಾಂಧಿಯವರ ಹತ್ಯೆಯನ್ನು ಮಾಡಿದರು ಮತ್ತು ಅದು ಮಹಾರಾಷ್ಟ್ರಕ್ಕೆ ಹತ್ತಿರುವ ಕಪ್ಪು ಚುಕ್ಕೆಯಾಗಿದೆ, ಎಂದು ಅವರಿಗೆ  ಅನಿಸುತ್ತಿದ್ದರೆ, ಅವರು ಮಹಾರಾಷ್ಟ್ರದಲ್ಲಿ ಆಗಿರುವ ೫ ಸಾವಿರ ಬ್ರಾಹ್ಮಣರ ಹತ್ಯೆಯಿಂದ ತಗುಲಿರುವ ಕಪ್ಪು ಚುಕ್ಕೆಯ ವಿಷಯದಲ್ಲಿಯೂ ಮಾತನಾಡಬೇಕು. ‘ಒಬ್ಬರು ಹಸುವನ್ನು ಕೊಂದರು ಎಂದು ಇನ್ನೊಬ್ಬರು ಕರುವನ್ನು ಕೊಂದರೆ, ಅದು ಕ್ಷಮೆಗೆ ಪಾತ್ರರು, ಎಂದು ಆಗುವುದಿಲ್ಲ. ಇದು ಮಹಾರಾಷ್ಟ್ರದ ಪ್ರಬುದ್ಧ ಪತ್ರಕರ್ತರಿಗೆ ತಿಳಿದಿದೆ. ವಿಕ್ರಮ ಸಂಪತ್ ಇವರು ಮಾಡಿರುವ ಆರೋಪಗಳ ಆಳವಾದ ವಿಚಾರಣೆಯನ್ನು ಮಾಡಿ ಸತ್ಯವನ್ನು ಜನತೆಯ ಎದುರಿಗೆ ಬಹಿರಂಗಗೊಳಿಸಬೇಕು. ಈ ಇತಿಹಾಸ ಜನರಿಗೆ ತಿಳಿಯಲೇ ಬೇಕು.