೧೮ ವರ್ಷ ವಯಸ್ಸು ತುಂಬುವ ಮೊದಲೇ ಧರ್ಮವನ್ನು ಬದಲಾಯಿಸುವುದನ್ನು ನಿಷೇಧಿಸುವ ಪ್ರಸ್ತಾಪದ ಬಗ್ಗೆ ಇತ್ತೀಚೆಗೆ ಪಾಕ್‌ನ ಸಂಸತ್ತಿನಲ್ಲಿ ಚರ್ಚೆಯು ನಡೆಯಿತು. ಈ ಪ್ರಸ್ತಾಪಕ್ಕೆ ಸರಕಾರದ ಮಂತ್ರಿಮಂಡಳದ ಧಾರ್ಮಿಕ ವಿಷಯಗಳ ಮತ್ತು ಅಂತರಧರ್ಮೀಯ ಸದ್ಭಾವ ವಿಭಾಗದ ಮಂತ್ರಿಗಳಿಂದ ವಿರೋಧವಾಯಿತು. ಇದರಲ್ಲಿ ಆಶ್ಚರ್ಯವೇನಿಲ್ಲ; ಏಕೆಂದರೆ ಪಾಕ್ ಸರಕಾರವು ಅಲ್ಪಸಂಖ್ಯಾತರ ಹಿತದ ಧೋರಣೆಯನ್ನು ಹಮ್ಮಿಕೊಳ್ಳುವುದು, ಎಂಬ ಆಶಾಭಾವನೆಯನ್ನು ಇಟ್ಟುಕೊಳ್ಳುವುದು ಹಾಸ್ಯಾಸ್ಪದವೆಂದು ಸಾಬೀತಾಗುತ್ತದೆ. ಪಾಕ್‌ನಲ್ಲಿ ಮತಾಂತರಗೊಂಡವರಲ್ಲಿ ಪ್ರಮುಖವಾಗಿ ಹಿಂದೂ ಅಥವಾ ಕ್ರೈಸ್ತರಿದ್ದಾರೆ. ಆದುದರಿಂದ ಈ ಅಂಶವು ಅಲ್ಲಿನ ಅಲ್ಪಸಂಖ್ಯಾತ ಸಮಾಜಕ್ಕೆ ಅನ್ವಯಿಸುತ್ತದೆ. ಈ ಪ್ರಸ್ತಾಪದಲ್ಲಿ ಯಾವುದೇ ಬಲ ಇಲ್ಲ; ಏಕೆಂದರೆ ಪಾಕ್‌ನ ಅಲ್ಪಸಂಖ್ಯಾತ ವ್ಯಕ್ತಿಯು ಅವನು ೧೮ ವರ್ಷ ಕೆಳಗಿನವನಾಗಿರಲಿ ಅಥವಾ ಅದಕ್ಕಿಂತಲೂ ಹೆಚ್ಚು ವಯಸ್ಸಿನವನಾಗಿರಲಿ, ಅವನಿಗೆ ಧಾರ್ಮಿಕ ಸ್ವಾತಂತ್ರ್ಯವಿರುವುದಿಲ್ಲ. ಪಾಕ್‌ನ ಮತಾಂಧರು ಮನಸ್ಸಿನಲ್ಲಿ ನಿರ್ಧರಿಸಿದರೆ ಯಾವುದೇವಯೋಗುಂಪಿನ ಹಿಂದೂಗಳನ್ನು ಎಲ್ಲಿಯೂ ಮತ್ತು ಯಾವಾಗ ಬೇಕಾದರೂ ಮತಾಂತರಿಸುತ್ತಾರೆ. ಹಾಗಾಗಿ ಇಂತಹ ಪ್ರಸ್ತಾಪ ಎಂದರೆ ಒಂದು ರೀತಿ ಮಾತಿನ ಪಂಡಿತನಂತಾಗುತ್ತದೆ. ಹೀಗಿದ್ದರೂ ಸಂಸತ್ತಿನಲ್ಲಿ ‘ಇಂತಹ ಪ್ರಸ್ತಾಪ ಹೇಗೆ ಚರ್ಚೆಗೆ ಬಂದಿತು ?’ ಎಂಬ ಪ್ರಶ್ನೆ ಮೂಡುತ್ತದೆ.
ಪಾಕ್‌ಗೆ ಬೇರೆ ದಾರಿ ಇಲ್ಲದೇ ಅಂತರರಾಷ್ಟ್ರೀಯ ಸಮುದಾಯವನ್ನು ಸಂತೋಷಪಡಿಸಲು ಇಂತಹ ನಿರ್ಣಯದ ಕುರಿತು ಚರ್ಚೆ ಮಾಡಬೇಕಾಗುತ್ತದೆ. ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುವುದು, ಮತಾಂತರದ ಕಾರ್ಯಾಚರಣೆ ಇಂತಹ ಕಾರಣಗಳಿಂದ ಜಗತ್ತಿನಲ್ಲಿ ಪಾಕ್‌ನ ಪ್ರತಿಷ್ಠೆಯು ಮಲೀನವಾಗಿದೆ. ಆದುದರಿಂದ ಪ್ರತಿಷ್ಠೆಯನ್ನು ಎತ್ತಿ ಹಿಡಿಯಲು ಏನಾದರೂ ಮಾಡುವುದು ಪಾಕ್‌ಗೆ ಆವಶ್ಯಕವಾಗಿದೆ. ಅದಕ್ಕಾಗಿ ‘ನಾವು ಅಲ್ಪಸಂಖ್ಯಾತರ ಸುರಕ್ಷೆಗಾಗಿ ಕಾಯದೆಯನ್ನು ಮಾಡುವೆವು’, ‘ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ದುರಸ್ತಿ ಮಾಡುವೆವು’, ‘ಅಲ್ಲಿ ಮುಚ್ಚಲ್ಪಟ್ಟ ದೇವಸ್ಥಾನಗಳನ್ನು ಹಿಂದೂಗಳಿಗಾಗಿ ತೆರೆಯಿಸುವೆವು’, ಈ ವಿಧದ ಆಶ್ವಾಸನೆಗಳನ್ನು ಪಾಕ್ ಸರಕಾರದಿಂದ ನೀಡಲಾಗುತ್ತದೆ’ ಆದರೆ ಈ ಆಶ್ವಾಸನೆಗಳ ಈಡೇರುವಿಕೆ ಎಷ್ಟು ಪ್ರಮಾಣದಲ್ಲಾಗುತ್ತದೆ, ಎಂಬುದು ವಿಚಾರ ಮಾಡುವ ವಿಷಯವಾಗಿದೆ. ಈಗಲೂ ಈ ಪ್ರಸ್ತಾಪದ ಕುರಿತು ಚರ್ಚೆಯಾಯಿತು. ಅದರ ಮೇಲೆ ಕ್ರಮವನ್ನು ಕೈಗೊಳ್ಳ ಲಾಗುವುದೇ ? ಮಹತ್ವದ್ದೆಂದರೆ ಈ ನಿರ್ಣಯವನ್ನು ಸರಕಾರದ ಧಾರ್ಮಿಕ ವಿಷಯಗಳ ಮತ್ತು ಅಂತರಧರ್ಮೀಯ ಸದ್ಭಾವ ಮಂತ್ರಿ ನೂರ ಉಲ್ ಹಕ್ ಕಾದ್ರಿ ಇವರು ವಿರೋಧಿಸಿದ್ದಾರೆ.
ನೂರ ಉಲ್ ಹಕ್ ಕಾದ್ರಿ
ಗಮನದಲ್ಲಿಡಿ, ಕಾದ್ರಿಯವರ ಮೇಲೆ ಅವರ ಸರಕಾರವು ಅಂತರಧರ್ಮೀಯ ಸದ್ಭಾವವನ್ನು ಕಾಪಾಡುವ ಜವಾಬ್ದಾರಿಯನ್ನು ಒಪ್ಪಿಸಿದೆ; ಆದರೆ ಅದೇ ಖಾತೆಯ ಮಂತ್ರಿ ಅಲ್ಪಸಂಖ್ಯಾತರ ಹಿತದ ಕುರಿತು ಮಂಡಿಸಿದ ನಿರ್ಣಯವನ್ನು ವಿರೋಧಿಸುತ್ತಾರೆ ! ಇದರಿಂದ ಪಾಕ್‌ನ ಸಂಸತ್ತಿನಲ್ಲಿ ಎಷ್ಟೇ ಪ್ರಸ್ತಾಪಗಳನ್ನು ಮಂಡಿಸಿದರೂ, ಆ ಕುರಿತು ಕಾಯದೆಗಳು ಜಾರಿಗೆ ತಂದಿದ್ದರೂ, ಅಲ್ಲಿನ ಅಲ್ಪಸಂಖ್ಯಾತರ ನರಕ ಯಾತನೆಯು ಸ್ವಲ್ಪವೂ ಕಡಿಮೆ ಯಾಗಲಾರದು, ಇದೂ ಅಷ್ಟೇ ನಿಜವಾಗಿದೆ.
ಅಲ್ಪಸಂಖ್ಯಾತ ವಿರೋಧಿ ಕಾನೂನುಗಳು !
ಖ್ವಾಜಾ ನಝಿಮುದ್ದೀನ ಇವರು ಪಾಕ್‌ನ ಎರಡನೇಯ ಪ್ರಧಾನಮಂತ್ರಿಯಾಗಿದ್ದಾರೆ. ಅವರು ‘ಧರ್ಮವು ವೈಯಕ್ತಿಕ ವಿಷಯವಾಗಿದೆ, ಎಂಬುದು ನನಗೆ ಒಪ್ಪಿಗೆ ಇಲ್ಲ. ಇಸ್ಲಾಮಿ ದೇಶದ ನಾಗರಿಕರು, ಯಾವುದೇ ಜಾತಿಯ ಅಥವಾ ಧರ್ಮದವರಾಗಿರಲಿ, ಅವರಿಗೆ ಸಮಾನ ಅಧಿಕಾರವಿದೆ, ಎಂಬ ಅಂಶವು ನನಗೆ ಒಪ್ಪಿಗೆಯಿಲ್ಲ’, ಎಂಬ ಹೇಳಿಕೆಯನ್ನು ನೀಡಿದ್ದರು. ಪಾಕ್‌ನ ಮುಸಲ್ಮಾನರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಅಧಿಕಾರವಿರುವುದಿಲ್ಲ, ಈ ಅಂಶಕ್ಕೆ ಅವರು ಆ ಸಮಯದಲ್ಲಿ ಮುದ್ರೆಯೊತ್ತಿದ್ದರು. ನಝಿಮುದ್ದೀನ ಇವರು ಈ ಅಂಶವನ್ನು ಬಹಿರಂಗವಾಗಿ ಹೇಳಿದ್ದರು. ಪಾಕ್‌ನ ಇಂದಿನ ರಾಜಕಾರಣಿಗಳು ಇದನ್ನು ಬಹಿರಂಗವಾಗಿ ಮಾತನಾಡದೇ; ಅವರು ನಝೀಮುದ್ದೀನ ಇವರ ವಿಚಾರಸರಣಿಗನುಸಾರ ವರ್ತಿಸುತ್ತಾರೆ. ಈ ಕಾರಣದಿಂದ ಪಾಕ್‌ನಲ್ಲಿ ಅಲ್ಪ ಸಂಖ್ಯಾತರ ಹಿತದ ಕಾಯದೆಯು ಜಾರಿಗೆ ಬರಲಿಲ್ಲ. ತದ್ವಿರುದ್ಧ ಅಲ್ಪಸಂಖ್ಯಾತರನ್ನು ಶೋಷಿಸುವಂತಹ ಕಾಯದೆಗಳನ್ನು ಅಲ್ಲಿ ಮಾಡಲಾಗುತ್ತದೆ. ಇದರ ಉತ್ತಮ ಉದಾಹರಣೆಯೆಂದರೆ ಅಲ್ಲಿ ಅಸ್ತಿತ್ವದಲ್ಲಿರುವ ಧರ್ಮನಿಂದನೆ ಕಾನೂನು. ಅಲ್ಲಿನ ಹಿಂದೂ ಮತ್ತು ಕ್ರೈಸ್ತ ಸಮಾಜದ ಜನರ ವಿರುದ್ಧ ‘ಇವರು ಅಲ್ಲಾನನ್ನು ಅವಮಾನಿಸಿದರು’, ‘ಕುರಾನನ್ನು ಅವಮಾನಿಸಿದರು’, ಎಂದು ಹೇಳುತ್ತಾ ತಕರಾರು ಮಾಡಲಾಗುತ್ತದೆ ಮತ್ತು ಆ ಕುರಿತು ಪೂರ್ಣ ತನಿಖೆ ಮಾಡದೇ ಅಲ್ಪಸಂಖ್ಯಾತ ಸಮಾಜದಲ್ಲಿನ ವ್ಯಕ್ತಿಯನ್ನು ಬಂಧಿಸಿ ಅವನನ್ನು ಸೆರೆಮನೆಗೆ ತಳ್ಳಲಾಗುತ್ತದೆ. ೨೦೧೬ ರಲ್ಲಿ ಪಾಕ್‌ನ ಸಿಂಧ ಪ್ರಾಂತದಲ್ಲಿ ಅಲ್ಪಸಂಖ್ಯಾತರ ಮತಾಂತರದ ವಿರುದ್ಧ ಮಸೂದೆಯನ್ನು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು; ಆದರೆ ಮತಾಂಧರು ಅದನ್ನು ವಿರೋಧಿಸಿದ್ದರಿಂದ ರಾಜ್ಯಪಾಲರು ಅದರ ಮೇಲೆ ಹಸ್ತಾಕ್ಷರ ಮಾಡಲು ನಿರಾಕರಿಸಿದರು ಮತ್ತು ಕಾನೂನು ಕೊನೆಗೊಂಡಿತು. ಈ ಅಂಶಗಳನ್ನು ಗಮನದಲ್ಲಿಟ್ಟು ಅಲ್ಲಿನ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಸರಕಾರಿ ಮಟ್ಟದಲ್ಲಾದರೂ ಅಲ್ಪಸ್ವಲ್ಪ ಪ್ರಯತ್ನಗಳಾಗಬಹುದೆಂಬ ಸುಳಿವೂ ಇಲ್ಲ.
ಭಾರತದ ನಿಲುವು ಮಹತ್ವದ್ದಾಗಿದೆ !
ಪಾಕ್‌ನಲ್ಲಿನ ಹಿಂದೂಗಳ ದಯನೀಯ ಸ್ಥಿತಿಯ ಕುರಿತು ಮೇಲಿಂದ ಮೇಲೆ ಮಾತನಾಡಲಾಗುತ್ತದೆ; ಆದರೆ ಅವರ ಪರಿಸ್ಥಿತಿಯನ್ನು ಬದಲಾಯಿಸುವ ಕುರಿತು ಯಾರೂ ಮಾತನಾಡಲು ಸಿದ್ಧರಿಲ್ಲ. ಪಾಕ್‌ನಲ್ಲಿನ ಸ್ಥಿತಿಯನ್ನು ನೋಡಿದರೆ ಮುಂಬರುವ ಕೆಲವು ವರ್ಷಗಳಿಲ್ಲಿಯೇ ಅಲ್ಲಿನ ಹಿಂದೂಗಳು ನಾಮಾವಶೇಷರಾಗುವರು. ಇದನ್ನು ತಡೆಗಟ್ಟಲು ಭಾರತವೇ ಆಕ್ರಮಣಕಾರಿ ನಿಲುವನ್ನು ಅನುಸರಿಸಬೇಕಾಗುತ್ತದೆ. ಪೌರತ್ವ ಸುಧಾರಣೆ ಕಾಯದೆಯನ್ನು ಮಾಡಿ ಭಾರತ ಸರಕಾರವು ಆ ದೃಷ್ಟಿಯಿಂದ ಕ್ರಮವನ್ನು ಕೈಗೊಂಡಿದೆ. ಈ ಕಾಯದೆಯಿಂದ ಪಾಕ್, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ್‌ನಲ್ಲಿನ ಹಿಂದೂಗಳಿಗೆ ಭಾರತದ ಪೌರತ್ವ ಪ್ರಾಪ್ತವಾಗುವುದು ಸುಲಭವಾಗಲಿದೆ. ಪಾಕ್ ಅಥವಾ ಬಾಂಗ್ಲಾದೇಶನಲ್ಲಿನ ಮತಾಂಧರ ಕಿರುಕುಳಕ್ಕೆ ಬೇಸತ್ತು ಅಲ್ಲಿನ ಹಿಂದೂಗಳು ಭಾರತದಲ್ಲಿ ಆಶ್ರಯ ಪಡೆಯಲು ಬರುತ್ತಾರೆ. ಇಂತಹ ಹಿಂದೂಗಳಿಗೆ ಈ ಕಾಯದೆಯ ಲಾಭವಾಗುವುದು; ಆದರೆ ‘ಯಾರು ಅಲ್ಲಿಯೇ ಕೆಲಸವಿಲ್ಲದೇ ಬಿದ್ದುಕೊಂಡಿರುವರೋ, ಅವರ ಬಗ್ಗೆ ಏನು ?’, ‘ಅವರ ಜವಾಬ್ದಾರಿಯನ್ನು ಯಾರು ವಹಿಸುವರು ?’ ‘ಅವರನ್ನು ಅದೇ ಅವಸ್ಥೆಯಲ್ಲಿ ಬಿಟ್ಟು ಬಿಡಬೇಕೇ ?’ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಭಾರತೀಯ ಆಡಳಿತಗಾರರು ಕಂಡು ಹಿಡಿಯಬೇಕು.
ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಮತಾಂತರಿಸಿ ಅವರ ನಿಕಾಹ ಮಾಡಿಸಿದಾಗ ಭಾರತದಲ್ಲಿ ಧ್ವನಿ ಎತ್ತಲಾಗುತ್ತದೆ. ಇಷ್ಟು ಚಿಕ್ಕ ಕೃತಿಯು ಸಾಕಾಗುವುದಿಲ್ಲ. ಈ ವಿರೋಧಕ್ಕೆ ಪಾಕ್ ಯಾವುದೇ ಬೆಲೆಯನ್ನು ನೀಡುವುದಿಲ್ಲ; ಏಕೆಂದರೆ ‘ಭಾರತ ಕೇವಲ ಟೀಕೆಯನ್ನು ಮಾಡುತ್ತದೆ. ಅದರ ಆಚೆಗೆ ಹೋಗಿ ಅದು ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ’, ಎಂದು ಅದಕ್ಕೆ ಖಚಿತವಿದೆ. ಪಾಕ್‌ನೊಳಗೆ ನುಗ್ಗಿ ಇಂತಹ ಕುಕೃತ್ಯವನ್ನು ಮಾಡುವವರ ಮೇಲೆ ಕ್ರಮವನ್ನು ಕೈಗೊಳ್ಳುವ ಧೈರ್ಯವನ್ನು ಭಾರತವು ತೋರಿಸಬೇಕು. ಹೀಗೆ ಮಾಡಿದರೆ ಮಾತ್ರ ಪಾಕ್ ದಾರಿಗೆ ಬರುವುದು ಮತ್ತು ಅಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯವು ನಿಲ್ಲುತ್ತದೆ.
ಅಂದಿನ ಕಾಂಗ್ರೆಸ್ ಸರಕಾರಕ್ಕಿಂತ ಇಂದಿನ ಭಾಜಪ ಸರಕಾರವು ಪಾಕ್‌ನ ವಿರುದ್ಧ ಅಕ್ರಮಣಕಾರಿ ನಿಲುವನ್ನು ಅವಲಂಬಿಸುತ್ತಿದೆ, ಇದು ಒಳ್ಳೆಯ ವಿಷಯವಾಗಿದೆ; ಆದರೆ ಪಾಕ್‌ನಂತಹ ಶತ್ರುವಿಗಾಗಿ ಇಷ್ಟು ಸಾಕಾಗುವುದಿಲ್ಲ. ಅದಕ್ಕೆ ಶಬ್ದಗಳದ್ದಲ್ಲ, ಆದರೆ ಗುಂಡುಗಳ ಭಾಷೆಯೇ ಅರ್ಥವಾಗುತ್ತದೆ. ಇದನ್ನು ಗಮನದಲ್ಲಿಟ್ಟು ಸರಕಾರವು ಪಾಕ್‌ನ ವಿರುದ್ಧದ ಧೋರಣೆಗಳನ್ನು ಖಚಿತ ಪಡಿಸಬೇಕು.