ಶ್ರೀರಂಗಪಟ್ಟಣದ ಆಂಜನೇಯ ದೇವಸ್ಥಾನವನ್ನು ಕೆಡವಿ ಜಮಾ ಮಸೀದಿಯನ್ನು ನಿರ್ಮಿಸಿದ್ದ ಟಿಪು !

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಆಂಜನೇಯ ದೇವಸ್ಥಾನವಿತ್ತು. ಟಿಪ್ಪು ಸುಲ್ತಾನ್ ಅದನ್ನು ಕೆಡವಿ ಅಲ್ಲಿ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯು ೧೯೩೫ ರಲ್ಲಿ ವರದಿ ಮಾಡಿರುವ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದ ಫರಿದಪೂರದಲ್ಲಿ ನೂಪುರ ಸಹಾ ಎಂಬ ಗರ್ಭಿಣಿ ಹಿಂದೂ ಮಹಿಳೆಯ ಹತ್ಯೆ

ಇಲ್ಲಿ ನೂಪುರ ಸಹಾ ಎಂಬ ಹಿಂದೂ ಮಹಿಳೆಯ ಮೃತದೇಹವು ಕಂಡುಬಂದಿದೆ. ನೂಪುರ ಸಹಾರವರ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಈ ಮಹಿಳೆಯು ೬ ತಿಂಗಳ ಗರ್ಭಿಣಿಯಾಗಿದ್ದಳು ಎಂಬ ಮಾಹಿತಿಯನ್ನು ‘ವಾಯ್ಸ್‌ ಆಫ್‌ ಬಾಂಗ್ಲಾದೇಶಿ ಹಿಂದೂ’ನಲ್ಲಿ ನೀಡಲಾಗಿದೆ.

ನೋಯ್ಡಾ (ಉತ್ತರ ಪ್ರದೇಶ) ದೇವಾಲಯಗಳಲ್ಲಿ ವಿಗ್ರಹಗಳು ಮತ್ತು ಶಿವಲಿಂಗಗಳನ್ನು ದುಶ್ಕರ್ಮಿಗಳಿಂದ ಧ್ವಂಸ

ಕಳೆದ ಒಂದು ಸಾವಿರ ವರ್ಷಗಳಿಂದ ಭಾರತದಲ್ಲಿ ಕೇವಲ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದ್ದು, ಅದರ ಬಗ್ಗೆ ಜಾತ್ಯಾತೀವಾದಿಗಳು ಹಾಗೂ ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪಂಜಾಬ್‌ನಲ್ಲಿ ಹನುಮಾನ್ ಚಾಲೀಸಾ ಪುಸ್ತಕಗಳನ್ನು ಬೆಂಕಿಗಾಹುತಿಗೈದ ಅಪರಿಚಿತ ವ್ಯಕ್ತಿಗಳು

ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಯಿತು. ಇದನ್ನು ‘ದೈನಿಕ ಭಾಸ್ಕರ’ ಪತ್ರಿಕೆಯು ವರದಿ ಮಾಡಿದೆ.

ಮಥುರಾದಲ್ಲಿನ ಶಾಹಿ ಈದಗಾಹ ಮಸೀದಿಯ ಸಮೀಕ್ಷೆಗಾಗಿ ಮನವಿಯನ್ನು ಮಾಡುವ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ !

ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ನಂತರ ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದಗಾಹ ಮಸೀದಿಯ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಮನವಿ ಮಾಡುವ ಅರ್ಜಿಯನ್ನು ಇಲ್ಲಿನ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ಮುಸಲ್ಮಾನ ಯುವತಿಯನ್ನು ಪ್ರೀತಿಸಿದ ಹಿಂದು ಯುವಕನನ್ನು ಆಕೆಯ ಸಹೋದರನಿಂದ ಹತ್ಯೆ

ಮುಸಲ್ಮಾನ ಯುವತಿಯನ್ನು ಹಿಂದು ಯುವಕನು ಪ್ರೀತಿಸಿದ್ದರಿಂದ ಅವಳ ಸಹೋದರನು ಆ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕನ ಹೆಸರು ಮಿಥುನ ಠಾಕೂರ (ವಯಸ್ಸು ೨೨) ಆಗಿದೆ. ಅವನು ಸುಮೈಯಾ ಕಾದಿಯನ್ನು ಪ್ರೀತಿಸುತ್ತಿದ್ದನು.

ಕರ್ನಾಟಕದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದರಿಂದ ಪಾಕಿಸ್ತಾನಕ್ಕೆ ಹೊಟ್ಟೆಯುರಿ !

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿರುವ ಬಗ್ಗೆ ಕಿಡಿಕಾರಿದೆ. ವಿದೇಶಾಂಗ ಸಚಿವಾಲಯದಿಂದ ಪ್ರಸಾರ ಮಾಡಲಾಗಿರುವ ಪತ್ರಿಕೆಯಲ್ಲಿ, ಈ ಘಟನೆ ಶ್ರೀರಾಮ ಸೇನೆಯ ಪ್ರಮುಖರು ಆಜಾನ್‌ನ ವಿರುದ್ಧ ಮಾಡಿರುವ ಹೇಳಿಕೆಯಿಂದ ನಡೆಯುತ್ತಿದೆ.

ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಪ್ರಕರಣದಲ್ಲಿ ಯುಕ್ತಿವಾದ ಮುಗಿದಿದೆ : ಇಂದು ತೀರ್ಪು!

ಇಲ್ಲಿನ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಿ ದೇವಸ್ಥಾನಗಳ ಸಮೀಕ್ಷೆಯ ಸಂದರ್ಭದಲ್ಲಿ ದಿವಾನಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಯುಕ್ತಿವಾದವು ಪೂರ್ಣವಾಗಿದ್ದು, ಅದರ ಮೇಲೆ ಮೇ ೧೨ ರಂದು ಮಧ್ಯಾಹ್ನ ೧೨ ಗಂಟೆಗೆ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು.

ವಡೋದರಾದಲ್ಲಿ ಸಯಾಜಿರಾವ ವಿಶ್ವವಿದ್ಯಾಲಯದ ಪ್ರದರ್ಶನದಲ್ಲಿ ಹಿಂದೂ ದೇವತೆಯ ಅವಮಾನ

ಇಲ್ಲಿಯ ಮಹಾರಾಜ ಸಯಾಜಿರಾವ ವಿಶ್ವವಿದ್ಯಾನಿಲಯದಲ್ಲಿ ಫೈನ್ ಆರ್ಟ್ಸ್ ವಿಷಯದಲ್ಲಿ ಒಂದು ಪ್ರದರ್ಶನ ಏರ್ಪಡಿಸಲಾಗಿತ್ತು. ಅದಲ್ಲಿ ಕೆಲವು ವಿದ್ಯಾರ್ಥಿಗಳು ಇಟ್ಟಿರುವ ಚಿತ್ರಗಳಲ್ಲಿ ಹಿಂದೂ ದೇವತೆಗಳ ಅವಮಾನ ಮಾಡಲಾಗಿತ್ತು. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಅಧ್ಯಕ್ಷರು ತ್ಯಾಗಪತ್ರ ನೀಡಬೇಕೆಂದು ಒತ್ತಾಯಿಸಿದರು.

ಮದುರೈಯ ಪಟ್ಟಿನಪ್ರವೇಶಂ ಪಲಕ್ಕಿ ಯಾತ್ರೆಗೆ ಅನುಮತಿ !

ತಮಿಳುನಾಡಿನ ಮದುರೈಯ ಧರ್ಮಪುರಂ ಅಧೀನಮ್ ಪಟ್ಟಿನಪ್ರವೇಶಂ ಎಂಬ ಪಲಕ್ಕಿ ಯಾತ್ರೆಗೆ ಅನುಮತಿ ನಿರಾಕರಿಸುವ ಆದೇಶವನ್ನು ತಮಿಳುನಾಡಿನ ದ್ರಮುಕ (ದ್ರಾವಿಡ ಮುನ್ನೇತ್ರ ಕಳಗಂ) ಸರಕಾರ ಹಿಂಪಡೆದಿದೆ. ಇದಕ್ಕೂ ಮೊದಲು ಮಹಿಲಾದೂಥರಾಯಿ ಕಂದಾಯ ಇಲಾಖೆ ಅಧಿಕಾರಿ ಜೆ ಬಾಲಾಜಿ ಇವರು ಅನುಮತಿಯನ್ನು ನಿರಾಕರಿಸಿದ್ದರು.