ವಡೋದರಾದಲ್ಲಿ ಸಯಾಜಿರಾವ ವಿಶ್ವವಿದ್ಯಾಲಯದ ಪ್ರದರ್ಶನದಲ್ಲಿ ಹಿಂದೂ ದೇವತೆಯ ಅವಮಾನ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಅಧ್ಯಕ್ಷರ ತ್ಯಾಗಪತ್ರದ ಬೇಡಿಕೆ

ಈ ಮೇಲಿನ ಚಿತ್ರ ಹಾಕುವುದರ ಉದ್ದೇಶ ಯಾರ ಭಾವನೆಗಳಿಗೆ ಧಕ್ಕೆಯನ್ನು ತರುವುದಾಗಿರದೆ ನಿಜ ಸಂಗತಿ ತೋರಿಸುವುದಾಗಿದೆ

ವಡೋದರಾ (ಗುಜರಾತ) – ಇಲ್ಲಿಯ ಮಹಾರಾಜ ಸಯಾಜಿರಾವ ವಿಶ್ವವಿದ್ಯಾನಿಲಯದಲ್ಲಿ ಫೈನ್ ಆರ್ಟ್ಸ್ ವಿಷಯದಲ್ಲಿ ಒಂದು ಪ್ರದರ್ಶನ ಏರ್ಪಡಿಸಲಾಗಿತ್ತು. ಅದಲ್ಲಿ ಕೆಲವು ವಿದ್ಯಾರ್ಥಿಗಳು ಇಟ್ಟಿರುವ ಚಿತ್ರಗಳಲ್ಲಿ ಹಿಂದೂ ದೇವತೆಗಳ ಅವಮಾನ ಮಾಡಲಾಗಿತ್ತು. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಅಧ್ಯಕ್ಷರು ತ್ಯಾಗಪತ್ರ ನೀಡಬೇಕೆಂದು ಒತ್ತಾಯಿಸಿದರು.

ಈ ಚಿತ್ರಗಳಲ್ಲಿ ಹಿಂದೂ ದೇವತೆಗಳು ಮತ್ತು ಕೆಲವು ರಾಷ್ಟ್ರೀಯ ಚಿಹ್ನೆಗಳು ಬಲಾತ್ಕಾರದ ಘಟನೆಯ ಜೊತೆಗೆ ಹೊಂದಿಸಿ ತೋರಿಸಲಾಗಿತ್ತು. ದೇವತೆಗಳ ಚಿತ್ರ ತಯಾರಿಸಲು ವರ್ತಮಾನ ಪತ್ರಗಳ ಕಾಗದದ ಉಪಯೋಗ ಮಾಡಲಾಗಿತ್ತು. ಯಾವ ಕಾಗದದ ಉಪಯೋಗ ಮಾಡಲಾಗಿತ್ತು, ಅದರಲ್ಲಿನ ಬಹುತೇಕ ಕಾಗದಗಳ ಮೇಲೆ ಬಲಾತ್ಕಾರದ ಘಟನೆಗಳ ವಾರ್ತೆಗಳು ಇದ್ದವು.

ಸಂಪಾದಕೀಯ ನಿಲುವು

ಹಿಂದೂ ದೇವತೆಯ ಅವಮಾನ ಮಾಡುವವರಿಗೆ ಇನ್ನು ಮುಂದೆ ಕಠಿಣ ಶಿಕ್ಷೆ ನೀಡುವ ಕಾನೂನು ಮಾಡುವುದು ಆವಶ್ಯಕವಾಗಿದೆ, ಆಗಲೇ ಇಂತಹ ಘಟನೆಗಳು ಶಾಶ್ವತವಾಗಿ ನಿಲ್ಲುವುದು !