ಶ್ರೀರಂಗಪಟ್ಟಣದ ಆಂಜನೇಯ ದೇವಸ್ಥಾನವನ್ನು ಕೆಡವಿ ಜಮಾ ಮಸೀದಿಯನ್ನು ನಿರ್ಮಿಸಿದ್ದ ಟಿಪು !

ಪುರಾತತ್ವ ಇಲಾಖೆಯ ೧೯೩೫ ರ ವರದಿಯಲ್ಲಿನ ಮಾಹಿತಿ !

ನವ ದೆಹಲಿ – ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಆಂಜನೇಯ ದೇವಸ್ಥಾನವಿತ್ತು. ಟಿಪ್ಪು ಸುಲ್ತಾನ್ ಅದನ್ನು ಕೆಡವಿ ಅಲ್ಲಿ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯು ೧೯೩೫ ರಲ್ಲಿ ವರದಿ ಮಾಡಿರುವ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಈ ಜಾಮಾ ಮಸೀದಿಯ ಜೀರ್ಣೋದ್ಧಾರ ನಡೆಯುತ್ತಿರುವಾಗ, ಈ ದೇವಾಲಯದ ಅವಶೇಷಗಳು ಕಾಣಿಸಿಕೊಂಡ ನಂತರ, ಹಿಂದುತ್ವನಿಷ್ಠರು ನೀಡಿದ ದೂರಿನ ನಂತರ ಮಸೀದಿಯ ಕೆಲಸವನ್ನು ನಿಲ್ಲಿಸಲಾಗಿದೆ. ಈ ಮಸೀದಿಯ ಸಮೀಕ್ಷೆಯೂ ಮಾಡುವಂತೆ ಹಿಂದುತ್ವನಿಷ್ಠ ಸಂಘಟನೆಗಳು ಒತ್ತಾಯಿಸಿವೆ.

ಸಂಪಾದಕೀಯ ನಿಲುವು

ಪುರಾತತ್ವ ಇಲಾಖೆಯೇ ಈ ಸತ್ಯವನ್ನು ಹಲವು ವರ್ಷಗಳ ಹಿಂದೆಯೇ ದಾಖಲಿಸಿದ್ದರೆ, ಈ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸಲು ಏನು ತೊಂದರೆ ಇದೆ ?

ಕಳೆದ ಕೆಲವು ದಿನಗಳಿಂದ ಹಿಂದೂಗಳು ಈ ದೇವಾಲಯದ ಇತಿಹಾಸವನ್ನು ಹೇಳುವ ಮೂಲಕ ನ್ಯಾಯಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಪುರಾತತ್ವ ಇಲಾಖೆಗೆ ಕಳೆದ ೮೭ ವರ್ಷಗಳಿಂದ ಈ ಸತ್ಯ ಗೊತ್ತಿದ್ದರೂ ನಿಜವಾದ ಇತಿಹಾಸವನ್ನು ಹೇಳಲು ಇಲಾಖೆಯಲ್ಲಿ ಯಾರೂ ಮುಂದಾಗಿಲ್ಲ. ಇಂತಹ ಹಿಂದೂದ್ವೇಷಿ ಇಲಾಖೆಯನ್ನು ವಿಸರ್ಜಿಸಿ !