ಪಂಜಾಬ್‌ನಲ್ಲಿ ಹನುಮಾನ್ ಚಾಲೀಸಾ ಪುಸ್ತಕಗಳನ್ನು ಬೆಂಕಿಗಾಹುತಿಗೈದ ಅಪರಿಚಿತ ವ್ಯಕ್ತಿಗಳು

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಭಟಿಂಡಾ (ಪಂಜಾಬ್) – ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಯಿತು. ಇದನ್ನು ‘ದೈನಿಕ ಭಾಸ್ಕರ’ ಪತ್ರಿಕೆಯು ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಹಿಂದೂ ಸಂಘಟನೆಗಳ ಮುಖಂಡರಾದ ಸುಖಪಾಲ್ ಸರನ್ ಮತ್ತು ಸಂದೀಪ್ ಅಗ್ರವಾಲ್ ಇವರು, ಕೆಲವರು ಹನುಮಾನ್ ಚಾಲೀಸಾ ಪುಸ್ತಕವನ್ನು ಸುಟ್ಟು ಕಿಲಾ ಸಾಹಿಬ್ ಬಳಿ ಎಸೆದಿರುವ ಮಾಹಿತಿ ನಮಗೆ ಸಿಕ್ಕಿತು ಎಂದರು. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಅವರು ಹನುಮಾನ್ ಚಾಲೀಸಾ ಪುಸ್ತಕಗಳ ಸುಟ್ಟ ಪುಟಗಳನ್ನು ವಶಪಡಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.’ ಪಟ್ಟಣದ ವಾತಾವರಣವನ್ನು ಹಾಳು ಮಾಡಲು ಕೆಲವರು ಈ ಕೃತ್ಯವನ್ನು ಮಾಡಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು’, ಎಂದು ಭಟಿಂಡಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೆ. ಎಲೆಂಚೆಜಿಯನ್ ಅವರು ನೀಡಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಭಯೋತ್ಪಾದಕರು ಕಳೆದ ೧-೨ ವರ್ಷಗಳಿಂದ ಪಂಜಾಬ್‌ನಲ್ಲಿ ಹಲವಾರು ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈಗ ಇಲ್ಲಿ ಆಪ್‌ನ ಸರಕಾರ ಬಂದಾಗಿನಿಂದ ಇಂತಹ ಅಪರಾಧಗಳು ವೇಗವಾಗಿ ಹೆಚ್ಚುತ್ತಿವೆ. ಆದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವಲ್ಲಿ ಖಲಿಸ್ತಾನಿ ಭಯೋತ್ಪಾದಕರ ಕೈವಾಡವಿದೆಯೇ ಎಂದು ಕೇಂದ್ರ ಸರಕಾರವೇ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !