ಮಥುರಾದಲ್ಲಿನ ಶಾಹಿ ಈದಗಾಹ ಮಸೀದಿಯ ಸಮೀಕ್ಷೆಗಾಗಿ ಮನವಿಯನ್ನು ಮಾಡುವ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ !

ಮಥುರಾ (ಉತ್ತರಪ್ರದೇಶ) – ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ನಂತರ ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದಗಾಹ ಮಸೀದಿಯ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಮನವಿ ಮಾಡುವ ಅರ್ಜಿಯನ್ನು ಇಲ್ಲಿನ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಈ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ. ಇದರ ಮೇಲೆ ಜುಲೈ ೧, ೨೦೨೨ರಂದು ಆಲಿಕೆ ನಡೆಯಲಿದೆ. ಈ ಅರ್ಜಿಗಾಗಿ ಸರ್ವಶ್ರೀ ಮನೀಷ ಯಾದವ, ಮಹೇಂದ್ರ ಪ್ರತಾಪ ಸಿಂಹ ಮತ್ತು ದಿನೇಶ ಶರ್ಮಾರವರು ಬೇರೆ ಬೇರೆ ಅರ್ಜಿಗಳನ್ನು ದಾಖಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ನ್ಯಾಯಾಲಯವು ಜುಲೈ ೧ರಂದು ಆಲಿಕೆ ನಡೆಸಲಿದೆ.

೧. ಅರ್ಜಿದಾರರಾದ ಮನೀಷ ಯಾದವರವರ ನ್ಯಾಯವಾದಿಗಳಾದ ದೇವಕೀನಂದನ ಶರ್ಮಾರವರು, ಈದಗಾಹನ ಒಳಗಿರುವ ಶಿಲ್ಪಕಲೆಗಳನ್ನು ಮುಸಲ್ಮಾನ ಪಕ್ಷದವರು ತೆಗೆಯುವ ಸಾಧ್ಯತೆಗಳಿವೆ. ಇಲ್ಲಿನ ಪುರಾವೆಗಳನ್ನು ನಾಶ ಮಾಡಬಹುದು. ಆದುದರಿಂದ ಎರಡೂ ಪಕ್ಷದವರ ಉಪಸ್ಥಿತಿಯಲ್ಲಿ ಅಲ್ಲಿನ ಚಿತ್ರೀಕರಣವನ್ನು ನಡೆಸಬೇಕು ಮತ್ತು ಎಲ್ಲ ಪುರಾವೆಗಳನ್ನು ಸಂಗ್ರಹಿಸಬೇಕು ಎಂದು ಹೇಳಿದ್ದಾರೆ.

೨. ಎರಡನೇ ಅರ್ಜಿದಾರರಾದ ಶ್ರೀ. ಮಹೇಂದ್ರ ಸಿಂಹರವರು, ಈ ಹಿಂದೆ ನಾನು ಫೆಬ್ರುವರಿ ೨೪, ೨೦೨೧ರಂದು ಅರ್ಜಿಯನ್ನು ದಾಖಲಿಸಿ ಚಿತ್ರೀಕರಣವನ್ನು ನಡೆಸುವ ಮತ್ತು ನ್ಯಾಯಾಲಯದ ಆಯುಕ್ತರನ್ನು ನೇಮಿಸುವ ಬಗ್ಗೆ ಮನವಿ ಮಾಡಿದ್ದನು; ಆದರೆ ಇದರ ಮೇಲೆ ಯಾವುದೇ ತೀರ್ಪು ಬರಲಿಲ್ಲ. ಆದುದರಿಂದ ಮೇ ೯, ೨೦೨೨ರಂದು ಪುನಃ ಅರ್ಜಿಯನ್ನು ದಾಖಲಿಸಿದೆ ಎಂದು ಹೇಳಿದರು.

೩. ಶಾಹಿ ಈದಗಾಹ ಮಸೀದಿಯ ನ್ಯಾಯವಾದಿಗಳಾದ ತನವೀರ ಅಹಮದರವರು, ಹಿಂದೂ ಪಕ್ಷವು ಕಳೆದ ೨ ವರ್ಷಗಳಿಂದ ವಿವಿಧ ರೀತಿಯ ಅರ್ಜಿಗಳನ್ನು ದಾಖಲಿಸುತ್ತಿದೆ; ಆದರೆ ಅದರಿಂದ ಅವರಿಗೆ ಏನು ಹೇಳಬೇಕಿದೆ ಎಂಬುದೇ ತಿಳಿದಿಲ್ಲ. ಮಥುರೆಯಲ್ಲಿರುವ ಈ ಎರಡೂ ಧರ್ಮಸ್ಥಳಗಳು ಬೇರೆಬೇರೆಯಾಗಿವೆ. ಆದುದರಿಂದ ಈ ಚಿತ್ರೀಕರಣದ ಆವಶ್ಯಕತೆಯೇ ಇಲ್ಲ ಎಂದು ಹೇಳಿದರು.

೪. ಈ ಹಿಂದೆಯೇ ಅಲಾಹಾಬಾದ ಉಚ್ಚ ನ್ಯಾಯಾಲಯವು ಶ್ರೀಕೃಷ್ಣಜನ್ಮಭೂಮಿ ಹಾಗೂ ಶಾಹಿ ಈದಗಾಹ ಮಸೀದಿಗಳ ಸಂದರ್ಭದಲ್ಲಿನ ಎಲ್ಲ ಅರ್ಜಿಗಳಿಗೆ ಮುಂಬರುವ ೪ ತಿಂಗಳಿನಲ್ಲಿ ತೀರ್ಪು ನೀಡಲು ಆದೇಶಿಸಿದೆ.

ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಮಸೀದಿಯನ್ನು ತೆರವುಗೊಳಿಸುವ ಬೇಡಿಕೆಯ ಮೇಲೆ ಮೇ ೧೯ರಂದು ತೀರ್ಪು ನೀಡಲಾಗುವುದು !

ನ್ಯಾಯವಾದಿ ರಂಜನಾ ಅಗ್ನಿಹೋತ್ರಿಯವರು ಶ್ರೀಕೃಷ್ಣಜನ್ಮಭೂಮಿಯ ೧೩.೩೭ ಎಕರೆ ಭೂಮಿಯಲ್ಲಿರುವ ಶಾಹಿ ಈದಗಾಹ ಮಸೀದಿಯನ್ನು ತೆರವುಗೊಳಿಸಿ ಇನ್ನೊಂದು ಕಡೆಯಲ್ಲಿ ಸ್ಥಳಾಂತರಿಸುವ ಅರ್ಜಿಯನ್ನು ದಾಖಲಿಸಿದ್ದರು. ಈ ಅರ್ಜಿಯ ಮೇಲಿನ ಆಲಿಕೆಯು ಮೇ ೬ರಂದು ಪೂರ್ಣವಾಗಿದೆ. ಇದರ ತೀರ್ಪನ್ನು ಮೇ ೯ರಂದು ನೀಡಲಾಗುವುದು. ಈ ಅರ್ಜಿಯಲ್ಲಿ ಈ ಭೂಮಿಯ ಪರಿಸರದಲ್ಲಿ ೧೬೬೯-೭೦ರಲ್ಲಿ ಆಗಿನ ಮೊಘಲ ಬಾದಶಾಹ ಔರಂಗಜೇಬನ ಆದೇಶದಿಂದ ಶ್ರೀಕೃಷ್ಣದೇವಸ್ಥಾನವನ್ನು ಕೆಡವಿ ಅಲ್ಲಿ ಶಾಹಿ ಈದಗಾಹ ಮಸೀದಿಯನ್ನು ಕಟ್ಟಲಾಗಿತ್ತು ಎಂದು ಹೇಳಲಾಗಿದೆ.