ಕರ್ನಾಟಕದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದರಿಂದ ಪಾಕಿಸ್ತಾನಕ್ಕೆ ಹೊಟ್ಟೆಯುರಿ !

ಅಂತರರಾಷ್ಟ್ರೀಯ ಸಂಸ್ಥೆ ಹಸ್ತಕ್ಷೇಪ ನಡೆಸಬೇಕು !’ (ಅಂತೆ)

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿರುವ ಬಗ್ಗೆ ಕಿಡಿಕಾರಿದೆ. ವಿದೇಶಾಂಗ ಸಚಿವಾಲಯದಿಂದ ಪ್ರಸಾರ ಮಾಡಲಾಗಿರುವ ಪತ್ರಿಕೆಯಲ್ಲಿ, ಈ ಘಟನೆ ಶ್ರೀರಾಮ ಸೇನೆಯ ಪ್ರಮುಖರು ಆಜಾನ್‌ನ ವಿರುದ್ಧ ಮಾಡಿರುವ ಹೇಳಿಕೆಯಿಂದ ನಡೆಯುತ್ತಿದೆ. ಭಾಜಪ ಆಡಳಿತವಿರುವ ಕರ್ನಾಟಕ ರಾಜ್ಯದಲ್ಲಿ ಅಜಾನ್‌ನ ವಿರುದ್ಧ ಮಾಡಲಾಗುವ ಅಭಿಯಾನ ಖಂಡನೀಯವಾಗಿದೆ. ಈ ಪ್ರಕರಣದಲ್ಲಿ ಮೋದಿ ಸರಕಾರ ಮೂಕ ದರ್ಶಕನಾಗಿ ಕುಳಿತಿದೆ. ಈ ಘಟನೆಯ ಉದ್ದೇಶ ಮುಸಲ್ಮಾನರಿಗೆ ಅವರ ಧರ್ಮದ ಪಾಲನೆ ಮಾಡುವ ಮೂಲಭೂತ ಅಧಿಕಾರ ಉಪಯೋಗಿಸಬಾರದು ಎಂಬುದಾಗಿದೆ. ಇದರಿಂದ ಭಾರತ ಸರಕಾರ ಮತ್ತು ಸಮಾಜ ಇವರು ಮುಸಲ್ಮಾನ ವಿರೋಧಿ ವಿಚಾರ ಸರಣಿ ಬೆಳಕಿಗೆ ಬರುತ್ತಿದೆ. ಭಾರತದಲ್ಲಿನ ಘಟನೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಂಸ್ಥೆ ಹಸ್ತಕ್ಷೇಪ ನಡೆಸಬೇಕು. ಅವರು ಭಾರತದಲ್ಲಿನ ಮುಸಲ್ಮಾನರ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಮ್ಮ ಮಾತನ್ನು ಮುಂದುವರಿಸುತ್ತಾ, ಭಾರತದಲ್ಲಿ ಅಲ್ಪಸಂಖ್ಯಾತರು ವಿಶೇಷವಾಗಿ ಮುಸಲ್ಮಾನರ ಧಾರ್ಮಿಕ ಸ್ಥಳದ ವಿರುದ್ಧ ನಡೆದಿರುವ ಹಿಂಸಾಚಾರದ ಘಟನೆಯ ಬಗ್ಗೆ ಕುಲಂಕುಶವಾಗಿ ವಿಚಾರಣೆ ನಡೆಯಬೇಕು. ಭಾರತವು ಈ ರೀತಿಯ ಘಟನೆ ಮರುಕಳಿಸದೇ ಇರಲು ಪ್ರಯತ್ನ ಮಾಡಬೇಕು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಕಳ್ಳನಿಗೊಂದು ಪಿಳ್ಳೆನೆವ ! ತಂತ್ರಗಾರಿಕೆಯಲ್ಲಿ ಪಾಕಿಸ್ತಾನ ಭಾರತದಗಿಂತಲೂ ನಿಪುಣ, ಇದರಿಂದ ಗಮನಕ್ಕೆ ಬರುತ್ತದೆ ! ಭಾರತವು ಅವರಿಂದ ಕಲಿಯಬೇಕು !

ಪಾಕಿಸ್ತಾನವು ಭಾರತದಲ್ಲಿ ಏನು ನಡೆಯುತ್ತಿದೆ, ಇದರ ಕಡೆಗೆ ನೋಡುವ ಬದಲು ಪಾಕಿಸ್ತಾನದಲ್ಲಿ ಕಳೆದ ೭೪ ವರ್ಷಗಳಿಂದ ಹಿಂದೂಗಳ ಬಗ್ಗೆ ಏನು ನಡೆಯುತ್ತಿದೆ, ಇದರ ಬಗ್ಗೆ ಮಾತನಾಡಬೇಕು ! ಭಾರತ ಸರಕಾರವೇ ಅಂತರರಾಷ್ಟ್ರೀಯ ಸಂಸ್ಥೆಗೆ ಪಾಕಿಸ್ತಾನದಲ್ಲಿ ಹಿಂದೂಗಳ ನರಸಂಹಾರ ವಿಷಯವಾಗಿ ಹಸ್ತಕ್ಷೇಪ ನಡೆಸಲು ಒತ್ತಾಯಿಸಬೇಕು !