ಮದುರೈಯ ಪಟ್ಟಿನಪ್ರವೇಶಂ ಪಲಕ್ಕಿ ಯಾತ್ರೆಗೆ ಅನುಮತಿ !

ಮದುರೈ (ತಮಿಳುನಾಡು) – ತಮಿಳುನಾಡಿನ ಮದುರೈಯ ಧರ್ಮಪುರಂ ಅಧೀನಮ್ ಪಟ್ಟಿನಪ್ರವೇಶಂ ಎಂಬ ಪಲಕ್ಕಿ ಯಾತ್ರೆಗೆ ಅನುಮತಿ ನಿರಾಕರಿಸುವ ಆದೇಶವನ್ನು ತಮಿಳುನಾಡಿನ ದ್ರಮುಕ (ದ್ರಾವಿಡ ಮುನ್ನೇತ್ರ ಕಳಗಂ) ಸರಕಾರ ಹಿಂಪಡೆದಿದೆ. ಇದಕ್ಕೂ ಮೊದಲು ಮಹಿಲಾದೂಥರಾಯಿ ಕಂದಾಯ ಇಲಾಖೆ ಅಧಿಕಾರಿ ಜೆ ಬಾಲಾಜಿ ಇವರು ಅನುಮತಿಯನ್ನು ನಿರಾಕರಿಸಿದ್ದರು. ಪಟ್ಟಿನ ಪ್ರವೇಶಂ ಎಂದರೆ ಶೈವ ಮಠದ ಮಹಾಂತರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಆ ಪಲಕ್ಕಿ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಪರಂಪರೆ ಆಗಿದೆ.

ಮಾನವ ಆದಿಕಾರದ ಕಾರಣ ಹೇಳುತ್ತಾ ಇದರ ಅನುಮತಿಯನ್ನು ನಿರಾಕರಿಸಲಾಗಿತ್ತು. ಆದರೆ ಮಠದ ಪದಾಧಿಕಾರಿಗಳು ಈ ಕಾರ್ಯಕ್ರಮ ನಡೆಸುವುದಾಗಿ ನಿಶ್ಚಯಿಸಿದರು. ಈ ಕಾರ್ಯಕ್ರಮ ಮೆ ೨೨ ರಂದು ನಡೆಯಲಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಟ್ಯಾಲಿನ್ ಇವರು ಹಸ್ತಕ್ಷೇಪ ನಡೆಸಬೇಕೆಂದು ಹಿಂದೂಗಳು ಒತ್ತಾಯಿಸಿದ್ದರು.