ಅಲವರ (ರಾಜಸ್ಥಾನ) ಇಲ್ಲಿಯ ೩೦೦ ವರ್ಷ ಹಳೆಯ ಶಿವಮಂದಿರ ಅನಧಿಕೃತವೆಂದು ಹೇಳಿ ನೆಲಸಮ !

ಅಲವರ ಜಿಲ್ಲೆಯ ರಾಜಗಡನಲ್ಲಿ ೩೦೦ ವರ್ಷ ಹಳೆಯದಾಗಿರುವ ಶಿವ ಮಂದಿರವನ್ನು ಅಕ್ರಮವೆಂದು ಹೇಳುತ್ತಾ ಅದರ ಛಾವಣಿ ಮತ್ತು ಗೋಡೆಗಳನ್ನು ಕೆಡವಲಾಯಿತು. ಈ ಕಾರ್ಯಾಚರಣೆಯಲ್ಲಿ ದೇವಸ್ಥಾನದಲ್ಲಿರುವ ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸಿ ಶಿವಲಿಂಗವನ್ನು ಯಂತ್ರದ ಮೂಲಕ ತುಂಢರಿಸಿದ್ದಾರೆ.

ನಟಿ ಕರಿನಾ ಕಪೂರ ಖಾನರವರನ್ನು ಬರೀ ಹಣೆಯಲ್ಲಿ ಬಿಂದಿಯಿಟ್ಟುಕೊಳ್ಳದೆ ತೋರಿಸಿದ್ದರಿಂದ ಜಾಹೀರಾತನ್ನು ನಿಷೇಧಿಸಿದ ಹಿಂದೂಗಳು !

ಎಮ್.ಪಿ. ಅಹಮದರವರ ಮಾಲೀಕತ್ವದ ‘ಮಲಬಾರ ಗೋಲ್ಡ ಆಂಡ್ ಡಾಯಮೆಂಡ್ಸ’ ಎಂಬ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮಾರಾಟ ಮಾಡುವ ಕಂಪನಿಯು ಅಕ್ಷಯ ತೃತೀಯದ ನಿಮಿತ್ತ ಒಡವೆಗಳ ಜಾಹೀರಾತನ್ನು ಪ್ರಸಾರ ಮಾಡಿದೆ.

‘ನನಗೆ ರಾಮ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ !’ (ಅಂತೆ)

ತಮಿಳುನಾಡಿನಲ್ಲಿರುವ ಕಾಂಗ್ರೆಸ್ಸಿನ ಮಹಿಳಾ ಶಾಸಕಿಯಾದ ಜ್ಯೋತಿಮಣಿಯವರು ‘ನನಗೆ ಭಗವಾನ ರಾಮನ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ’ ಎಂಬಂತಹ ಹೇಳಿಕೆಯನ್ನು ನೀಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ.

‘ಕಾಮಸೂತ್ರ’ದ ಭೂಮಿಯಲ್ಲಿ ಲೈಂಗಿಕತೆಯ ಬಗ್ಗೆ ಸಾಮಾಜಿಕ ಚರ್ಚೆ ಮಾಡುವುದನ್ನು ಅಶ್ಲೀಲವೆಂದು ತಿಳಿಯುವುದು ಅಯೋಗ್ಯವಾಗಿದೆ !’ (ಅಂತೆ)

ಇಂದಿಗೂ ಹೆಚ್ಚಿನ ಹಿಂದೂ ಸಮಾಜವು ಧರ್ಮಾಚರಣೆಯನ್ನು ಮಾಡುತ್ತದೆ. ಹೀಗಿರುವಾಗ ಪಾಶ್ಚಾತ್ಯ ವಿಚಾರಸರಣಿಯನ್ನು ಹರಡಲು ಪ್ರಯತ್ನಿಸುವ ಪ್ರವೃತ್ತಿಗಳಿಗೆ ಸಮಯಕ್ಕೆ ಸರಿಯಾಗಿ ಪಾಠ ಕಲಿಸಲು ಸರಕಾರವು ಅವರ ವಿರುದ್ಧ ಕಾರ್ಯಾಚರಣೆಯನ್ನು ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

‘ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ !’ (ಅಂತೆ) – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಮಾಡುವುದನ್ನು ಮಾಡಿ ನಮ್ಮದೇ ಸರಿ ಅನ್ನುವ ನಿಲುವನ್ನು ಹೊಂದಿರುವ ಜಿಹಾದಿ ಮಾನಸಿಕತೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ! ಅನೇಕ ಜಿಹಾದಿ ದಾಳಿಗಳಲ್ಲಿ ತೊಡಗಿರುವ ಇಂತಹ ಪ್ರವೃತ್ತಿಗಳನ್ನು ಆಗಿಂದಾಗಲೇ ನಿಗ್ರಹಿಸುವುದು ಅಗತ್ಯವಿದೆ ! ಈಗಲಾದರೂ ಈ ಸಂಘಟನೆಯನ್ನು ಕೇಂದ್ರ ಸರಕಾರ ಶೀಘ್ರವೇ ನಿಷೇಧಿಸಬೇಕು, ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ!

ಎಟಾ (ಉತ್ತರಪ್ರದೇಶ) ಇಲ್ಲಿ ಹಿಂದೂಗಳು ಅರ್ಪಣೆ ನೀಡುತ್ತಿದ್ದ ದರ್ಗಾದಲ್ಲಿ ೯೯ ಕೋಟಿ ರೂಪಾಯಿಯ ಅವ್ಯವಹಾರ !

ಜಿಲ್ಲೆಯ ಜಲೇಸರ್‌ನಲ್ಲಿರುವ ‘ಬಡೆ ಮಿಯಾ-ಛೋಟೆ ಮಿಯಾ’ ಹೆಸರಿನ ದರ್ಗಾದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದರ್ಗಾದ ನಿರ್ವಹಣೆಯನ್ನು ಸರಕಾರಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ.

ಹಿಂದುತ್ವನಿಷ್ಠರ ವಿರೋಧದ ನಂತರವೂ, ಬೇಲೂರಿನಲ್ಲಿ ದೇವಾಲಯದ ರಥೋತ್ಸವವು ಕುರಾನ್ ಪಠಣದೊಂದಿಗೆ ಪ್ರಾರಂಭ !

ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಎಪ್ರಿಲ್ ೧೧ ರಂದು ರಥೋತ್ಸವದ ಆರಂಭವನ್ನು ಕುರಾನ್ ಪಠಣ ಎಂದು ಕರೆಯಲ್ಪಡುವ ಐತಿಹಾಸಿಕ ಸಂಪ್ರದಾಯದಿಂದ ಪ್ರಾರಂಭಿಸಲಾಯಿತು. ಈ ಸಂಪ್ರದಾಯವನ್ನು ಹಿಂದುತ್ವನಿಷ್ಠರು ಕಾನೂನಾತ್ಮಕವಾಗಿ ವಿರೋಧಿಸಿದ್ದರು.

ಕನ್ಯಾಕುಮಾರಿಯಲ್ಲಿ ಶಾಲಾ ವಿದ್ಯಾರ್ಥಿಗಳ ಮತಾಂತರಕ್ಕೆ ಯತ್ನಿಸಿದ ಕ್ರೈಸ್ತ ಶಿಕ್ಷಕಿ ಅಮಾನತು

ಕನ್ನಟ್ಟುವಿಳೈ ಸರಕಾರಿ ಪ್ರೌಢಶಾಲೆಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿ ಮತಾಂತರಕ್ಕೆ ಯತ್ನಿಸಿದ ಶಿಕ್ಷಕಿಯ ವಿರುದ್ಧ ೬ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಪೋಷಕರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಾರೆ.

ಚೆನ್ನೈಯಲ್ಲಿರುವ ‘ಅಯೋಧ್ಯಾ ಮಂಡಪಮ್‌’ ಎಂಬ ಧಾರ್ಮಿಕ ಸ್ಥಳದ ಸರಕಾರೀಕರಣ !

ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ವಿಭಾಗವು ಚೆನ್ನೈಯಲ್ಲಿರುವ ಪಶ್ಚಿಮ ಮಾಂಬಲಮ್‌ನಲ್ಲಿರುವ ‘ಅಯೋಧ್ಯಾ ಮಂಡಪಮ್‌’ವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ೬೪ ವರ್ಷ ಹಳೆದಾದ ಈ ಧಾರ್ಮಿಕ ಸ್ಥಳಕ್ಕೆ ‘ಅಯೋಧ್ಯಾ ಅಶ್ವಮೇಧ ಮಹಾ ಮಂಡಪಮ್‌’ ಎಂದು ಕರೆಯಲಾಗುತ್ತದೆ.

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಧಾರ್ಮಿಕ ದ್ವೇಷ ಹರಡಿದ ಆರೋಪದಡಿ ಪ್ರಕರಣ ದಾಖಲು

ಧಾರ್ಮಿಕ ವೈಷಮ್ಯ ಹರಡಿದ ಆರೋಪದಡಿ ಕಾಂಗ್ರೆಸ್ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಖರಗೋನ್ ಮತ್ತು ಬರವಾನಿ ಜಿಲ್ಲೆಗಳಲ್ಲಿ ರಾಮನವಮಿ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ನಡೆದಿದೆ.