ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಪ್ರಕರಣದಲ್ಲಿ ಯುಕ್ತಿವಾದ ಮುಗಿದಿದೆ : ಇಂದು ತೀರ್ಪು!

ವಾರಾಣಸಿ (ಉತ್ತರಪ್ರದೇಶ) – ಇಲ್ಲಿನ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಿ ದೇವಸ್ಥಾನಗಳ ಸಮೀಕ್ಷೆಯ ಸಂದರ್ಭದಲ್ಲಿ ದಿವಾನಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಯುಕ್ತಿವಾದವು ಪೂರ್ಣವಾಗಿದ್ದು, ಅದರ ಮೇಲೆ ಮೇ ೧೨ ರಂದು ಮಧ್ಯಾಹ್ನ ೧೨ ಗಂಟೆಗೆ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು. ಮೇ ೧೧ ರಂದು ನಡೆದಿರುವ ಆಲಿಕೆಯ ಸಮಯದಲ್ಲಿ ಮುಸಲ್ಮಾನ ಮತ್ತು ಹಿಂದೂಗಳ ಪಕ್ಷದ ನ್ಯಾಯವಾದಿಗಳಿಂದ ಯುಕ್ತಿವಾದವು ಮುಗಿದ ನಂತರ ನ್ಯಾಯಾಲಯವು ಮೇ ೧೨ ರಂದು ತೀರ್ಪು ನೀಡುವುದಾಗಿ ಹೇಳಿದೆ.

ಇದರಲ್ಲಿ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಚಿತ್ರೀಕರಣ ಯಾವಾಗ ಮತ್ತು ಹೇಗೆ ನಡೆಸುವುದು ಎಂಬುದರ ಮೇಲೆ, ಹಾಗೆಯೇ ನ್ಯಾಯಾಲಯವು ಆಯುಕ್ತರನ್ನು ಬದಲಾಯಿಸ ಬೇಕೇ ? ಎಂಬುದರ ಬಗ್ಗೆ ತೀರ್ಪು ನೀಡಲಾಗುವುದು.