ಮುಸಲ್ಮಾನ ಯುವತಿಯನ್ನು ಪ್ರೀತಿಸಿದ ಹಿಂದು ಯುವಕನನ್ನು ಆಕೆಯ ಸಹೋದರನಿಂದ ಹತ್ಯೆ

ರಾಜಕೋಟ (ಗುಜರಾತ) – ಮುಸಲ್ಮಾನ ಯುವತಿಯನ್ನು ಹಿಂದು ಯುವಕನು ಪ್ರೀತಿಸಿದ್ದರಿಂದ ಅವಳ ಸಹೋದರನು ಆ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕನ ಹೆಸರು ಮಿಥುನ ಠಾಕೂರ (ವಯಸ್ಸು ೨೨) ಆಗಿದೆ. ಅವನು ಸುಮೈಯಾ ಕಾದಿಯನ್ನು ಪ್ರೀತಿಸುತ್ತಿದ್ದನು. ಆದ್ದರಿಂದ ಸುಮೈಯಾಳ ಸಹೋದರ ಸಾಕಿರನು ತನ್ನ ೩ ಸಹಚರರೊಂದಿಗೆ ಸೇರಿ ಮಿಥುನ ಎಂಬುವವನನ್ನು ಕೊಲೆ ಮಾಡಿದನು. ಮತ್ತೊಂದು ಕಡೆ ಮಿಥುನನ್ನು ಕೊಲೆ ಮಾಡಿದ್ದರಿಂದ ಸುಮೈಯಾಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಆಕೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿಥುನ ಮೂಲದಲ್ಲಿ ಬಿಹಾರದವನಾಗಿದ್ದಾನೆ. ಅವನು ರಾಜಕೊಟ್‌ನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಜಂಗಲೆಶ್ವರ ಮಾರ್ಗದಲ್ಲಿರುವ ರಾಧಾಕೃಷ್ಣ ಸೊಸೈಟೀಯಲ್ಲಿ ವಾಸಿಸುತ್ತಿದ್ದನು. ಅಲ್ಲಿಯೇ ವಾಸಿಸುತ್ತಿದ್ದ ಸುಮೈಯಾಳ ಮೇಲೆ ಅವನಿಗೆ ಪ್ರೇಮವಿತ್ತು. ಅವರಿಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು.

ಸಂಪಾದಕೀಯ ನಿಲುವು

ಈ ವಿಷಯದ ಬಗ್ಗೆ ಜಾತ್ಯತೀತರು ಮಾತನಾಡುವರೇ ? ಮುಸಲ್ಮಾನರು ಹಿಂದು ಯುವತಿಯ ಮೇಲೆ ಮಾಡಿದರೆ ಅದು ‘ಪ್ರೀತಿ’ ಹಾಗೂ ಹಿಂದು ಯವಕನು ಮುಸಲ್ಮಾನ ಯುವತಿಯನ್ನು ಪ್ರೀತಿಸಿದರೆ, ಅದು ‘ಯುವತಿಯ ಧರ್ಮದ್ರೋಹ’, ಎಂಬ ಮಾನಸಿಕತೆಯಿರುವವರನ್ನು ಯಾವಾಗ ತರಾಟೆಗೆ ತೆಗೆದುಕೊಳ್ಳುವಿರಿ ?