ನೋಯ್ಡಾ (ಉತ್ತರ ಪ್ರದೇಶ) ದೇವಾಲಯಗಳಲ್ಲಿ ವಿಗ್ರಹಗಳು ಮತ್ತು ಶಿವಲಿಂಗಗಳನ್ನು ದುಶ್ಕರ್ಮಿಗಳಿಂದ ಧ್ವಂಸ

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ನೋಯ್ಡಾ (ಉತ್ತರ ಪ್ರದೇಶ) – ಇಲ್ಲಿಯ ಸೆಕ್ಟರ್-೩೭ರಲ್ಲಿನ ದೇವಸ್ಥಾನದಲ್ಲಿ ಶಿವಲಿಂಗ, ಶ್ರೀ ದುರ್ಗಾದೇವಿ ಮತ್ತು ಶ್ರೀ ಹನುಮಾನ್ ವಿಗ್ರಹಗಳನ್ನು ದುಶ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಮೇ ೨೩ ರಂದು ನಡೆದಿದೆ. ಈ ಮಾಹಿತಿ ಪಡೆದ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ನೋಯ್ಡಾ ಪೊಲೀಸರು ‘ದೇವಾಲಯದಲ್ಲಿ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು’, ಎಂದು ಹಿಂದೂಗಳಿಗೆ ಭರವಸೆ ನೀಡಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

ಕಳೆದ ಒಂದು ಸಾವಿರ ವರ್ಷಗಳಿಂದ ಭಾರತದಲ್ಲಿ ಕೇವಲ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದ್ದು, ಅದರ ಬಗ್ಗೆ ಜಾತ್ಯಾತೀವಾದಿಗಳು ಹಾಗೂ ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಅಗತ್ಯವಿದೆ !