ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು `ಶ್ರೀ ರಾಮಾಯಣ ಯಾತ್ರೆ’ ವಿಶೇಷ ರೈಲು ಆರಂಭ !

`ಶ್ರೀ ರಾಮಾಯಣ ಯಾತ್ರೆ’ ವಿಶೇಷ ರೈಲು

ನವದೆಹಲಿ : ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಐ.ಆರ್.ಸಿ.ಟಿ.ಸಿ.ಯು(`ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್’) `ಶ್ರೀ ರಾಮಾಯಣ ಯಾತ್ರೆ’ ರೈಲನ್ನು ಪ್ರಾರಂಭಿಸಿದೆ. ನವೆಂಬರ್ 7 ರಿಂದ ಈ ಯಾತ್ರೆಯನ್ನು ಆರಂಭಿಸಲಾಗಿದೆ. ಈ ಯಾತ್ರಾ ರೈಲುಬಂಡಿಯನ್ನು ದೆಹಲಿಯ ಸಫದರ್‍ಜಂಗ್ ರೈಲು ನಿಲ್ದಾಣದಿಂದ ಆರಂಭಿಸಲಾಯಿತು. ಇಲ್ಲಿಂದ ಈ ರೈಲು ಮಾರ್ಗವು ಭಗವಾನ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಹೋಗಲಿದೆ.

1. ಈ ರೈಲುಮಾರ್ಗದ ಮೊದಲ ನಿಲ್ದಾಣವು ಅಯೋಧ್ಯೆಯಲ್ಲಿರಲಿದೆ. ಅಲ್ಲಿಯ ನಂದಿಗ್ರಾಮದ ಭಾರತ ಮಂದಿರ, ಶ್ರೀ ರಾಮ ಜನ್ಮಭೂಮಿ ಮಂದಿರ ಮತ್ತು ಹನುಮಾನ ಗಢಿ ಮಂದಿರಗಳಿಗೆ ಯಾತ್ರಾರ್ಥಿಗಳು ಭೇಟಿ ನೀಡಲಿದ್ದಾರೆ. ಇದರ ನಂತರ, ಬಿಹಾರದ ಸೀತಾಮಢಿಗೆ ಹೋದನಂತರ ಜನಕಪುರದ ಶ್ರೀ ರಾಮ ಜಾನಕಿ ದೇವಸ್ಥಾನವನ್ನು ಭೇಟಿ ಮಾಡಬಹುದು. ಇದಾದ ನಂತರ ಯಾತ್ರಾರ್ಥಿಗಳು ವಾರಣಾಸಿಗೆ ತೆರಳಲಿದ್ದಾರೆ. ಯಾತ್ರಾರ್ಥಿಗಳು ವಾರಣಾಸಿಯಿಂದ ಪ್ರಯಾಗ, ಶೃಂಗವರಪುರ ಮತ್ತು ಚಿತ್ರಕೂಟಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಇದಾದ ಬಳಿಕ ನಾಸಿಕಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ತ್ರ್ಯಂಬಕೇಶ್ವರ ದೇವಸ್ಥಾನ ಮತ್ತು ಪಂಚವಟಿಗೆ ಯಾತ್ರಾರ್ಥಿಗಳು ಭೇಟಿ ನೀಡಲಿದ್ದಾರೆ. ಇದಾದ ನಂತರ ಯಾತ್ರಾರ್ಥಿಗಳು ಹಂಪಿಗೆ ತೆರಳಲಿದ್ದಾರೆ. ಕಿಷ್ಕಿಂಧೆಯು ಹಂಪಿಯ ಪ್ರಾಚೀನ ನಗರವಾಗಿತ್ತು. ಇದರ ನಂತರ, ಯಾತ್ರಾರ್ಥಿಗಳು ಪ್ರವಾಸದ ಕೊನೆಯ ತಾಣವಾದ ರಾಮೇಶ್ವರಂಗೆ ತೆರಳಲಿದ್ದಾರೆ.

2. ಈ ಯಾತ್ರೆಗಾಗಿ ದ್ವಿತೀಯ ದರ್ಜೆಯ ಹವಾನಿಯಂತ್ರಿತ ಬೋಗಿಗೆ ಪ್ರತಿ ವ್ಯಕ್ತಿಗೆ 82,950 ರೂಪಾಯಿ ನಿಗದಿ ಪಡಿಸಲಾಗಿದೆ, ಮೊದಲ ದರ್ಜೆಯ ಹವಾನಿಯಂತ್ರಿತ ಭೋಗಿಗೆ ಪ್ರತಿ ವ್ಯಕ್ತಿಗೆ 1,02,955 ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ, ಪ್ರಯಾಣಿಕರಿಗೆ ಹವಾನಿಯಂತ್ರಿತ ರೆಸ್ಟೋರೆಂಟ್‍ಗಳಲ್ಲಿ ವಸತಿ, ಊಟ, ಹವಾನಿಯಂತ್ರಿತ ವಾಹನಗಳು ವೀಕ್ಷಣೆಯ ಸ್ಥಳಗಳು ಮತ್ತು ಪ್ರಯಾಣ ವಿಮೆಯನ್ನು ಒದಗಿಸಲಾಗುತ್ತದೆ.