ಕರ್ಣಾವಾತಿ (ಗುಜರಾತ) ಇಲ್ಲಿಯ ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ನಿಷೇಧ

ಕರ್ಣಾವತಿ (ಗುಜರಾತ) – ಇಲ್ಲಿಯ ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ಮಹಾನಗರ ಪಾಲಿಕೆಯು ನಿಷೇಧ ಹೇರಿದೆ. ಆದ್ದರಿಂದ ಇನ್ನು ಶಾಲೆಗಳು, ಮಹಾವಿದ್ಯಾಲಯಗಳು, ಸಭಾಗೃಹ, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವಂತಿಲ್ಲ. ಗುಜರಾತದಲ್ಲಿ ಈ ಮೊದಲು ಭವಾನಗರ, ಜುನಾಗಡ್, ರಾಜಕೊಟ ಮತ್ತು ಬಡೋದಾ ಮಹಾನಗರಪಾಲಿಕೆಯೂ ಈ ನಿರ್ಣಯ ತೆಗೆದುಕೊಂಡಿತ್ತು.

ಜನರ ಆಹಾರದ ಬಗ್ಗೆ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ! – ಮುಖ್ಯಮಂತ್ರಿ ಭೂಪೇಂದ್ರ ಪಟೇಲ

ರಾಜ್ಯ ಸರಕಾರಕ್ಕೆ ಜನರ ಆಹಾರದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ, ಎಂದು ಗುಜರಾತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ ಇವರು ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟ ಮಾಡಲು ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಹೇಳಿದ್ದಾರೆ. ಮುಖ್ಯಮಂತ್ರಿ ಪಟೇಲ ಮಾತನ್ನು ಮುಂದುವರೆಸುತ್ತಾ, ಅಸ್ವಚ್ಛ ಆಹಾರ ಪದಾರ್ಥ ಮಾರಾಟ ಮಾಡುವವರು ಮತ್ತು ಸಾರಿಗೆ ಸಂಚಾರಕ್ಕೆ ಸಮಸ್ಯೆ ತಂದೊಡ್ಡುವ ಬೀದಿ ಬದಿಯ ವ್ಯಾಪಾರಿಗಳ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಈ ವಿಷಯವಾಗಿ ಸ್ಥಳೀಯ ಮಹಾನಗರಪಾಲಿಕೆ ನಿರ್ಣಯ ತೆಗೆದುಕೊಳ್ಳಬಹುದು, ಎಂದಿದ್ದಾರೆ.