ಮಥುರಾದಲ್ಲಿ ಆಡಳಿತದಿಂದ ಕಪ್ರ್ಯೂ (ಸಂಚಾರ ನಿಷೇಧ) ಜಾರಿ

ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ

ಮಥುರಾ (ಉತ್ತರಪ್ರದೇಶ) – ಹಿಂದೂ ಮಹಾಸಭೆಯು ಬರುವ ಡಿಸೆಂಬರ್ 6 ರಂದು ಇಲ್ಲಿ ಶ್ರೀಕೃಷ್ಣ ಜನ್ಮಭೂಮಿಯ ಈದ್ಗಾ ಮಸೀದಿಗೆ ಹೋಗಿ ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅದಕ್ಕೆ ಅಭಿಷೇಕ ಮಾಡಲಾಗುವುದೆಂದು ಘೋಷಿಸಿದ ನಂತರ ಆಡಳಿತವು ಅಲ್ಲಿ ಕಫ್ರ್ಯೂ ಜಾರಿಮಾಡಿದೆ. ಡಿಸೆಂಬರ್ 6 ಇದೇ ದಿನ 1992 ರಲ್ಲಿ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ಆದ್ದರಿಂದ ಆಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಉಪಾಯವೆಂದು ಕಫ್ರ್ಯೂ ಜಾರಿ ಮಾಡಿದೆ. ‘ಯಾರೇ ವದಂತಿ ಹಬ್ಬಿಸಲು ಪ್ರಯತ್ನಿಸಿದರೆ, ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’, ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧೀಕ್ಷಕರು ಹಿಂದೂ ಮತ್ತು ಮುಸಲ್ಮಾನರ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ ಹಾಗೂ ಅಲ್ಲಲ್ಲಿ ತಪಾಸಣೆಗಾಗಿ ಚೌಕಿಗಳು ತೆರೆಯಲಾಗಿದೆ.