ರಾಮಪುರದಲ್ಲಿ (ವಾರಣಾಸಿ) ಮೃತ ದೇಹಗಳನ್ನು ಹೂಳಲು ‘ನಟ್’ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು !

ಇಂತಹ ಘಟನೆಗಳಾಗಲು ವಾರಣಾಸಿ ಭಾರತದಲ್ಲಿದೆಯೇ ಪಾಕಿಸ್ತಾನದಲ್ಲಿದೆಯೇ ? ಉತ್ತರಪ್ರದೇಶದ ಭಾಜಪ ಸರಕಾರವು ಈ ಘಟನೆಯ ಕುರಿತು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಎಂದು ಹಿಂದೂಗಳ ಒತ್ತಾಯ ?

ವಾರಣಾಸಿ (ಉತ್ತರಪ್ರದೇಶ) – ರಾಮಪುರದಲ್ಲಿ ಮೃತ ದೇಹಗಳನ್ನು ಹೂಳಲು ನಟ್ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು ವಿಧಿಸಿರುವ ಘಟನೆ ನಡೆದಿದೆ. ರಾಮಪುರದ ನಟ್ ಸಮಾಜದ ಸುಶೀಲಾ ದೇವಿಯವರು ಮೃತಪಟ್ಟಿದ್ದರು. ಸತ್ತವರನ್ನು ಹೂಳುವುದು ಈ ಸಮಾಜದಲ್ಲಿ ರೂಢಿಯಲ್ಲಿದೆ. ಆಕೆಯ ಶವವನ್ನು ಹೂಳಲು ಪತಿ ಸಚಾವು ನಟ್ ಮತ್ತು ಸಂಬಂಧಿಕರು ಭರಾವರ ಬಸ್ತಿಗೆ ತಲುಪಿದರು; ಆದರೆ ಅವರ ಅಂತ್ಯಸಂಸ್ಕಾರದ ಮೊದಲು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಷರತ್ತು ಹಾಕಲಾಯಿತು. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಪೊಲೀಸರನ್ನೂ ಕರೆಸಿದ್ದಾರೆ. ನಂತರ ಪೊಲೀಸರ ಸಮ್ಮುಖದಲ್ಲಿ ಶವದ ಅಂತಿಮ ಸಂಸ್ಕಾರ ಮಾಡಲಾಯಿತು.

ಯಾವ ಭೂಮಿಯ ಮೇಲೆ ಮೃತದೇಹಗಳ ಶವವನ್ನು ಹೂಳಲು ಅಡ್ಡಿಪಡಿಸಲಾಯಿತೋ, ಆ ಭೂಮಿ ಹಿಂದೂಗಳಿಗೆ ಸೇರಿದ್ದು, ಸಂಪ್ರದಾಯದಂತೆ ನಟ್ ಸಮುದಾಯದ ಮೃತದೇಹಗಳನ್ನು ಅಲ್ಲಿ ಹೂಳಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ೩೦ ರಂದು ಸ್ಥಳೀಯ ಫೂಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನಲ್ಲಿ ಅವರು ಭೂ-ಸಮಾಧಿ ಸಂಪ್ರದಾಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ನಟ್ ಸಮುದಾಯದಲ್ಲಿ ಈಗಾಗಲೇ ಇಸ್ಲಾಂಗೆ ಮತಾಂತರಗೊಂಡವರ ಕೈವಾಡ ! – ಹಿಂದೂ ಜನಜಾಗರಣ ವೇದಿಕೆ

ಮತಾಂತರಿಗಳು ಹೆಚ್ಚು ಅಪಾಯಕಾರಿ ಆಗಿರುತ್ತಾರೆ, ಎಂಬುದು ಇದರಿಂದ ಸಾಬೀತಾಗುತ್ತದೆ !

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗರಣ ವೇದಿಕೆಯು ಸರಕಾರಕ್ಕೆ ಆಗ್ರಹಿಸಿದೆ. ಈ ವೇಳೆ ಹಿಂದೂ ಜನಜಾಗರಣ ವೇದಿಕೆಯ ಪದಾಧಿಕಾರಿ ಗೌರೀಶ ಸಿಂಗ್ ಮಾತನಾಡುತ್ತಾ, ಇಸ್ಲಾಂ ಧರ್ಮ ಸ್ವೀಕಾರಕ್ಕೆ ಒತ್ತಡ ಹೇರುವವರು ನಟ್ ಸಮುದಾಯಕ್ಕೆ ಸೇರಿದವರಾಗಿದ್ದರು. ಕಾಲಾನಂತರದಲ್ಲಿ ಅವರು ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಮತಾಂತರಕ್ಕಾಗಿ ಸಮಾಜದ ಇತರ ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಲ್ಲದೇ ನಟ ಸಮಾಜವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ನಟ್ ಸಮುದಾಯದ ಕೆಲವರು ಇಸ್ಲಾಂಗೆ ಮತಾಂತರಗೊಂಡಿದ್ದರೂ, ಅವರು ತಮ್ಮ ಹಿಂದೂ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಇದರ ಹಿಂದೆ ಸಮಾಜ ಮತ್ತು ಸರಕಾರದ ದಾರಿ ತಪ್ಪಿಸಿ ಪರಿಶಿಷ್ಟ ಜಾತಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಲಾಭವನ್ನು ಪಡೆಯುತ್ತಿರುವ ಸಂಚಾಗಿದೆ. (ಯಾವುದು ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಗುತ್ತದೆ, ಅದು ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಆಡಳಿತಕ್ಕೆ ಹೇಗೆ ಸಿಗುವುದಿಲ್ಲ ? ಸರಕಾರವು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಜೊತೆಗೆ ಮತಾಂತರಗೊಂಡ ನಂತರವೂ ಹಿಂದೂ ಹೆಸರನ್ನು ಇಟ್ಟುಕೊಂಡು ಸರಕಾರಿ ಸೌಲಭ್ಯಗಳನ್ನು ಕಬಳಿಸುವ ಮತಾಂತರಿತರ ಮೇಲೆ ಕ್ರಮ ಕೈಗೊಳ್ಳಬೇಕು – ಸಂಪಾದಕರು)