ಶಬರಿಮಲೆ ದೇವಸ್ಥಾನದ ’ಅರಾವಣಾ ಪಾಯಸಂ’ ಈ ಪ್ರಸಾದವು ’ಅಲ್ ಝಾಹಾ’ ಎಂಬ ಅರೇಬಿಕ್ ಹೆಸರಿನಲ್ಲಿ ‘ಹಲಾಲ್’ ಪ್ರಮಾಣೀಕರಿಸಲ್ಪಟ್ಟಿರುವುದು ದೇವಸ್ಥಾನ ಪರಿಸರದಲ್ಲಿ ಹೇಗೆ ಸಿಗುತ್ತದೆ ?, ಈ ಪ್ರಶ್ನೆಗೆ ಉತ್ತರವಿಲ್ಲ. ‘ಹಿಂದೂ ದೇವಸ್ಥಾನಗಳ ಪ್ರಸಾದವನ್ನು ಮುಸಲ್ಮಾನ ವ್ಯಕ್ತಿಗಳು ತಯಾರಿಸುತ್ತಾರೆ’, ಎಂದು ಅಪಪ್ರಚಾರ ಮಾಡಿ ಅದರ ವಿರುದ್ಧ ಯಾರಾದರೂ ಪಿತೂರಿ ನಡೆಸಿದ್ದಾರೆಯೇ ? ಈ ಬಗ್ಗೆ ಕೇರಳದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ತನಿಖೆ ನಡೆಸಲಿದೆಯೇ ?
ತಿರುವನಂತಪುರಂ (ಕೇರಳ) – ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು.
#FakeNewsAlert: Did you get a forward or see a post that claims that tender for Sabarimala Aravana Payasam was given to a UAE based firm? It is not true. Read our fact check here. #Sabarimala #AravanaPayasam #Hinduism #FakeNews #FactCheck https://t.co/4IfLJ06vYj
— Newschecker (@NewscheckerIn) November 15, 2021
‘ಕೇರಳ ದೇವಸ್ವಂ ಬೋರ್ಡ್ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಓರ್ವ ಮುಸಲ್ಮಾನ ವ್ಯಕ್ತಿಗೆ ನೀಡಲಾಗಿದೆ. ಈ ಪ್ರಸಾದಕ್ಕೆ ‘ಅಲ್-ಝಹಾ’ ಎಂಬ ಅರೇಬಿಕ್ ಹೆಸರನ್ನು ನೀಡಲಾಗಿದೆ ಮತ್ತು ಇದನ್ನು ’ಹಲಾಲ್’ ಎಂದು ಉಲ್ಲೇಖಿಸಲಾಗಿದೆ’, ಈ ಸುದ್ದಿ ಎಲ್ಲೆಡೆ ಹರಡಿತ್ತು. ಇದಾದ ಬಳಿಕ ದೇಶಾದ್ಯಂತ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕುರಿತು ಸ್ಪಷ್ಟೀಕರಣ ನೀಡುತ್ತಾ, ‘ಶಬರಿಮಲೆ ದೇವಸ್ಥಾನದಲ್ಲಿ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಅರೇಬಿಕ್ ಸಂಸ್ಥೆಗೆ ನೀಡಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರೀತಿಯ ಪ್ರಸಾದವನ್ನು ಯಾರು ಬೇಕಾದರೂ ತಯಾರಿಸಿ ಮಾರಾಟ ಮಾಡಬಹುದು ಎಂದೂ ಹೇಳಲಾಗುತ್ತಿದೆ.