ಬಲ್ಲಭಗಡ್ (ಹರಿಯಾಣಾ) ಇಲ್ಲಿಯ ಸರಕಾರಿ ಭೂಮಿಯಲ್ಲಿನ ಅಕ್ರಮ ಮಜಾರನ್ನು ಧ್ವಂಸಗೈದ ಹಿಂದುತ್ವನಿಷ್ಠರು !

ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಮನವಿ ನೀಡಲಾಗಿತ್ತು !

ಆಡಳಿತಕ್ಕೆ ಮನವಿ ನೀಡಿದರೂ ಕ್ರಮ ಕೈಗೊಳ್ಳದಿದ್ದರೆ ಇಂತಹ ಆಡಳಿತದಿಂದ ಏನು ಪ್ರಯೋಜನ ? ಸರಕಾರಿ ಜಾಗದಲ್ಲಿ ಅಕ್ರಮ ಮಜಾರ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೇ ?- ಸಂಪಾದಕರು 

ಫರಿದಾಬಾದ್ (ಹರಿಯಾಣಾ) – ಇಲ್ಲಿಯ ಬಲ್ಲಭಗಡ್‍ನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮಜಾರನ್ನು (ಇಸ್ಲಾಮಿಕ್ ಪೀರ್ ಅಥವಾ ಫಕೀರನ ಸಮಾಧಿ) ಹಿಂದುತ್ವನಿಷ್ಠರು ರಾತ್ರಿಯ ಸಮಯದಲ್ಲಿ ಧ್ವಂಸ ಮಾಡಿದ್ದಾರೆ. ಅಲ್ಲಿ ಅವರಿಗೆ ಲೈಂಗಿಕತೆಗೆ ಸಂಬಂಧಿಸಿದ ಮತ್ತು ಮಹಿಳೆಯರನ್ನು ವಶೀಕರಣಗೊಳಿಸುವ ಔಷಧಗಳು ಪತ್ತೆಯಾಗಿವೆ. ಈ ಮಜಾರ ಇಲ್ಲಿಯ ಬಲ್ಲಭಗಡ ಪಂಚಾಯತ್ ಭವನದ ಜಮೀನಿನಲ್ಲಿ ನಿರ್ಮಿಸಲಾಗಿತ್ತು. ಈ ಮಜಾರಗೆ `ಬಾಬಾ ಭೂರೇಶಾಹ ಕಿ ಮಜಾರ್’ ಎಂದು ಹೆಸರಿಸಲಾಗಿತ್ತು. ಇದರಿಂದ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮಜಾರ್‍ನ ಮೌಲ್ವಿ (ಇಸ್ಲಾಂನ ಧಾರ್ಮಿಕ ನಾಯಕ) ಅಬ್ದುಲ್ ಗಫಾರ್ ಇದ್ದರು. ಆತ ಹಿಂದೂ ಮಹಿಳೆಯರಿಗೆ ಮೋಸ ಮಾಡಲು ತನ್ನ ಹೆಸರನ್ನು `ಬಬಲಿ’ ಎಂದು ಹೇಳುತ್ತಿದ್ದ. ಧ್ವಂಸದ ನಂತರ ಪೊಲೀಸರು ಈ ಮೌಲ್ವಿಯನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂ ಸಂಘಟನೆಗಳು ಈ ಹಿಂದೆಯೇ ಈ ಮಜಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದವು. ಅದೇ ರೀತಿ ಇಲ್ಲಿ ದೇವಸ್ಥಾನ ನಿರ್ಮಿಸಬೇಕೆಂದು ಒತ್ತಾಯಿಸಿದ್ದರು.