ದೇಶದ ಎಲ್ಲಾ ರಾಜ್ಯಗಳಲ್ಲಿ ಇಂತಹ ನಿಯಮವನ್ನು ಮಾಡಬೇಕು !- ಸಂಪಾದಕರು
ಲಕ್ಷ್ಮಣಪುರಿ (ಉತ್ತರಪ್ರದೇಶ) – ಮಹಾಪುರುಷರ ಜಯಂತಿ ಮತ್ತು ಮಹಾಶಿವರಾತ್ರಿಯಂದು ರಾಜ್ಯದಲ್ಲಿ ಕಸಾಯಿಖಾನೆಗಳನ್ನು ತೆರೆಯಲು ಮತ್ತು ಮಾಂಸ ಮಾರಾಟ ಮಾಡಲು ನಿಷೇಧಿಸಲಾಗಿದೆ. ಈ ದಿನ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ರಾಜ್ಯ ಸರಕಾರ ಆದೇಶಿಸಿದೆ. ಈ ಆದೇಶದಲ್ಲಿ, ಮಹಾವೀರ ಜಯಂತಿ, ಬುದ್ಧ ಜಯಂತಿ, ಗಾಂಧಿ ಜಯಂತಿ, ಮಹಾಶಿವರಾತ್ರಿ ಹಾಗೂ ಸಿಂಧಿ ಸಮಾಜದ ಸಂತ ಟಿ.ಎಲ್. ವಾಸ್ವಾನಿ ಅವರ ಜಯಂತಿಯ ದಿನದಂದು ನಗರ ಪ್ರದೇಶಗಳಲ್ಲಿ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಬೇಕು. ಅಹಿಂಸೆಯ ಸಂದೇಶವನ್ನು ಸಾರಿದ ಮಹಾಪುರುಷರ ಜಯಂತಿಯನ್ನು `ಅಹಿಂಸಾ ದಿನ’ ಎಂದು ಆಚರಿಸುವಂತೆಯೂ ಸೂಚಿಸಲಾಗಿದೆ.
Meat-free day in urban Uttar Pradesh today https://t.co/Btop6HpUvr
— TOI Lucknow News (@TOILucknow) November 25, 2021