‘ಹಲಾಲ್’ ಪ್ರಮಾಣಪತ್ರ ನೀಡುವ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದೂ ಜನಜಾಗೃತಿ ಸಮಿತಿಯ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯದ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಉತ್ತರಪ್ರದೇಶ ರಾಜ್ಯದ ಕಾನೂನು ಮತ್ತು ನ್ಯಾಯ ಮಂತ್ರಿ ಬ್ರಜೇಶ ಪಾಠಕ ಇವರಿಗೆ, ಕಾನೂನುಬಾಹಿರವಾಗಿ ‘ಹಲಾಲ್’ ಪ್ರಮಾಣಪತ್ರ ತೆಗೆದುಕೊಳ್ಳಲು ಕಡ್ಡಾಯ ಗೊಳಿಸಲು ಪ್ರಯತ್ನಿಸಲಾಗುತ್ತದೆ’, ಎಂಬುದನ್ನು ಗಮನಕ್ಕೆ ತಂದು ಕೊಟ್ಟಿದ್ದರು. ಈ ಪ್ರಕಾರವನ್ನು ತಡೆಯಲು ಒತ್ತಾಯಿಸುವ ಮನವಿಯನ್ನೂ ಶ್ರೀ. ಕುಲಕರ್ಣಿಯವರು ಬ್ರಜೇಶ ಪಾಠಕ ಅವರಿಗೆ ನೀಡಿದ್ದರು. ಇದಕ್ಕೆ ಪಾಠಕ ಇವರು ಈ ರೀತಿಯ ಪ್ರಮಾಣಪತ್ರ ನೀಡುವ ಸಂಸ್ಥೆಗಳ ಮೇಲೆ ಯೋಗ್ಯ ಕ್ರಮ ಕೈಗೊಳ್ಳಲು ಕೇಂದ್ರೀಯ ಆರೋಗ್ಯ ಮಂತ್ರಾಲಯಕ್ಕೆ ಪತ್ರ ಕಳುಹಿಸಲಾಗಿದೆ ಎಂದು ಹೇಳಿದರು.
ಇದರಲ್ಲಿ ಬ್ರಜೇಶ ಪಾಠಕ ಇವರು ಬರೆದ ಪತ್ರದಲ್ಲಿ, “ಪ್ರಸ್ತುತ ಮಾಂಸ, ಎಣ್ಣೆ, ಮಸಾಲೆ, ಸಿಹಿತಿನಿಸು, ಧಾನ್ಯ ಮುಂತಾದ ಆಹಾರ ಪದಾರ್ಥಗಳ ಬಗ್ಗೆ ಭಾರತ ಸರಕಾರದ ಯಾವುದೇ ಅನುಮತಿ ಇಲ್ಲದೆ ಕೆಲವು ಸಂಸ್ಥೆಗಳು ಕಾನೂನುಬಾಹಿರವಾಗಿ ಖಾಸಗಿ ಕಂಪನಿಗಳಿಗೆ ‘ಹಲಾಲ್ ಪ್ರಮಾಣಪತ್ರ ನೀಡುತ್ತಿವೆ. ಭಾರತದ ಆರೋಗ್ಯ ಮಂತ್ರಾಲಯ ಅಡಿಯಲ್ಲಿ ಬರುವ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಿಂದ ಆಹಾರ ಪದಾರ್ಥಗಳ ಬಗ್ಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಕಾನೂನಿನ ಪಾಲನೆ ಮಾಡುತ್ತಾ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ನೀಡಿರುವ ಮನವಿಗೆ ಸಹಾನುಭೂತಿ ಪೂರ್ವಕ ವಿಚಾರ ಮಾಡಿ ನಿಯಮಕ್ಕನುಗುಣವಾಗಿ ಯೋಗ್ಯ ಕ್ರಮ ಕೈಗೊಳ್ಳಬೇಕಾಗಿದೆ” ಎಂದು ಬರೆಯಲಾಗಿದೆ.