ಚೀನಾ ಸರಕಾರದ ಆದೇಶದಿಂದ ಅಗತ್ಯ ವಸ್ತುಗಳ ಖರೀದಿಗೆ ಭಾರೀ ಜನದಟ್ಟಣೆ !

ಚೀನಾ ಸರಕಾರ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ನಾಗರಿಕರಿಗೆ ಆದೇಶ ನೀಡಿದ ಪ್ರಕರಣ

ಭಾರತದಲ್ಲಿ ಮುಂಬರುವ ಆಪತ್ಕಾಲದಲ್ಲಿ ಅಗತ್ಯ ವಸ್ತುಗಳಿಗೆ ಇಷ್ಟು ಜನದಟ್ಟಣೆಯಾದರೆ ಆಶ್ಚರ್ಯಪಡಬೇಕಾಗಿಲ್ಲ !

ಬೀಜಿಂಗ್ (ಚೀನಾ) – ಚೀನಾ ಸರಕಾರ ಕೊರೋನಾ ಸಂಭಾವ್ಯ ಅಪಾಯದ ಬಗ್ಗೆ ಹೇಳುತ್ತಾ ಕೆಲವು ದಿನಗಳ ಹಿಂದೆ ಚೀನಿ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಆದೇಶಿಸಿತ್ತು. ಅಂದಿನಿಂದ ಚೀನಾದಲ್ಲಿ ಹೆಚ್ಚಿನ ನಗರಗಳಲ್ಲಿನ ದೊಡ್ಡ ಮಾರುಕಟ್ಟೆಗಳಲ್ಲಿ ಜನರ ಸಾಲುಗಳು ಆರಂಭವಾಗಿವೆ.

ಜನರು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಹಠಾತ್ ಬೇಡಿಕೆ ಹೆಚ್ಚಳವಾಗಿದ್ದರಿಂದ ಕೊರತೆ ನಿರ್ಮಾಣವಾಗಿದೆ. ಅನೇಕ ಸ್ಥಳಗಳಲ್ಲಿ ಮಾರುಕಟ್ಟೆಗಳಲ್ಲಿ ನೂಕುನುಗ್ಗಲು, ಹಲ್ಲೆಯಂತಹ ಘಟನೆಗಳು ನಡೆಯುತ್ತಿವೆ. ಅಗತ್ಯ ವಸ್ತುಗಳ ಸಂಗ್ರಹಣೆಗೆ ಆದೇಶ ನೀಡುವ ಹಿಂದೆ ಚೀನಾ ತೈವಾನ್ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಶಂಕಿಸಲಾಗಿದೆ.