‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ.

ಜಂಕ್ ಫುಡ್‍ನಿಂದ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ಟ್ವಿಟರ್ ನಲ್ಲಿ ಆಗಿದ್ದ #NoJunkFood_StayHealthy ಟ್ರೆಂಡ್ ಮೂರನೇ ಸ್ಥಾನದಲ್ಲಿ !

ಇತ್ತೀಚೆಗೆ ‘ಫೈನಾನ್ಶಿಯಲ್ ಟೈಮ್ಸ್’ ಪ್ರಕಟಿಸಲಾದ ವಾರ್ತೆಯಲ್ಲಿ ಜಗತ್ತಿನಾದ್ಯಂತ ಆಹಾರಗಳನ್ನು ತಯಾರಿಸುವ ಸಂಸ್ಥೆ `ನೆಸ್ಲೆ’ಯು, ‘ತನ್ನ ಶೇ. ೬೦ ರಷ್ಟು ಆಹಾರವು ಜಂಕ ಫುಡ್ ಈ ಶ್ರೇಣಿಯಲ್ಲಿ ಬರುತ್ತದೆ ಮತ್ತು ಅದು ಆರೋಗ್ಯಕ್ಕೆ ಹಾನಿಕರ’ ಎಂದು ಹೇಳಿದೆ. ಇಂದು ಜಂಕ ಫುಡ್ ಜನಪ್ರಿಯ ಆಹಾರವಾಗಿದೆ. ಅನೇಕ ವಿದೇಶಿ ಸಂಸ್ಥೆಗಳು ಜಂಕ್ ಫುಡ್‍ಅನ್ನು ಮಾರಾಟ ಮಾಡುತ್ತಿದ್ದು ಅದನ್ನು ತಿಂದು ಭಾರತಿಯರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ.

ಬಿಹಾರ-ನೇಪಾಳದ ಗಡಿಯಲ್ಲಿ ಪತ್ತೆಯಾದ ಚೀನಾದ ೮ ಡ್ರೋನ್‍ಗಳು !

ಜಮ್ಮುವಿನ ಸೈನ್ಯ ಮತ್ತು ವಾಯುದಳದ ನೆಲೆಯ ಪರಿಸರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನವಾಗುತ್ತಿರುವಾಗ ಈಗ ಬಿಹಾರದ ನೇಪಾಳದ ಗಡಿಯಲ್ಲಿಯೂ ಚೀನಾದ ೮ ಡ್ರೋನ್‍ಗಳು ಪತ್ತೆಯಾಗಿವೆ. ಪೂರ್ವ ಚಂಪಾರಣ ಜಿಲ್ಲೆಯ ಗಡಿಯಲ್ಲಿ ಸಶಸ್ತ್ರ ಗಡಿ ಪಡೆಯ ಸೈನಿಕರು ಒಂದು ಚತುಶ್ಚಕ್ರ ವಾಹನದಿಂದ ೮ ಡ್ರೋನ್ ಮತ್ತು ೮ ಕ್ಯಾಮೆರಾಗಳನ್ನು ವಶ ಪಡಿಸಿಕೊಂಡಿದ್ದಾರೆ.

ಅನುಕಂಪದ ತತ್ತ್ವದ ಆಧಾರದ ಮೇಲೆ ನೌಕರಿ ನೀಡಲು ಸಂಬಂಧಪಟ್ಟ ವ್ಯಕ್ತಿ ಅಪ್ರಾಪ್ತನಾಗಿದ್ದರೆ ಆತ ದೊಡ್ಡವನಾಗುವ ತನಕ ಕಾಯುವ ಅವಶ್ಯಕತೆ ಇಲ್ಲ !

ನೌಕರರು ತೀರಿಕೊಂಡಾಗ ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ಅದೇ ಅನುಕಂಪದ ಏಕೈಕ ಆಧಾರವಾಗಿದೆ, ಎಂದು ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಒಂದು ಅರ್ಜಿಯ ಆಲಿಕೆಯನ್ನು ನಡೆಸುತ್ತಿರುವಾಗ ಈ ತೀರ್ಪನ್ನು ನೀಡಿದೆ.

ದರಭಂಗಾ ರೈಲು ನಿಲ್ದಾಣದಲ್ಲಿ ಆಗಿದ್ದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ-ಎ-ತೊಯ್ಬಾದ ಇಬ್ಬರು ಭಯೋತ್ಪಾದಕರ ಬಂಧನ

ಬಿಹಾರದ ದರಭಂಗಾ ರೈಲು ನಿಲ್ದಾಣದಲ್ಲಿ ಜೂನ್ ೧೭ ರಂದು ಪಾರ್ಸಲ್ ಬಾಂಬ್ ಸ್ಪೋಟಗೊಳಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಲಷ್ಕರ-ಎ-ತೊಯ್ಬಾದ ಇಮ್ರಾನ್ ಮಲ್ಲಿಕ್ ಮತ್ತು ಮಹಮದ್ ನಾಸೀರ್ ಈ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ.

ಕೊಲ್ಕತ್ತಾದಲ್ಲಿ ಮತಾಂಧರಿಂದ ಮಾರಕಾಸ್ತ್ರಗಳಿಂದ ಹಿಂದೂ ಮಾಲಿಕ ಮತ್ತು ಆತನ ಚಾಲಕನ ಮೇಲೆ ದಾಳಿ !

ಮೊಲ್ಲಾನು ಬಟ್ಟೆಯನ್ನು ತಯಾರಿಸುವ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಾಲಿಕ ತುಹಿನ್ ಕುಮಾರ್ ಡೆಯು ಕಡಿಮೆ ಸಂಬಳ ನೀಡಿರುವ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡು ಆತ ಡೆ ಮತ್ತು ಚಾಲಕ ಶಾಶ್ವತ ಚಕ್ರವರ್ತಿಯ ಮೇಲೆ ಮಾರಕಾಸ್ತ್ರಗಳಿಂದ ಆಕ್ರಮಣ ಮಾಡಿದನು. ಈ ಹಲ್ಲೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ ಹಾಗೂ ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಗುಜರಾತ ಪೊಲೀಸರಿಂದ ೨ ಭೂತಗಳ ವಿರುದ್ಧ ದೂರು ದಾಖಲು !

ರಾಜ್ಯದ ಪಂಚಮಹಾಲದಲ್ಲಿ ವರಸಂಗ ಬಾರಿಯಾ ಎಂಬ ವ್ಯಕ್ತಿಯು ೨ ಭೂತಗಳ ವಿರುದ್ಧ ಜಾಂಭೂಘೋದಾ ಪೊಲೀಸು ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಭೂತಗಳ ಗುಂಪೊಂದು ಅವರ ಬಳಿ ಬಂದಿತ್ತು ಮತ್ತು ಅವುಗಳಲ್ಲಿ ೨ ಭೂತಗಳು ನನ್ನನ್ನು ಕೊಲ್ಲುವುದಾಗಿ ಬೆದರಿಕೆಯನ್ನು ನೀಡಿದವು, ಎಂದು ಬಾರಿಯಾ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಟ್ವಿಟರ್ ವಿರುದ್ಧ ಅಪರಾಧ ದಾಖಲು !

ದೇಶದಾದ್ಯಂತ ಟ್ವಿಟರ್ ವಿರುದ್ಧ ಒಟ್ಟು ೪ ಅಪರಾಧಗಳನ್ನು ನೊಂದಾಯಿಸಲಾಗಿದೆ. ಅದರಲ್ಲಿ ತಪ್ಪಾದ ಭೂಪಟ ತೋರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ, ಸಾಮಾಜಿಕ ಸೌಹಾರ್ದ ಕೆಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹಾಗೂ ಸಣ್ಣ ಮಕ್ಕಳ ಸಂಬಂಧಿಸಿದಂತೆ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿರುವ ಪ್ರಕರಣದಲ್ಲಿ ದೆಹಲಿಯ ಪೊಲೀಸರ ಸೈಬರ್ ಶಾಖೆಯಲ್ಲಿ ಅಪರಾಧ ದಾಖಲಾಗಿದೆ.

ದೇವಾಲಯದ ಮೂರ್ತಿಯು ಸಣ್ಣ ಮಗುವಿನಂತೆ ಇರುವುದರಿಂದ ನ್ಯಾಯಾಲಯವೇ ಅದರ ಸಂಪತ್ತಿನ ರಕ್ಷಣೆಯನ್ನು ಮಾಡಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಯಾವ ಸಂಪತ್ತಿನ ಬಗ್ಗೆ ನಿರ್ಐಯ ನೀಡಿತೋ, ಆ ಸಂಪತ್ತನ್ನು ಬ್ರಿಟಿಷರು ೧೮೬೩ ರಲ್ಲಿ ಬಳುವಳಿ ಎಂದು ಕೆಲವು ಜನರಿಗೆ ನೀಡಿತ್ತು. ‘ಈ ಭೂಮಿಯ ಮೇಲೆ ನಮ್ಮ ಅನೇಕ ಪೀಳಿಗೆಯಿಂದ ಅಧಿಕಾರವಿದೆ’, ಎಂದು ಕುಟುಂಬದವರು ನ್ಯಾಯಾಲಯದಲ್ಲಿ ಹೇಳಿದ್ದರು. ಅದೇರೀತಿ ಈ ಭೂಮಿಯ ಬಾಡಿಗೆಯನ್ನೂ ಕೂಡಾ ದೇವಸ್ಥಾನಕ್ಕೆ ನೀಡುತ್ತಿದ್ದೆವು ಎಂದು ಹೇಳಿದ್ದರು.

ಆರೋಪಿಯ ವಿರೋಧದ ‘ಕೊಕಾ’ವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು !

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ೬ ನೇ ಆರೋಪಿ ಮೊಹನ ನಾಯಕ್ ಇವರ ಮೇಲಿನ ‘ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜ್ಡ್ ಕ್ರೈಮ್ ಆಕ್ಟ'(ಕೊಕಾ) ಅಡಿಯಲ್ಲಿನ ಅಪರಾಧವನ್ನು ರದ್ದುಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.