ಹರಿಯಾಣದಲ್ಲಿನ ಭಾಜಪ ಸರಕಾರದ ಅಭಿನಂದನಾರ್ಹ ನಿರ್ಣಯ ! ಸರಸ್ವತಿ ನದಿಯ ಮತ್ತು ಕುರುಕ್ಷೇತ್ರದ ಅಧ್ಯಾತ್ಮಿಕ ಮಹತ್ವವನ್ನು ಸಹ ವಿದ್ಯಾರ್ಥಿಗಳಿಗೆ ಕಳಿಸಬೇಕು ಎಂಬ ಅಪೇಕ್ಷೆಯೂ ಹಿಂದೂಗಳಿಗಿದೆ ! – ಸಂಪಾದಕರು
ಚಂಡಿಗಢ – ಹರಿಯಾಣದಲ್ಲಿನ ಭಾಜಪ ಸರಕಾರವು ಪ್ರಾಚೀನ ಸರಸ್ವತಿ ನದಿಯ ಬಗ್ಗೆ ಮಾಹಿತಿ ಶಾಲೆಯ ಪಠ್ಯಕ್ರಮದಲ್ಲಿ ಸೇರಿಸುವ ನಿರ್ಣಯ ತೆಗೆದುಕೊಂಡಿದೆ. 6 ರಿಂದ 10ನೇ ತರಗತಿಯ ಮಕ್ಕಳಿಗಾಗಿ ಈ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ. ‘ಮಕ್ಕಳಿಗೆ ಸರಸ್ವತಿ ನದಿಯ ಮಾಹಿತಿಯಿರಬೇಕು’ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಇದಕ್ಕಾಗಿ ಸರಕಾರದ ‘ಸರಸ್ವತಿ ಭಾರತ ವಿಕಾಸ ಮಂಡಳ’ವು ಏಕ ಸದಸ್ಯನ ಪಠ್ಯಕ್ರಮ ಮಂಡಳಿಯನ್ನು ನೇಮಿಸಿದ್ದು ಅದರಲ್ಲಿ ಕುರುಕ್ಷೇತ್ರ ವಿದ್ಯಾಪೀಠದ ಡಾ. ಅಂಬೇಡ್ಕರ ಅಭ್ಯಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೀತಮ ಸಿಂಹರವರು ಪ್ರಮುಖರಾಗಿರುವರು. ಈ ಹಿಂದೆ ಹರಿಯಾಣ ಸರಕಾರವು ಸರಸ್ವತಿ ನದಿಯ ಉತ್ಥಾನಕ್ಕಾಗಿ 11 ಯೋಜನೆಗಳನ್ನು ನಡೆಸಿತ್ತು.