ಈ ವರ್ಷ 61 ಭಯೋತ್ಪಾದಕರ ಹತ್ಯೆ!
ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದಲ್ಲಿ ಸದ್ಯಕ್ಕೆ ಸುಮಾರು 119 ಜಿಹಾದಿ ಭಯೋತ್ಪಾದಕರಿದ್ದಾರೆ. ಈ ಪೈಕಿ 79 ಭಯೋತ್ಪಾದಕರು ಕಾಶ್ಮೀರ ಪ್ರದೇಶದಲ್ಲಿದ್ದರೆ 40 ಭಯೋತ್ಪಾದಕರು ಜಮ್ಮು ಪ್ರದೇಶದಲ್ಲಿ ನುಸುಳಿದ್ದಾರೆ. 119 ಭಯೋತ್ಪಾದಕರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಭಯೋತ್ಪಾದಕರಿದ್ದಾರೆ. ಈ ಪೈಕಿ 95 ಭಯೋತ್ಪಾದಕರು ಪಾಕಿಸ್ತಾನದವರಿದ್ದಾರೆ. ಕಾಶ್ಮೀರದಲ್ಲಿ 61 ಪಾಕಿಸ್ತಾನಿ ಭಯೋತ್ಪಾದಕರಿದ್ದಾರೆ. ಜಮ್ಮುವಿನಲ್ಲಿ 34 ಪಾಕಿಸ್ತಾನಿ ಭಯೋತ್ಪಾದಕರಿದ್ದಾರೆ. ಇದಲ್ಲದೇ ಕಾಶ್ಮೀರದಲ್ಲಿ 18 ಸ್ಥಳೀಯ ಭಯೋತ್ಪಾದಕರು ಮತ್ತು ಜಮ್ಮುವಿನಲ್ಲಿ 6 ಸ್ಥಳೀಯ ಭಯೋತ್ಪಾದಕರಿದ್ದಾರೆ. ಈ ವರ್ಷ ಇಲ್ಲಿಯವರೆಗೆ 61 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಪಾಕಿಸ್ತಾನವು ಬಡ ಮತ್ತು ಅನಕ್ಷರಸ್ಥ ಯುವಕರನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತದೆ. ಪಾಕಿಸ್ತಾನದ ಅಧಿಕಾರಿಗಳು ಮತ್ತು ಗುಪ್ತಚರ ಸಂಸ್ಥೆಗಳು ನಿರುದ್ಯೋಗಿ ಮತ್ತು ಅನಕ್ಷರಸ್ಥ ಮಕ್ಕಳನ್ನು ಭಾರತಕ್ಕೆ ಕಳುಹಿಸಿ, ಅವರನ್ನು ಭಯೋತ್ಪಾದಕರನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿವೆ. ಆಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡಲು ಪ್ರಚೋದಿಸುತಲಾಗುತ್ತದೆ. ಪಾಕಿಸ್ತಾನವು ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಭಯೋತ್ಪಾದಕ ತರಬೇತಿ ನೀಡಿ ಭಾರತಕ್ಕೆ ಅಕ್ರಮವಾಗಿ ಕಳುಹಿಸುತ್ತದೆ. ಇಂತಹ ಅನಕ್ಷರಸ್ಥ ಮಕ್ಕಳಿಗೆ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿಗಳ ಗೌರವಧನ ನೀಡಲಾಗುತ್ತದೆ.
Currently, there are around 119 jihadi terrorists in Jammu and Kashmir. 🚨 – Intelligence sources
This year, 61 terrorists have been killed.
👉Even if the Indian security forces kill all of these, others are ready to take their place and carry out actions to ensure that this… pic.twitter.com/pjdi8AzE6Y
— Sanatan Prabhat (@SanatanPrabhat) November 14, 2024