ಬಾಂಗ್ಲಾದೇಶದ ಅಟಾರ್ನಿ ಜನರಲ್ ಮಹಮ್ಮದ್ ಅಸದುಝಮಾನ್ ಅವರ ಆಗ್ರಹ
(ಅಟಾರ್ನಿ ಜನರಲ್ ಎಂದರೆ ಹಿರಿಯ ನ್ಯಾಯವಾದಿ, ಎಂದರೆ ಸರಕಾರದ ಮುಖ್ಯ ಕಾನೂನು ಸಲಹೆಗಾರ)
ಢಾಕಾ (ಬಾಂಗ್ಲಾದೇಶ್) – ಬಾಂಗ್ಲಾದೇಶದ ಅಟಾರ್ನಿ ಜನರಲ್ ಮಹಮ್ಮದ್ ಅಸದುಝಮಾನ್ ಅವರು ಅಲ್ಲಿನ ಸಂವಿಧಾನದಿಂದ ‘ಜಾತ್ಯಾತೀತ’ ಶಬ್ದವನ್ನು ತೆಗೆದು ಹಾಕಲು ಆಗ್ರಹಿಸಿದ್ದಾರೆ. ೧೫ನೇ ಸಂವಿಧಾನಿಕ ತಿದ್ದುಪಡಿಯ ಸಿಂಧೂತ್ವದ ಬಗ್ಗೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಮಯದಲ್ಲಿ ಅಸದುಝಮಾನ್ ಅವರು ವಾದ ಮಾಡುವಾಗ ಆಗ್ರಹಿಸಿದರು. ‘ಅಧಿಕಾರದ ದುರುಪಯೋಗ ಆಗಬಾರದೆಂದು ದೇಶದ ಸಂವಿಧಾನ ತಿದ್ದುಪಡಿಯಲ್ಲಿ ಪ್ರಜಾಪ್ರಭುತ್ವ ಇರುವುದು ಕೂಡ ಆವಶ್ಯಕವಾಗುತ್ತದೆ ಎಂದು ಕೂಡ ಅವರು ಹೇಳಿದರು.
ಅಸದುಝಮಾನ್ ಅವರು ವಾದ ಮಾಡುವಾಗ, ನಮ್ಮ ದೇಶದಲ್ಲಿ ಶೇಕಡ ೯೦ ರಷ್ಟು ಜನಸಂಖ್ಯೆ ಮುಸಲ್ಮಾನರದ್ದಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಂವಿಧಾನದಿಂದ ‘ಜಾತ್ಯಾತೀತ ‘ ಶಬ್ದ ತೆಗೆದು ಹಾಕಬೇಕು. ಹಿಂದೆ ಅಲ್ಲಾನ ಬಗ್ಗೆ ವಿಶ್ವಾಸವಿತ್ತು. ಅದು ಹಿಂದಿನಂತೆಯೇ ಇರಬೇಕು, ಎಂಬುದು ನನ್ನ ಇಚ್ಛೆಯಾಗಿದೆ. ಕಲಂ ೨ ಅ ಪ್ರಕಾರ, ದೇಶವು ಎಲ್ಲಾ ಧರ್ಮದ ಆಚರಣೆಯಲ್ಲಿ ಸಮಾನ ಅಧಿಕಾರ ಮತ್ತು ಸಮಾನತೆ ನಿಶ್ಚಿತಗೊಳಿಸುವುದು, ಆದರೆ ಕಲಂ ೯ ‘ ಬಂಗಾಳಿ ರಾಷ್ಟ್ರವಾದ’ದ ಬಗ್ಗೆ ಹೇಳುತ್ತದೆ, ಇದು ವಿರೋಧಾತ್ಮಕವಾಗಿದೆ.
ಸಂವಿಧಾನ ತಿದ್ದುಪಡಿಯಿಂದ ಪ್ರಜಾಪ್ರಭುತ್ವದ ಪ್ರತಿಬಿಂಬ ಕಾಣಬೇಕು ಮತ್ತು ಅಧಿಕಾರದ ದುರುಪಯೋಗಕ್ಕೆ ಪ್ರೋತ್ಸಾಹ ನೀಡುವುದನ್ನು ತಪ್ಪಿಸಬೇಕು. ಕಲಂ ೭ ಅ ಮತ್ತು ೭ ಬ ಪ್ರಜಾಪ್ರಭುತ್ವವನ್ನು ನಾಶಗೊಳಿಸಬಹುದು. ಇಂತಹ ಯಾವುದೇ ತಿದ್ದುಪಡಿ ಅಥವಾ ಬದಲಾವಣೆಯನ್ನು ಈ ಕಲಂ ನಿಷೇಧಿಸುತ್ತದೆ. ಇಂತಹ ಕಾನೂನನ್ನು ಬದಲಾಯಿಸಬೇಕು ಯಾಕೆಂದರೆ ಅದು ರಾಜಕೀಯ ಶಕ್ತಿ ಸುದೃಢಗೊಳಿಸಿ ಪ್ರಜಾಪ್ರಭುತ್ವವನ್ನು ಅಶಕ್ತಗೊಳಿಸುತ್ತದೆ ಎಂದರು.
‘ ರಾಷ್ಟ್ರಪಿತ’ ಶಬ್ದ ದೇಶದಲ್ಲಿ ಬಿರುಕು ಮೂಡಿಸುತ್ತದೆ !
ಶೇಖ್ ಮುಜೀಬುರ್ ರಹಮಾನ್ ಅವರಿಗೆ ‘ರಾಷ್ಟ್ರಪಿತ’ ಎಂದು ಬಿರುದು ನೀಡುವುದು, ಇಂತಹ ಅನೇಕ ಸುಧಾರಣೆಯು ದೇಶದಲ್ಲಿ ಬಿರುಕು ಮೂಡಿಸುತ್ತದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರುತ್ತದೆ. ಶೇಖ್ ಮುಜೀಬುರ್ ಅವರ ಕೊಡುಗೆಗೆ ಗೌರವ ನೀಡುವುದು ಯೋಗ್ಯವಾಗಿದೆ; ಆದರೆ ಕಾನೂನಿನ ಮೂಲಕ ಅದನ್ನು ಜಾರಿಗೊಳಿಸಿದರೆ ಬಿರುಕು ನಿರ್ಮಾಣವಾಗುತ್ತದೆ, ಎಂದು ಅಟಾರ್ನಿ ಜನರಲ್ ಮಹಮ್ಮದ್ ಅಸದುಝಮಾನ್ ಅವರು ತಮ್ಮ ವಾದದ ವೇಳೆ ಹೇಳಿದರು.
ಸಂಪಾದಕೀಯ ನಿಲುವು
|