‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’, ಮೂರು ದಿನಗಳ ಹಿಂದುವಿರೋಧಿ ಅಂತರ್‌ರಾಷ್ಟ್ರೀಯ ಆನ್‌ಲೈನ್ ಪರಿಷದ್
ಭಾರತದಲ್ಲಿ ಹಿಂದೂ ರಾಷ್ಟ್ರವು ಸ್ಥಾಪನೆಯಾದ ನಂತರ ಜಗತ್ತಿನಾದ್ಯಂತದ ಹಿಂದೂದ್ವೇಷಿ ವೈಚಾರಿಕ ಭಯೋತ್ಪಾದಕರ ಅಂಗಡಿಗಳು ಮುಚ್ಚಲಿವೆ, ಎಂದು ಅವರಿಗೆ ತಿಳಿದಿರುವುದರಿಂದ ಅವರಿಗೆ ಹಿಂದೂ ರಾಷ್ಟ್ರವು ಬೇಡವಾಗಿದೆ. ಆದುದರಿಂದ ಜಾಗತಿಕ ಸ್ತರದಲ್ಲಿ ಹಿಂದೂವಿರೋಧಿ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಈ ವೈಚಾರಿಕ ಭಯೋತ್ಪಾದನೆಗೆ ತೇಜಸ್ವಿ ಹಿಂದುತ್ವನಿಷ್ಠರು ವಿಚಾರಗಳ ಮಾಧ್ಯಮದಿಂದ ಪ್ರತ್ಯುತ್ತರ ನೀಡುವುದು, ಹಿಂದೂಗಳ ಧರ್ಮಕರ್ತವ್ಯವೇ ಆಗಿದೆ !
ಮುಂಬಯಿ – ‘ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಿಂದುತ್ವದ ಆಚೆಗೆ ಹೋಗಿ ಅಭಿವೃದ್ಧಿ ಮಾಡಬೇಕು’, ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಅರ್ಚಕರು ಶಕ್ತಶಾಲಿ ಭೂಮಾಲೀಕರು ಇದ್ದಾರೆ’, ‘ಅರ್ಚಕರಿಗೆ ಬ್ರಾಹ್ಮಣವಾದದ ಪುನರ್‌ಸ್ಥಾಪನೆ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಿದ್ದು ಅದು ಎಲ್ಲಕ್ಕಿಂತಲೂ ಅಪಾಯಕಾರಿಯಾಗಿದೆ’, ಎಂಬ ಸ್ಪಷ್ಟವಾದ ಸುಳ್ಳು, ನಿರಾಧಾರ ಮತ್ತು ಸಾಕ್ಷಿ ಇಲ್ಲದ ಅನೇಕ ಹಿಂದೂವಿರೋಧಿ ಆಘಾತಕಾರಿ ಹೇಳಿಕೆಗಳನ್ನು ‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಹಿಂದುತ್ವದ ಜಾಗತಿಕ ಸ್ತರದಲ್ಲಿನ ಉಚ್ಚಾಟನೆ) ಈ ಆನ್‌ಲೈನ್ ಪರಿಷದ್‌ನಲ್ಲಿ ನೀಡಿ, ಪಾಲ್ಗೊಂಡ ವಕ್ತಾರರು ‘ಹಿಂದೂದ್ವೇಷವು ಅವರ ನರನಾಡಿಗಳಲ್ಲಿ ಎಷ್ಟು ತುಂಬಿದೆ ?’ ಎಂಬುದನ್ನು ತೋರ್ಪಡಿಸಿದರು. ೧೦ ರಿಂದ ೧೨ ಸೆಪ್ಟೆಂಬರ್ ಈ ಕಾಲಾವಧಿಯಲ್ಲಿ ಅಂತರ್‌ರಾಷ್ಟ್ರೀಯ ಸ್ತರದಲ್ಲಿ ಈ ಆನ್‌ಲೈನ್ ಪರಿಷದ್‌ನ ಆಯೋಜನೆಯನ್ನು ಮಾಡಲಾಗಿದೆ. ಈ ಪರಿಷದ್‌ನ ಮೊದಲ ದಿನ ‘ಜಾಗತಿಕ ಹಿಂದುತ್ವವೆಂದರೇನು ?’ ‘ಹಿಂದುತ್ವದ ರಾಜಕೀಯ ಅರ್ಥಕಾರಣ’, ಹಾಗೆಯೇ ‘ಜಾತಿ ಮತ್ತು ಹಿಂದುತ್ವ’ ಈ ಮೂರು ವಿಷಯಗಳ ಭಾಗಗಳಲ್ಲಿ ವಿವಿಧ ವಕ್ತಾರರು ಹಿಂದೂದ್ವೇಷದಿಂದ ಕೂಡಿದ ತಮ್ಮ ವಿಚಾರಗಳನ್ನು ಮಂಡಿಸಿದರು.
ಈ ಪರಿಷದ್‌ನ ಆಯೋಜಕರ ದೃಷ್ಟಿಯಿಂದ ‘ಹಿಂದುತ್ವದ ಜಾಗತಿಕಕರಣವನ್ನು ವಿಧ್ವಂಸ ಮಾಡುವ’ ಉದ್ದೇಶದಿಂದ ಈ ತಥಾಕಥಿತ ವಿಚಾರವಂತರನ್ನು ಒಗ್ಗೂಡಿಸಲಾಗಿದೆ. ‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷದ್‌ನ ಜಾಲತಾಣದಲ್ಲಿ ನೀಡಲಾದ ಮಾಹಿತಿಗನುಸಾರ ‘ಹಿಂದುಳಿದವರು (ದಲಿತರು), ಆದಿವಾಸಿಗಳು, ಹಿಂದೂಯೇತರರು, ಮುಸಲ್ಮಾನರು ಮತ್ತು ಸ್ತ್ರೀಯರ ಬಗ್ಗೆ ಹಿಂದುತ್ವದ ಬೆಂಬಲಿಗರು ಕಠೋರ (ಪ್ರಭುತ್ವ ಬೀರುವ) ನಿಲುವನ್ನು ಇಟ್ಟುಕೊಳ್ಳುತ್ತಾರೆ. ಹಿಂದುತ್ವದ ಮೇಲೆ ವಿಶ್ವಾಸವಿರುವ ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಕಟಿಬದ್ಧರಾಗಿದ್ದು ಅವರು ಸಂವಿಧಾನದಲ್ಲಿ ಮಾರ್ಪಾಡು ಮಾಡಿ ‘ಜಾತ್ಯತೀತ’ ಮತ್ತು ಪ್ರಜಾಪ್ರಭುತ್ವ’ದ ಬೆಸುಗೆಯನ್ನು ಕಡಿದುಹಾಕಲು ಪ್ರಯತ್ನಿಸುತ್ತಿದೆ’, ಎಂದಿದೆ. ಇದನ್ನು ವಿರೋಧಿಸಲು ತಥಾಕಥಿತ ವಿಚಾರವಂತರಿಗೆ ಜಾಗತಿಕ ಹಿಂದುತ್ವದ ಬಗೆಗಿನ ರಾಜಕೀಯ, ಆರ್ಥಿಕ, ಕೋಮುವಾದಿ, ಲೈಂಗಿಕ ತಾರತಮ್ಯ, ವಿಜ್ಞಾನ ಮತ್ತು ಆರೋಗ್ಯ ಮುಂತಾದ ಸ್ತರಗಳಲ್ಲಿ ತಮ್ಮ ಮಾತನ್ನು ಮಂಡಿಸಲು ಒಟ್ಟಿಗೆ ಕರೆಯಲಾಗಿದೆ.
ಕೆಲವು ಭಾಷಣಕಾರರು ಮಂಡಿಸಿದ ಹಾಸ್ಯಾಸ್ಪದ ಮತ್ತು ನಿರಾಧಾರ ಹಿಂದೂವಿರೋಧಿ ಹೇಳಿಕೆಗಳು !
೧. ಹಿಂದೂಗಳ ‘ವಿಶ್ವಗುರು’ ಪರಿಕಲ್ಪನೆಯು ಮೇಲ್ವರ್ಗದವರ ‘ಸರ್ವೋಚ್ಚ’ ಇರುವ ಆಸೆಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ ! – ಕ್ರಿಸ್ಟೋಫ್ ಜೆಫರ್‌ಲಾಟ್, ರಾಜಕೀಯ ವಿಶ್ಲೇಷಕರು, ಫ್ರಾನ್ಸ್
೨. ಮೇಲ್ವರ್ಗದ ಸ್ತ್ರೀವಾದಿ(ಫೆಮಿನಿಸ್ಟ) ಮತ್ತು ಬಹುಜನ ಸ್ತ್ರೀವಾದಿ ನಡುವೆ ವ್ಯತ್ಯಾಸವಿದೆ. ಮೇಲ್ವರ್ಗದ ಸ್ತ್ರೀವಾದಿಗಳು ಈ ಜಾತಿಯನ್ನು ಹಿಡಿದಿರುತ್ತಾರೆ. ಮೇಲ್ವರ್ಗದ ಸ್ತ್ರೀಯರು ಜಾತಿದ್ರೋಹಿಗಳಾಗಬೇಕು. ಶಾಹಿನ್‌ಬಾಗ್‌ನಲ್ಲಿ ಆಂದೋಲನ ಮಾಡುತ್ತಿದ್ದ ಮುಸ್ಲಿಂ ಮಹಿಳೆಯರು ದಮನಕ್ಕೊಳಗಾದ ಸಮುದಾಯದ ನಿಜವಾದ ರಕ್ಷಕರಾಗಿದ್ದರು. – ಮೀನಾ ಕಂಡಾಸಾಮಿ, ಲೇಖಕಿ, ತಮಿಳುನಾಡು
‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನಲ್ಲಿನ ಹಿಂದುದ್ವೇಷಿ ಹೇಳಿಕೆಗಳು !
‘ಜಾಗತಿಕ ಹಿಂದುತ್ವ ಎಂದರೇನು ? ’ ಈ ಮೊದಲನೇ ಭಾಗದಲ್ಲಿ ಭಾಗವಹಿಸಿದ ವಕ್ತಾರರು !
ಪ್ರಾ. ಜ್ಞಾನಪ್ರಕಾಶ (ಜೆ.ಎನ್.ಯೂ.ನ ಮಾಜಿ ವಿದ್ಯಾರ್ಥಿ ಹಾಗೂ ಅಮೇರಿಕಾದ ನ್ಯೂ ಜರ್ಸೀಯಲ್ಲಿನ ಪ್ರಿನ್ಸ್ಟನ ವಿದ್ಯಾಪೀಠದ ಇತಿಹಾಸದ ಪ್ರಾಧ್ಯಾಪಕ), ಥಾಮಸ ಹಸನ (ಅಮೇರಿಕಾದ ಸ್ಟನಫರ್ಡ ವಿದ್ಯಾಪೀಠದ ಪ್ರಾಧ್ಯಾಪಕ), ಖ್ರಿಸ್ಟೋಫ ಜಫರಲಾಟ (ಫ್ರೆಂಚ ರಾಜಕೀಯ ವಿಶ್ಲೇಷಕ ಮತ್ತು ಭಾರತ-ಪಾಕ್‌ನ ಸಂಬಂಧದ ಅಭ್ಯಾಸಕರು), ಮೀನಾ ಕಂಡಾಸಾಮೀ (ತಮಿಳುನಾಡಿನ ಲೇಖಕಿ ಮತ್ತು ಕಾರ್ಯಕರ್ತೆ) ಮತ್ತು ಆನಂದ ಪಟವರ್ಧನ (ಸಾಮಾಜಿಕ ವಿಷಯದ ಕಿರುಚಿತ್ರ ನಿರ್ಮಾಪಕ)
‘ಹಿಂದುತ್ವದ ರಾಜಕೀಯ ಆರ್ಥಿಕತೆ’ ಈ ಎರಡನೇ ಭಾಗದಲ್ಲಿ ಭಾಗವಹಿಸಿದ ವಕ್ತಾರರು !
ಶ್ರೀಮತಿ ರಾವ್ (ವಾರಸೇಸ್ಟರ್ (ಮ್ಯಾಸಚೂಸೆಟ್ಸ್, ಅಮೇರಿಕಾ) ಇಲ್ಲಿಯ ಅಸಂಪ್ಷನ್ ಕಾಲೇಜ್‌ನ ಪ್ರಾಧ್ಯಾಪಕಿ), ಜೇನ್ಸ್ ಲಿರ್ಚೆ (ಕಾರ್ಮಿಕ ಪ್ರಾಧ್ಯಾಪಕ, ಲಂಡನ್ ವಿಶ್ವವಿದ್ಯಾಲಯ), ಪ್ರೀತಮ್ ಸಿಂಗ (‘ಆಕ್ಸ್‌ಫರ್ಡ್ ಬುಕ್ ಬಿಜನೆಸ್ ಸ್ಕೂಲ್’ನ ಪ್ರಾಧ್ಯಾಪಕಿ), ವಾಮಸೀ ವಾಕುಲಭಾತನಮ್ (‘ಯುನಿವರ್ಸಿಟಿ ಆಫ್ ಮೆಸೆನ್ಚುಸೆಟಲ್ಸ್’, ಅಮೇರಿಕಾದ ಅರ್ಥಶಾಸ್ತ್ರದ ಪ್ರಾಧ್ಯಾಪಕ)
‘ಜಾತಿ ಮತ್ತು ಹಿಂದುತ್ವ’ ಈ ಮೂರನೇ ಭಾಗದಲ್ಲಿ ಭಾಗವಹಿಸಿದ ವಕ್ತಾರರು !
ರೂಪಾ ವಿಶ್ವನಾಥನ್ (ಜರ್ಮನಿಯ ಗಟಿಂಗನ್ ವಿಶ್ವವಿದ್ಯಾಲಯದ ‘ಆಧುನಿಕ ಭಾರತೀಯ ಅಧ್ಯಯನ’ ಈ ವಿಷಯದ ಪ್ರಾಧ್ಯಾಪಕಿ), ಗಜೇಂದ್ರ ಅಯ್ಯಥುರಾಯಿ (ಜರ್ಮನಿಯ ‘ಮಾರ್ಡನ್ ಇಂಡಿಯನ್ ಸ್ಟಡೀಸ್’ ಈ ವಿಷಯದ ಸಂಶೋಧಕರು), ಮೀನಾ ಧಾಂಡಾ (ದಲಿತ ಕಾರ್ಯಕರ್ತೆ ಮತ್ತು ಇಂಗ್ಲೆಂಡ್‌ನ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ)
ಇದಕ್ಕೆ ೪೦ ವಿಶ್ವವಿದ್ಯಾಲಯಗಳ ಬೆಂಬಲವಿದೆ ಎಂಬ ವಾದವು ಸುಳ್ಳು ! ಈ ಪರಿಷದ್‌ಗೆ ೪೦ ವಿಶ್ವವಿದ್ಯಾಲಯಗಳ ಬೆಂಬಲವನ್ನು ಹೊಂದಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ, ಆ ವಿಶ್ವವಿದ್ಯಾನಿಲಯದ ಸಂಪೂರ್ಣ ವಿಭಾಗವಲ್ಲ, ಬದಲಾಗಿ ಓರ್ವ ಶಿಕ್ಷಕರು ಮಾತ್ರ ಭಾಗವಹಿಸಿದ್ದು ಗಮನಕ್ಕೆ ಬಂದಿತು. ಆಯೋಜಕರು ಇಡೀ ವಿಶ್ವವಿದ್ಯಾನಿಲಯವು ಭಾಗವಹಿಸಿದೆ ಎಂದು ಮಾಡಲಾಗಿದ್ದ ದಾವೆ ಅಂದರೆ ಜನರ ದಾರಿ ತಪ್ಪಿರುವುದು ಗಮನಕ್ಕೆ ಬಂದಿತು. |
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಿರುದ್ಧ ನಿರಾಧಾರ ಆರೋಪ ಮಾಡುವ ವೀಡಿಯೊ ಪ್ರಸಾರ !
ಈ ಕಾರ್ಯಕ್ರಮದಲ್ಲಿ, ಕಿರುಚಿತ್ರ ನಿರ್ಮಾಪಕ ಮತ್ತು ಸಾಮ್ಯವಾದಿ ಆನಂದ್ ಪಟವರ್ಧನ್ ಅವರು ತಮ್ಮ ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ‘ವಿವೇಕ್’ ಹೆಸರಿನ ಕೆಲವು ನಿಮಿಷಗಳ ವಿಡಿಯೋದ ಎರಡು ಭಾಗಗಳನ್ನು ತೋರಿಸಿದರು. ಮೊದಲ ಭಾಗದಲ್ಲಿ ಪ್ರಗತಿಪರರ ಹತ್ಯೆ, ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಮಾಜಿ ಮುಖ್ಯಸ್ಥ ಡಾ. ನರೇಂದ್ರ ದಾಭೋಲ್ಕರ್ ಅವರ ಧರ್ಮದ ಬಗ್ಗೆ ವಿಷಕಾರಿದ್ದು ಇತ್ಯಾದಿಗಳ ಬಗ್ಗೆ ತೋರಿಸಲಾಯಿತು, ಎರಡನೇ ಭಾಗದಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ, ಇದರೊಂದಿಗೆ ಇತರ ಸಂಪ್ರದಾಯ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಆರಂಭಿಸಿದ ಸ್ವಸಂರಕ್ಷಣೆಯ ಪ್ರಾತ್ಯಕ್ಷಿಕೆಯಿರುವ ಮೆರವಣಿಗೆಯ ಛಾಯಾಚಿತ್ರಗಳನ್ನು ತೋರಿಸಲಾಯಿತು. |