ದೇಶದ ರಾಜಧಾನಿಯು ಯಾವ ಜಿಲ್ಲೆಯಲ್ಲಿ ಇದೆಯೋ, ಅಲ್ಲಿಯ ಊರುಗಳಿಗೆ ಇಸ್ಲಾಮಿ ಆಕ್ರಮಣಕಾರರ ಹೆಸರುಗಳು ಇರುವುದು, ಇದು ಸ್ವಾತಂತ್ರ್ಯದ ನಂತರ ಇಲ್ಲಿವರೆಗಿನ ಎಲ್ಲಾ ಪಕ್ಷದ ಶಾಸಕರಿಗೆ ನಾಚಿಕೆಯ ಸಂಗತಿಯಾಗಿದೆ ! ಇಸ್ಲಾಮಿ ಆಕ್ರಮಣಕಾರರ ಹೆಸರುಗಳನ್ನು ಊರುಗಳು, ನಗರಗಳು ಅಥವಾ ರಸ್ತೆಗಳಿಗೆ ಇಡುವುದು, ಇದು ಗುಲಾಮಗಿರಿಯ ಪ್ರತೀಕವಾಗಿದೆ. ಅದನ್ನು ತೆಗೆದುಹಾಕಲು ಕೇಂದ್ರ ಸರಕಾರವು ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು, ಎಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ.- ಸಂಪಾದಕರು
ದೆಹಲಿ – ಜಿಲ್ಲೆಯಲ್ಲಿ ಹುಮಾಯೂ, ತೈಮೂರ್, ಔರಂಗಜೇಬ್ ಅಥವಾ ಮಹಮ್ಮದ್ ಘೋರಿ ಇಂತಹ ಆಕ್ರಮಣಕಾರರ ಹೆಸರುಗಳಿರುವ ಊರುಗಳ ಮೂಲ ಹೆಸರು ಬೇರೆ ಆಗಿತ್ತು ಎಂಬ ವಿಷಯವು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅನೇಕ ಐತಿಹಾಸಿಕ ಕಾಗದಪತ್ರಗಳಲ್ಲಿ ಸಾಕ್ಷಿಗಳು ಕಂಡುಬಂದಿದೆ. ಇದರಲ್ಲಿ ಈ ಊರುಗಳ ಮೂಲ ಹೆಸರು ಹಿಂದೂ ದೇವತೆ ಅಥವಾ ಮಹಾಪುರುಷರ ಹೆಸರಲ್ಲಿ ಇರುವುದು ಬೆಳಕಿಗೆ ಬಂದಿದೆ.
दिल्ली के 365 गाँवों के नाम आक्रांताओं पर, पहले हिन्दू देवी-देवताओं पर थे: ऐतिहासिक साक्ष्य पर नाम वापसी प्रक्रिया शुरू#Delhi https://t.co/ZJlEpSfwfA
— ऑपइंडिया (@OpIndia_in) September 5, 2021
1. ಪ್ರಸ್ತುತ ‘ಮಹಮ್ಮದಪುರ’ ಊರಿನ ಹೆಸರು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಊರಿನ ಪ್ರಾಚೀನ ಹೆಸರು ‘ಮಾಧವಪುರ’ ಎಂದಿತ್ತು. ಇತಿಹಾಸಕಾರ ಮನೀಷಕುಮಾರ ಗುಪ್ತ ಇವರು, ಪೃಥ್ವಿರಾಜ ಚೌಹಾನ ಇವರನ್ನು ಸೋಲಿಸಿದ ನಂತರ ಮಹಮ್ಮದ ಘೋರಿ ಇವನು ಉತ್ತರ ಭಾರತದ ಆಡಳಿತವನ್ನು ತನ್ನ ಗುಲಾಮ ಕುತುಬುದ್ದಿನ್ ಐಬಕ್ ಇವನಿಗೆ ಒಪ್ಪಿಸಿ ಅವನು ಅಲ್ಲಿಂದ ಹೊರಟುಹೋದನು. ಅದರ ನಂತರ ಘೋರಿಯ ಆಸೆಯಂತೆ ಕುತುಬುದ್ದಿನ್ ಐಬಕ್ ಇವನು ಭಾರತದಲ್ಲಿ ಇಸ್ಲಾಂ ಪ್ರಚಾರ ಮಾಡುವುದಕ್ಕಾಗಿ ಅಲ್ಲಿಯ ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಪ್ರಾರಂಭಿಸಿದನು. ಅದರಂತೆ ‘ಮಾಧವಪುರ’ ಊರಿನ ಹೆಸರು ಬದಲಾಯಿಸಿ ಒಡೆಯನ ಹೆಸರು ಅಂದರೆ ಮಹಮ್ಮದ್ ಘೋರಿ ಇವನ ಹೆಸರಿನಲ್ಲಿ `ಮಹಮ್ಮದ್‍ಪುರ’ ಎಂದು ಮಾಡಿದ್ದನು, ಇದು ಈವರೆಗೂ ಪ್ರಚಲಿತವಾಗಿದೆ.
2. ದೆಹಲಿಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಡಾ. ಧರ್ಮವೀರ ಶರ್ಮ ಇವರ ಅಭಿಪ್ರಾಯ, ‘ದೆಹಲಿಯಲ್ಲಿನ ಸುಮಾರು 365 ಊರುಗಳಿಗೆ ವಿದೇಶಿ ಆಕ್ರಮಣಕಾರರ ಹೆಸರುಗಳು ಇವೆ.’ ಇಸ್ಲಾಮಿ ಆಕ್ರಮಣಕಾರರು ಇಟ್ಟಿರುವ ಮಹರೌಲಿಯ ಹೆಸರು ಮೊದಲು ‘ಮೀಹಿರಾವಾಲಿ’ ಎಂದು ಇತ್ತು. ಪ್ರಸಿದ್ಧ ಖಗೋಳ ತಜ್ಞ ಆಚಾರ್ಯ ವರಹ ಮಿಹಿರ ಇವರ ಹೆಸರಿನ ಮೇಲೆ ಇಡಲಾಗಿತ್ತು ಎಂದು ಹೇಳಿದರು.
3. ಪೌರಾಣಿಕ ಇತಿಹಾಸಕಾರ ನೀರಾ ಮಿಶ್ರ ಇವರ ಪ್ರಕಾರ, ಮೊಘಲರ ಕಾಲದಲ್ಲಿ ದೆಹಲಿಯಲ್ಲಿನ ಅನೇಕ ಊರುಗಳ ಹೆಸರು ಬದಲಾಯಿಸಲಾಯಿತು. ಹೌಜ ಖಾಸ ಮತ್ತು ಸೀರಿ ಫೋರ್ಟ್ ಈ ಭಾಗದ ಹೆಸರು ಶಾಹಪುರ ಜಟ ಎಂದಿತ್ತು ಎಂದು ಹೇಳಿದರು. ಮನೀಶ್ ಕುಮಾರ ಗುಪ್ತಾ ಇವರ ಪ್ರಕಾರ, ಮೊಘಲರ ಕಾಲದ ಪಟಪಡಗಂಜ ಎಂಬ ಹೆಸರನ್ನು ಸಾಹೇಬಗಂಜ ಎಂದು ಇಡಲಾಯಿತು. ಅದನ್ನು ಓರ್ವ ಮೊಗಲ್ ಬಾದಶಹನ ಪ್ರೇಯಸಿಯ ಹೆಸರಿನ ಆಧಾರದಲ್ಲಿ ಇಡಲಾಗಿತ್ತು.
4. ದಕ್ಷಿಣ ದೆಹಲಿಯಲ್ಲಿ ಹುಮಾಯುಪುರ ಇದು 350 ವರ್ಷಗಳ ಹಿಂದಿನದ್ದಾಗಿದೆ. ಅದು ಮೊದಲು ಹನುಮಾನ ಪುರ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಆಕ್ರಮಣಕಾರರು ತಮ್ಮ ವಿಜಯದ ಗುರುತು ಎಂದು ಊರು, ವಿಭಾಗ, ಮತ್ತು ನಗರಗಳ ಹೆಸರುಗಳನ್ನು ಬದಲಾಯಿಸುತ್ತಿದ್ದರು, ಎಂದು ಇತಿಹಾಸಕಾರರ ಹೇಳಿಕೆಯಾಗಿದೆ.