ಕಠುವಾ (ಜಮ್ಮು- ಕಾಶ್ಮೀರ) – ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಒಂದು ಪೆಟ್ರೋಲ್ ಟ್ಯಾಂಕರ್‌ನಲ್ಲಿ ಹಸುಗಳ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಈ ಪೆಟ್ರೋಲ್ ಟ್ಯಾಂಕರ್ ಜಮ್ಮು- ಕಾಶ್ಮೀರದ ನೋಂದಣಿ ಹೊಂದಿದ್ದು ನೋಡುಗರಿಗೆ ಇದು ಸಾಮಾನ್ಯ ಪೆಟ್ರೋಲ್ ಟ್ಯಾಂಕರ್ ಇರಬಹುದೆಂದು ಅನಿಸುವುದು; ಆದರೆ ಅದರಿಂದ ಅನೇಕ ಹಸುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ.
ಈ ಟ್ಯಾಂಕರ್ ಕಠುವಾಕ್ಕೆ ಬಂದಾಗ ಸ್ಥಳೀಯರಿಗೆ ಇದರ ಮಾಹಿತಿ ಸಿಕ್ಕ ಕೂಡಲೇ ಅವರು ಟ್ಯಾಂಕರ್ ನಿಲ್ಲಿಸಿದರು ಮತ್ತು ಬುಲ್ಡೋಜರ್ ಸಹಾಯದಿಂದ ಟ್ಯಾಂಕರ್ ಒಡೆದರು. ಟ್ಯಾಂಕರ್ ಒಡೆದ ಕೂಡಲೇ ಅದರಲ್ಲಿ ಹಸುಗಳ ಹಿಂಡು ಪತ್ತೆಯಾಗಿದೆ. ಅನೇಕ ಹಸುಗಳನ್ನು ಟ್ಯಾಂಕರ್ ನಲ್ಲಿ ಕಟ್ಟಿ ಹಾಕಲಾಗಿತ್ತು. ಈ ಟ್ಯಾಂಕರ್ ನಲ್ಲಿ 20 ರಿಂದ 25 ಹಸುಗಳನ್ನು ಇರಿಸಲಾಗಿತ್ತೆಂದು ಅಂದಾಜಿಸಲಾಗಿದೆ. ಈ ಘಟನೆಯ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಟ್ಯಾಂಕರ್ ಚಾಲಕನನ್ನು ಬಂಧಿಸಿ ಟ್ಯಾಂಕರ್ ಜಪ್ತಿ ಮಾಡಿದ್ದಾರೆ.
In Jammu and Kashmir, cows are being smuggled through petrol tankers.
The need has now arisen for the government to impose a death penalty on such smugglers!#GoRaksha #SaveCows
pic.twitter.com/Y3pdCkxRhH— Sanatan Prabhat (@SanatanPrabhat) November 14, 2024
ಸಂಪಾದಕೀಯ ನಿಲುವುಇಂತಹ ಕಳ್ಳಸಾಗಾಣಿಕೆದಾರರಿಗೆ ಸರಕಾರವು ಮರಣದಂಡನೆ ಶಿಕ್ಷೆ ವಿಧಿಸುವ ಅವಶ್ಯಕತೆ ಈಗ ನಿರ್ಮಾಣವಾಗಿದೆ ! |