Nobel Prize PM Narendra Modi: ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು ; ಅಮೇರಿಕೆಯ ಹೆಸರಾಂತ ಹೂಡಿಕೆದಾರ ಮಾರ್ಕ್ ಮೋಬಿಯಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೇರಿಕೆಯ ಹೆಸರಾಂತ ಹೂಡಿಕೆದಾರ ಮಾರ್ಕ್ ಮೋಬಿಯಸ್

ವಾಷಿಂಗ್ಟನ್ (ಅಮೇರಿಕಾ) – ಪ್ರಧಾನಿ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಅಮೇರಿಕೆಯ ಹೆಸರಾಂತ ಹೂಡಿಕೆದಾರ ಮಾರ್ಕ್ ಮೊಬಿಯಸ್ ಅವರು ಹೇಳಿದ್ದಾರೆ.

88 ವರ್ಷದ ಮೊಬಿಯಸ್ ಮಾತನಾಡಿ, ಅಶಾಂತಿಯುಕ್ತ ಈ ಜಗತ್ತಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿ ಮಧ್ಯಪೂರ್ವ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿಯನ್ನು ಸ್ಥಾಪಿಸಬಲ್ಲರು. ಮೋದಿಯವರು ಒಬ್ಬ ಮಹಾನ್ ನಾಯಕರಾಗಿದ್ದಾರೆ ಮತ್ತು ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಮಹತ್ವವು ವೇಗವಾಗಿ ಹೆಚ್ಚಾಗಲಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತನಾಡುವ ಸಾಮರ್ಥ್ಯ ಅವರಲ್ಲಿದೆ. ಮುಂಬರುವ ಕಾಲದಲ್ಲಿ ಮೋದಿ ಅವರು ವಿಶ್ವದ ಒಬ್ಬ ಪ್ರಮುಖ ಶಾಂತಿದೂತರಾಗಬಲ್ಲರು ಎಂದವರು ಹೇಳಿದರು.

ಮೊಬಿಯಸ್ ತಮ್ಮ ಮಾತನ್ನು ಮುಂದುವರಿಸಿ, ಭಾರತವು ಎಲ್ಲಾ ದೇಶಗಳೊಂದಿಗೆ ತಟಸ್ಥವಾಗಿ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಈ ಕ್ಷಮತೆಯು ಜಾಗತಿಕ ಮಟ್ಟದಲ್ಲಿ ಶಾಂತಿಗಾಗಿ ಮಧ್ಯವರ್ತಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಪ್ರಧಾನಿ ಮೋದಿ ಇಂದು ವಿಶ್ವದ ಪ್ರಮುಖ ಮಧ್ಯವರ್ತಿಯಾಗಲು ಹೆಚ್ಚು ಅರ್ಹರಾಗಿದ್ದಾರೆ ಎಂದವರು ಶ್ಲಾಘಿಸಿದರು.