ಪಾಟಲಿಪುತ್ರ (ಬಿಹಾರ)ದಲ್ಲಿ ಶಿಲ್ಪಿಯಿಂದ ಕ್ರಿಕೆಟ್ ಆಡುವ ಶ್ರೀ ಗಣೇಶನ ಮೂರ್ತಿಯ ನಿರ್ಮಾಣ

ನೃತ್ಯ ಮಾಡುವ ಬಾಲ ಶ್ರೀ ಗಣೇಶನ ಮೂರ್ತಿಯನ್ನು ಕೆತ್ತಿದ್ದಕ್ಕಾಗಿ ಶಿಲ್ಪಿಗೆ ರಾಷ್ಟ್ರೀಯ ಪ್ರಶಸ್ತಿಯ ಘೋಷಣೆ !

ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಹಿಂದೂಗಳೇ ಈ ರೀತಿ ವಿಡಂಬನೆ ಮಾಡುತ್ತಾರೆ ಮತ್ತು ಅದಕ್ಕೆ ಸರಕಾರದಿಂದ ಪ್ರಶಸ್ತಿ ನೀಡಲಾಗುತ್ತಿದೆ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ ! ಕಲೆಯ ಹೆಸರಿನಲ್ಲಿ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ರೀತಿಯ ದೇವತೆಗಳನ್ನು ಮಾನವೀಕರಣಗೊಳಿಸುವುದು ಅಯೋಗ್ಯವಾಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದು ಬಿಟ್ಟರೆ ಪರ್ಯಾಯವಿಲ್ಲ ! – ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಪಾಟಲಿಪುತ್ರ (ಬಿಹಾರ) – ವಿವಿಧ ರೂಪಗಳಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ನಿರ್ಮಿಸುವ ಇಲ್ಲಿಯ ಶಿಲ್ಪಿ ಪಿಂಟು ಪ್ರಸಾದ ಇವರು ಈ ವರ್ಷದ ಗಣೇಶ ಚತುರ್ಥಿಯಂದು ಕ್ರಿಕೆಟ್ ಆಡುತ್ತಿರುವ ಗಣೇಶನ ಮೂರ್ತಿಯನ್ನು ನಿರ್ಮಿಸಿದ್ದಾರೆ. ಕ್ರಿಕೆಟ ಆಟಗಾರನ ಸಮವಸ್ತ್ರದಲ್ಲಿ ಮಾಡಿದ ಈ ಮೂರ್ತಿಯಲ್ಲಿ ಶ್ರೀ ಗಣಪತಿಯು ಬ್ಯಾಟಿಂಗ್ ಮಾಡುತ್ತಿರುವಂತೆ, ಹಾಗೂ ಅವನ ವಾಹನ ಇಲಿಯು ಬೌಲಿಂಗ್ ಮಾಡುತ್ತಿರುವಂತೆ ತೋರಿಸಲಾಗಿದೆ. ಈ ಹಿಂದೆ ಪ್ರಸಾದ ಇವರು ನೃತ್ಯ ಮಾಡುತ್ತಿದ್ದ ಬಾಲ ಶ್ರೀ ಗಣೇಶನ ಮೂರ್ತಿಯನ್ನು ಮಾಡಿದ್ದರು. ಅದಕ್ಕಾಗಿ, ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪಿಂಟು ಪ್ರಸಾದ ಇವರು ಉಪೇಂದ್ರ ಮಹಾರಥಿ ಶಿಲ್ಪ ಸಂಸ್ಥೆಯಲ್ಲಿ ‘ಸೆರಾಮಿಕ್’ ಕಲೆಯನ್ನು ಕಲಿಸುತ್ತಾರೆ. ಅವರು ಈ ಹಿಂದೆ ಮೊಬೈಲ್‍ನಿಂದ ‘ಸೆಲ್ಫಿ’ ತೆಗೆದುಕೊಳ್ಳುತ್ತಿರುವ ಶ್ರೀ ಗಣೇಶ ಮೂರ್ತಿಯನ್ನೂ ನಿರ್ಮಿಸಿದ್ದರು.

ಪಿಂಟು ಪ್ರಸಾದ ಮಾತನಾಡುತ್ತಾ, 2015 ರಲ್ಲಿ ನಾನು ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಗಣೇಶನ ಮೂರ್ತಿಯನ್ನು ನಿರ್ಮಿಸಿದ್ದೆ. ಈ ಮೂರ್ತಿಗಾಗಿ ರಾಜ್ಯ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಲಾಯಿತು. ಅದರ ನಂತರ ಜನರು ನನ್ನ ಬಳಿ ಶ್ರೀ ಗಣೇಶನ ಮೂರ್ತಿ ನಿರ್ಮಿಸಲು ಬೇಡಿಕೆ ಮಾಡಿದರು. ಇಲ್ಲಿಯವರೆಗೆ, ಅವರು 100 ಕ್ಕೂ ಹೆಚ್ಚು ಶ್ರೀ ಗಣೇಶನ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಪಿಂಟು ಪ್ರಸಾದ ಇವರು ಗಣೇಶನ ಮೂರ್ತಿಗಳಿಂದಾಗಿ ಒಬ್ಬ ವಿಶಿಷ್ಟ ಪರಿಚಯದಿಂದ ಗುರುತಿಸಲ್ಪಡುತ್ತಾರೆ.