ನಾನು ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ ಆಗಿರುವುದರಿಂದ ನಾನು ನನ್ನ ಬಾಂಧವರಿಗೆ ಸಹಾಯ ಮಾಡುವೆನು!(ಅಂತೆ) – ರಾಹುಲ ಗಾಂಧಿ

* ರಾಹುಲ ಗಾಂಧಿಯವರಿಗೆ ಇಷ್ಟು ದಶಕಗಳ ನಂತರ ‘ತಾವು ಕಾಶ್ಮೀರಿ ಪಂಡಿತರಾಗಿದ್ದು ತನ್ನ ಬಾಂಧವರಿಗೆ ಸಹಾಯ ಮಾಡಬೇಕು’, ಎಂಬ ಅರಿವು ನಿರ್ಮಾಣವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಕಾಲದಲ್ಲಿ ರಾಹುಲ ಗಾಂಧಿಯವರು ಅವರ ಕಾಶ್ಮೀರಿ ಬಾಂಧವರಿಗಾಗಿ ಏನು ಸಹಾಯ ಮಾಡಿದ್ದಾರೆ, ಇದಕ್ಕೆ ಉತ್ತರ ಕೊಡುವರೇ ? ಮತ್ತು ಈಗ ಅಧಿಕಾರ ಇಲ್ಲದೆ ಇರುವಾಗ ಅವರು ಏನು ಸಹಾಯ ಮಾಡಲಿದ್ದಾರೆ ? ಎಂಬುದನ್ನು ಸಹ ಅವರು ಹೇಳಬೇಕು !

* ರಾಹುಲ ಗಾಂಧಿ ಅವರ ಈ ಹೇಳಿಕೆಯು ಕಾಶ್ಮೀರಿ ಹಿಂದೂಗಳ ಗಾಯದ ಮೇಲೆ ಬರೆ ಎಳೆದಂತಿದೆ . ನಿಜವಾಗಿಯೂ ಕಾಂಗ್ರೆಸ್‌ಗೆ ಮತ್ತು ಗಾಂಧಿ ಕುಟುಂಬಕ್ಕೆ ಕಾಶ್ಮೀರಿ ಹಿಂದೂಗಳಿಗಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದರೆ, ಅವರು ಅದನ್ನು ಯಾವಾಗಲೋ ಮಾಡುತ್ತಿದ್ದರು; ಕೇವಲ ಮುಸಲ್ಮಾನರನ್ನು ಓಲೈಸಲು ಹಿಂದೂಗಳನ್ನು ನಿರ್ಲಕ್ಷಿಸುವ ಮಾನಸಿಕತೆ ಇರುವುದರಿಂದ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ, ವರ್ತಮಾನ ಮತ್ತು ಭವಿಷ್ಯವಾಗಿದೆ !

ಜಮ್ಮು (ಜಮ್ಮು ಕಾಶ್ಮೀರ) – ನಿನ್ನೆ ನಾನು ವೈಷ್ಣೋದೇವಿಯ ದರ್ಶನ ಪಡೆದೆ. ನಾನು ಜಮ್ಮು-ಕಾಶ್ಮೀರಕ್ಕೆ ಬಂದಾಗಲೆಲ್ಲ ನನಗೆ ನನ್ನ ಮನೆಗೆ ಬಂದಿದ್ದೇನೆ ಎನಿಸುತ್ತದೆ. ನನ್ನ ಕುಟುಂಬವೂ ಕಾಶ್ಮೀರಿ ಪಂಡಿತ ಕುಟುಂಬವೇ ಆಗಿದೆ. ಆದ್ದರಿಂದ ನನಗೆ ಏನು ಹೇಳಬಯಸುವೆನೆಂದರೆ ನಾನು ಏನೆಲ್ಲಾ ಹೇಳುವೆನು ಅದು ಸುಳ್ಳಲ್ಲ. ನನ್ನ ಸಹೋದರರಾಗಿರುವ ಕಾಶ್ಮೀರಿ ಪಂಡಿತರಿಗೆ ನಾನು ಸಹಾಯ ಮಾಡುತ್ತೇನೆ ಎಂದು ಪುಕ್ಕಟೆ ಆಶ್ವಾಸನೆಯನ್ನು ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ ಗಾಂಧಿಯವರು ನೀಡಿದ್ದಾರೆ. ರಾಹುಲ ಗಾಂಧಿಯವರು ಪ್ರಸ್ತುತ ಜಮ್ಮು-ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಅವರು ಜಮ್ಮುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಿದರು. ಆ ಸಮಯದಲ್ಲಿ ಮಾತನಾಡುತ್ತಿದ್ದರು.