ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರವನ್ನು ಪ್ರಸ್ತುತಪಡಿಸಿದ ಭಾರತ ಸರಕಾರ!
ನವದೆಹಲಿ – ಸಂಪೂರ್ಣ ದೇಶದಲ್ಲಿ ಕೊರೊನಾದಿಂದ ಮೃತರಾಗಿರುವ ಜನರ ಮೃತ್ಯು ಪ್ರಮಾಣಪತ್ರದಲ್ಲಿ ಅದನ್ನು ನಮುದಿಸಲಾಗುವುದು. ಭಾರತ ಸರಕಾರವು ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟಿದೆ. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಕಠೋರವಾದದ ಮೇಲೆ 10 ದಿನಗಳ ನಂತರ ಸರಕಾರವು ಈ ಮಾರ್ಗದರ್ಶಕ ಅಂಶಗಳನ್ನು ಜಾರಿಮಾಡಿದೆ.
ಸರಕಾರವು, ಆರೋಗ್ಯ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ(ಐ.ಸಿ.ಎಂ.ಆರ್.) ಇವರ ಹೊಸ ಮಾರ್ಗದರ್ಶಕ ಅಂಶಗಳನ್ನು ಸಿದ್ಧಪಡಿಸಿದೆ ಇದರ ಅಂತರ್ಗತ ಕೊರೊನಾದಿಂದ ಸಂಭವಿಸಿದ ಮೃತ್ಯುವಿಗಾಗಿ ಅಧಿಕೃತ ಕಾಗದ ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದೆ.
Health Ministry, ICMR have issued guidelines for COVID death certificates: Centre tells SC https://t.co/2gk67sDrf3
— Republic (@republic) September 12, 2021
ಮಾರ್ಗದರ್ಶಕ ಅಂಶಗಳು
1. ಯಾವ ರೋಗದ ಆರ್.ಟಿ.ಪಿ.ಸಿ.ಆರ್. ತಪಾಸಣೆ, ರಾಪಿಡ್ ಅಂಟೀಜನ್ ತಪಾಸಣೆ ಅಥವಾ ವೈದ್ಯರಿಂದ ಆಸ್ಪತ್ರೆಯಲ್ಲಿ ಅಥವಾ ಮನೆಯಲ್ಲಿ ತಪಾಸಣೆ ಮಾಡಿದ ನಂತರ ರೋಗಿಗೆ ಕೊರೊನಾ ಸೋಂಕು ತಗಲಿರುವುದು ಕಂಡುಬಂದಲ್ಲಿ, ಇಂತಹ ಜನರು ನಂತರ ಮೃತಪಟ್ಟರೆ, ಅವರ ಮೃತ್ಯು ಪ್ರಮಾಣಪತ್ರದಲ್ಲಿ ಇದನ್ನು ನಮೂದಿಸಲಾಗುವುದು. ವಿಷಬಾಧೆ, ಆತ್ಮಹತ್ಯೆ, ಕೊಲೆ, ಅಥವಾ ಅಪಘಾತ ಸಹಿತ ಇತರ ಕಾರಣಗಳಿಂದ ಆಗಿರುವ ಮೃತ್ಯುವನ್ನು ಕೊರೊನಾಗೆ ಸಂಬಂಧಿತ ಮೃತ್ಯು ಎಂದು ತಿಳಿದುಕೊಳ್ಳಲಾಗದು. ಆ ವ್ಯಕ್ತಿ ಕೊರೊನಾ ಪೀಡಿತರಾಗಿದ್ದರೂ ಸಹ ಇದನ್ನು ಮಾನ್ಯ ಮಾಡಲಾಗುವುದಿಲ್ಲ.
2. ತಪಾಸಣೆಯ ನಂತರ 30 ದಿನಗಳ ಒಳಗೆ ಆಗಿರುವ ಮೃತ್ಯು ಕೊರೊನಾಗೆ ಸಂಬಂಧಪಟ್ಟದ್ದು ಎಂದು ತಿಳಿಯಲಾಗುವುದು. ಆರ್.ಸಿ.ಎಂ.ಆರ್.ನ ಅಭ್ಯಾಸದ ಪ್ರಕಾರ, ಶೇ. 95 ರಷ್ಟು ಮೃತ್ಯು ಯಾವುದಾದರೂ ವ್ಯಕ್ತಿಗೆ ಕೋರೊನಾ ಸಂಕ್ರಮಣದಿಂದ ಆಗಿದ್ದರೆ 25 ದಿನದ ಒಳಗೆ ಆಗುತ್ತದೆ; ಆದರೆ ಈಗ ಕಾನೂನಿನಲ್ಲಿ ಬದಲಾವಣೆ ಮಾಡಿ ಕೊರೊನಾ ಪರೀಕ್ಷಣೆಯ ನಂತರ 30 ದಿನದ ಒಳಗೆ ಆಗಿರುವ ಮೃತ್ಯುವನ್ನು ಕೊರೋನಾಗೆ ಸಂಬಂಧಿತ ಎಂದು ತಿಳಿಯಲಾಗುವುದು. ರೋಗಿಯ ಮೃತ್ಯು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಆಗಿದ್ದರೂ, ಈ ನಿಯಮವು ಅನ್ವಯವಾಗುವುದು.