ಮೆರಠ (ಉತ್ತರಪ್ರದೇಶ) – ಮ. ಗಾಂಧಿಯನ್ನು ಹತ್ಯೆ ಮಾಡಿದ ಪಂಡಿತ ನಾಥೂರಾಮ ಗೋಡ್ಸೆಯವರ ಮೂರ್ತಿಯನ್ನು ಹಿಂದೂ ಮಹಾಸಭಾ ನಿರ್ಮಿಸಿತ್ತು. ಈಗ ಅದೇ ಸಂಘಟನೆಯು ಗಾಂಧಿ ಹತ್ಯೆಯ ಎರಡನೇ ಪ್ರಮುಖ ಆರೋಪಿ ಮತ್ತು ಗಲ್ಲು ಶಿಕ್ಷೆ ಅನುಭವಿಸಿದ ನಾರಾಯಣ ಆಪಟೆಯವರ ಮೂರ್ತಿಯನ್ನು ನಿರ್ಮಿಸಿದೆ. ಶೀಘ್ರದಲ್ಲೇ ಈ ಮೂರ್ತಿಯನ್ನು ಸ್ಥಾಪಿಸಲಾಗುವುದು. ಈ ಮಾಹಿತಿ ಪಡೆದ ಕೂಡಲೇ ಪೊಲೀಸರು ಮೆರಠನಲ್ಲಿರುವ ಹಿಂದೂ ಮಹಾಸಭಾದ ಕಟ್ಟಡವನ್ನು ಸುತ್ತುವರಿದರು. ನಾರಾಯಣ ಆಪಟೆಯವರ ಮೂರ್ತಿ ಸಧ್ಯ ಎಲ್ಲಿದೆ ಎಂಬ ಬಗ್ಗೆ ಪೊಲೀಸರಲ್ಲಿ ಯಾವುದೇ ಮಾಹಿತಿ ಇಲ್ಲ. ಹಿಂದೂ ಮಹಾಸಭೆಯು ಈ ಹಿಂದೆಯೂ ನಾಥೂರಾಮ ಗೋಡ್ಸೆಯ ದೇವಸ್ಥಾನ ಮತ್ತು ಜ್ಞಾನ ಶಾಲೆಯನ್ನು ಸ್ಥಾಪಿಸಿತ್ತು; ಆದರೆ ನಂತರ ಆಡಳಿತ ಕ್ರಮ ತೆಗೆದುಕೊಂಡಿತ್ತು.
1. 2 ತಿಂಗಳ ಹಿಂದೆ ಮಧ್ಯಪ್ರದೇಶದ ದೌಲತಗಂಜದಲ್ಲಿ ಹಿಂದೂ ಮಹಾಸಭಾದ ಒಂದು ದೊಡ್ಡ ಸಭೆ ನಡೆಯಿತು. ಅದರಲ್ಲಿ, ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಜಯವೀರ ಭಾರದ್ವಾಜ ಅವರು ನಾರಾಯಣ ಆಪಟೆಯವರ ಮೂರ್ತಿ ತಯಾರಿಸಲಾಗಿದೆ ಎಂದು ಹೇಳಿದ್ದರು. ‘ಅವಕಾಶ ಸಿಕ್ಕ ತಕ್ಷಣ ಆಪಟೆಯವರ ಮೂರ್ತಿಯನ್ನು ಸ್ಥಾಪಿಸಲಾಗುವುದು’, ಎಂದು ಅವರು ಹೇಳಿದ್ದರು. ಈ ಸಭೆಯಲ್ಲಿ ಅವರು ನಾರಾಯಣ ಆಪಟೆ ಅವರನ್ನು ‘ಹುತಾತ್ಮ’ ಎಂದು ಉಲ್ಲೇಖಿಸಿದ್ದರು. ಈ ಸಮಯದಲ್ಲಿ ಮಹಾಸಭಾದ ಇತರ ಪದಾಧಿಕಾರಿಗಳು ಕೂಡ ಹಾಜರಿದ್ದರು.
2. ಗ್ವಾಲಿಯರ್‍ನಲ್ಲಿ 2 ಅಡಿ ಎತ್ತರದ ನಾರಾಯಣ ಆಪಟೆಯವರ ಮೂರ್ತಿಯನ್ನು ತಯಾರಿಸುವ ಕೆಲಸವನ್ನು 2 ತಿಂಗಳ ಹಿಂದೆ ಆರಂಭಿಸಲಾಗಿತ್ತು. 45 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೂರ್ತಿಯ ಕೆಲಸವನ್ನು 15 ದಿನಗಳ ಹಿಂದೆ ಪೂರ್ಣವಾದ ನಂತರ ಈ ಮೂರ್ತಿಯನ್ನು ಮೆರಠನಲ್ಲಿರುವ ಹಿಂದೂ ಮಹಾಸಭಾ ಭವನಕ್ಕೆ ಪ್ರತಿಷ್ಠಾಪನೆಗಾಗಿ ಕಳುಹಿಸಲಾಗಿತ್ತು.
ಮ. ಗಾಂಧಿ ಹತ್ಯೆಯಲ್ಲಿ ನಾರಾಯಣ ಆಪಟೆ ಅವರ ಸಹಭಾಗ !
ಜನವರಿ 30, 1948 ರಂದು ಮ. ಗಾಂಧಿ ಹತ್ಯೆಯ ಸಮಯದಲ್ಲಿ, ನಾರಾಯಣ ಆಪಟೆ ಇವರು ಪಂಡಿತ್ ನಾಥೂರಾಮ ಗೋಡ್ಸೆಯವರ ಹಿಂದೆ ನಿಂತಿದ್ದರು. ಈ ಹತ್ಯೆಯ ಪ್ರಕರಣದಲ್ಲಿ ನ್ಯಾಯಾಲಯವು ಫೆಬ್ರವರಿ 10, 1949 ರಂದು ಪಂಡಿತ ನಾಥೂರಾಮ ಗೋಡ್ಸೆ ಜೊತೆಗೆ ಆಪಟೆ ಇವರಿಗೂ ಗಲ್ಲು ಶಿಕ್ಷೆ ವಿಧಿಸಿತ್ತು. ಉಳಿದ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.